fbpx
ಸಮಾಚಾರ

ಸರ್ಕಾರದಿಂದ ವಿಜಯನಗರ ಸಾಮ್ರಾಜ್ಯದ ನಿಧಿ ಶೋಧ..!

ಸರ್ಕಾರದಿಂದ ವಿಜಯನಗರ ಸಾಮ್ರಾಜ್ಯದ ನಿಧಿ ಶೋಧ..!

 

 

ಈ ಕೋಟೆಯಲ್ಲಿ ಪೋಲೀಸರ ಸರ್ಪಗಾವಲಿನ ನಡುವೆ ಸರ್ಕಾರೀ ಅಧಿಕಾರಿಗಳ ಸಮ್ಮುಖದಲ್ಲೇ ನಿಧಿಯ ಬೇಟೆ ನಡೆಯುತ್ತಿದೆ..ಅದುವೇ ಆಂಧ್ರ ಪ್ರದೇಶದ ಕೋಟೆ ನಿಧಿ ಶೋಧ ನಡೆಯುತ್ತಿರುವ ಈ ಕೋಟೆ 103 ಮೂರು ಎಕರೆ ವಿಸ್ತಾರವಿದ್ದು ಈ ಕೋಟೆ ವೈಭವದ ವಿಜಯನಗರ ಸಾಮ್ರಾಜ್ಯದ ವಶದಲ್ಲಿತ್ತು. ಈ ಕೋಟೆಯಲ್ಲಿ ಈಗಲ್ಲಿ ವಿಜಯ ನಗರ ಸಾಮ್ರಾಜ್ಯಕ್ಕೆ ಸೇರಿದ ನಿಧಿಯನ್ನು ಶೋಧನಡೆಸುವಂತೆ ಸರ್ಕಾರಿ ಅಧಿಕಾರಿಗಳೇ ಸೂಚಿಸಿದ್ದಾರೆ.

 

 

ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನು ಮಾರಾಟಮಾಡುತ್ತಿದ್ದಂತಹ ವಿಜಯನಗರ ಸಾಮ್ರಾಜ್ಯದ ಮುತ್ತು, ರತ್ನ, ವಜ್ರ ವೈಡೂರ್ಯಗಳನ್ನು ಈ ಕೋಟೆಯಲ್ಲಿ ಹೂತಿಡಲಾಗಿದೆಯಂತೆ. ಬಳ್ಳಾರಿಯ ಶಿರಗೊಪ್ಪದಿಂದ ಕೇವಲ 45 ಕಿಲೋ ಮೀಟರ್ ದೂರವಿರುವ ಈ ಕೋಟೆಯಲ್ಲಿ ವಿಜಯ ನಗರ ಸಾಮ್ರಾಜ್ಯಕ್ಕೆ ಸೇರಿದ ನಿಧಿ ಇದೇ ಎಂಬುದು ಈ ಊರಿನ ಸಾರ್ವಜನಿಕರ ನಂಬಿಕೆಯಾಗಿತ್ತು. ಇದನ್ನು ಸ್ವತಃ ಪುರಾತತ್ವ ಇಲಾಖೆಯೇ ಧೃಡೀಕರೀಸಿದೆ. ಹಾಗಾಗಿ ಸರ್ಕಾರವೇ ಮುಂದೆ ನಿಂತುಕೊಂಡು ನಿಧಿ ಶೋಧ ಕಾರ್ಯವನ್ನು ಮಾಡುತ್ತಿದೆ.

 

 

ಕೋಟೆಯಲ್ಲಿ ನಿಧಿ ಶೋಧ ಕಾರ್ಯದ ವಿರುದ್ಧ ಪ್ರತಿಭಟನೆ ಮಾಡಿದ ಗ್ರಾಮಸ್ಥರಿಗೆ “ಒಂದು ವೇಳೆ ನಿಧಿ ಸಿಕ್ಕಿದರೆ ಊರಿನ ಪ್ರತಿ ಮನೆಗೂ ಒಂದೊಂದು ಬೊಗಸೆ ಬಂಗಾರವನ್ನು ನೀಡುತ್ತೇವೆ” ಪುರಾತತ್ವ ಇಲಾಖೆ ತಿಳಿಸಿದೆ. ಹಾಗಾಗಿ ಆದಷ್ಟು ಬೇಗ ನಿಧಿ ಸಿಗಲಿ ಎಂದು ಗ್ರಾಮಸ್ಥರು ಕೂಡ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯುತ್ತಿದ್ದಾರೆ. ಕಳೆದ ಒಂದು ವಾರದಿಂದ ನಿಧಿ ಶೋಧ ಕಾರ್ಯ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ನಿಧಿ ಪತ್ತೆಯಾಗಿಲ್ಲ. ಆದರೆ ಕಳೆದ ಸೋಮವಾರ ಕೆಲವು ಇಟ್ಟಿಗೆಗಳು ಮತ್ತು ಸುತ್ತಿನ ಆಕಾರದ ಗಟ್ಟಿ ವಸ್ತುಗಳು ಕೋಟೆಯಲ್ಲಿ ಸಿಕ್ಕಿದ್ದು ಶೋಧ ಕಾರ್ಯ ಮುಂದುವರೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top