fbpx
ಧರ್ಮ

ಸ್ವರ್ಗವಾಸಿಯಾದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ

ಸ್ವರ್ಗವಾಸಿಯಾದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ

ನಾಂದಣಿಯ ಶ್ರೀ ಮಠದಲ್ಲಿ ಸಾಕುತ್ತಿದ್ದ ಹೊಸ ಮರಿ ಆನೆಗೆ ಮಾವುತ ಹಸಿ ಮೇವು ತರಲು ಹೋಗಿ ಬಹಳ  ಸಮಯವಾದರೂ ಬರದಿದ್ದನ್ನು ಕಂಡು ಮರುಗಿದ ಸ್ವಾಮೀಜಿಯವರು ತಾವೇ ಕುದ್ದಾಗಿ ಆ ಆನೆಗೆ ಮೇವನ್ನು ನೀಡಲುಹೋದಾಗ ಸೊಂಡಿಲಿನಲ್ಲಿ ಹಿಡಿದುಕೊಂಡು ಮೂರು-ನಾಲ್ಕು ಭಾರಿ ಅಪ್ಪಳಿಸಿದೆ. ಈ ದುರಂತ ಘಟನೆಯಿಂದ ನಾಂದಣಿಯ ಶ್ರೀ ಜೈನ ಮಠದ ಪ.ಪೂ.ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಇಂದು 21-12-17 ಗುರುವಾರ ಸಾಯಂಕಾಲ 5 ಘಂಟೆ ಸಮಯಕ್ಕೆ  ಸ್ವರ್ಗಗತರಾಗಿರುತ್ತಾರೆ.

ಶುಕ್ರವಾರ ದಿನಾಂಕ 22 /12 /2017 ರಂದು ಅಂತಿಮ ವಿಧಿವಿಧಾನ ನಡೆಯಲಿದೆ

ಮಹಾರಾಷ್ಟ್ರದ ಶಿರೋಳ್ ತಾಲೂಕಿನ ಶಿರಗಾವ ಗ್ರಾಮದಲ್ಲಿ ಜನಿಸಿದ ಶ್ರೀಗಳು ಜನಿಸಿದ್ದರು. ಜೀನಗೌಡ ಈಟಗೌಡ ಪಾಟೀಲ ಇವರ ಮೂಲ ಹೆಸರು. ದೇಶಭೂಷಣ ಮಹಾರಾಜರಿಂದ ಭಟ್ಟಾರಕ ದೀಕ್ಷೆ ಪಡೆದಿದ್ದರು. ಕನ್ನಡ ಭಾಷೆಯಲ್ಲಿ ಪ್ರವೀಣರಾಗಿದ್ದರು. ಇವರು ಅನೇಕೆ ಜೈನ ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದಾರೆ.

ಶ್ರೀಗಳ ನಿಧನದಿಂದ ಜೈನ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಅಪಾರ ಜನಸ್ತೋಮ ಕಂಬನಿ ಮಿಡಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top