fbpx
ಮನೋರಂಜನೆ

ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಮೇಲೆ ಲೈಂಗಿಕ ಆರೋಪ: ಸತ್ಯ ಬಾಯ್ಬಿಟ್ಟ ಮಂಡ್ಯ ರಮೇಶ್.

ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಮೇಲೆ ಲೈಂಗಿಕ ಆರೋಪ: ಸತ್ಯ ಬಾಯ್ಬಿಟ್ಟ ಮಂಡ್ಯ ರಮೇಶ್.

 

 

ಇದು ಎಂಥವರೂ ಒಂದರೆ ಕ್ಷಣ ಗಾಬರಿ ಬೀಳುವಂಥಾ ಶಾಕಿಂಗ್ ನ್ಯೂಸ್. ಬಹುಶಃ ಮೈಸೂರಿನ ದಿಕ್ಕಿನಿಂದ ಕೇಳಿ ಬಂದಿರೋ ಅಮಾಯಕ ಹೆಣ್ಣುಮಗಳೊಬ್ಬಳ ಆರ್ತನಾದ ಕೇವಲ ಮಸಾಜ್ ಸೆಂಟರ್ ಒಂದರ ಸೆಕ್ಸ್ ದಂಧೆಯ ಸುತ್ತಾ ಗಿರಕಿ ಹೊಡೆದಿದ್ದರೆ ಅದು ಅಲ್ಲಿಯೇ ಅಂತರ್ಧಾನ ಹೊಂದಿ ಹೋಗುತ್ತಿತ್ತೇನೋ. ಆದರೆ ಬ್ಯೂಟಿಷಿಯನ್ ಕೆಲಸ ಮಾಡಲು ಹೋಗಿ ಕಾಮ ಕೂಪಕ್ಕೆ ಬಿದ್ದ ಆ ಹೆಣ್ಣುಮಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದವರ ಹೆಸರು ಹೇಳಿದ್ದಾಳಲ್ಲ? ಅದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಮೇಡಿಯನ್ ಕಂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಮತ್ತು ರಂಗಭೂಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಹೆಸರುಗಳೂ ಸೇರಿಕೊಂಡಿವೆ!

 

 

ಸ್ಪಾಗಳ ಹೆಸರಲ್ಲಿ ಇಂಥಾ ದಂಧೆ ನಡೆಯೋದು ಮತ್ತು ಅಮಾಯಕ ಹುಡುಗೀರು ಅದಕ್ಕೆ ಬಲಿಯಾಗೋದು ನಡೆಯುತ್ತಲೇ ಬಂದಿದೆ. ಆದರೆ ಜನ ಪ್ರೀತಿ ಗಳಿಸಿಕೊಂಡಿರೋ ಸಾಧು ಕೋಕಿಲಾ ಮತ್ತು ಮಂಡ್ಯಾ ರಮೇಶ್ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿರೋದು ನಿಜಕ್ಕೂ ಶಾಕಿಂಗ್ ವಿಚಾರ. ಇಂಥಾ ಸವಿವರ ಮಾಹಿತಿಯನ್ನು ಒಡನಾಡಿ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿರೋ ಈ ಹುಡುಗಿ ಚಿತ್ರ ನಟರಾದ ಸಾಧು ಕೋಕಿಲಾ ಮತ್ತು ಮಂಡ್ಯಾ ರಮೇಶ್ ಕೂಡಾ ತನ್ನಿಂದ ಮಸಾಜ್ ಸೇವೆ(?) ಮಾಡಿಸಿಕೊಂಡಿದ್ದಾರೆ ಅನ್ನೋ ಮೂಲಕ ಭಯಾನಕ ಬಾಂಬು ಸಿಡಿಸಿದ್ದಾಳೆ.

 

 

ಆ ಆರೋಪದ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಮಾನ್ಯ ರಮೇಶ್ ” ನನ್ನ ಮೇಲೆ ಆ ಹುಡುಗಿ ಆರೋಪ ಮಾಡುತ್ತಿರುವುದು ಸುಳ್ಳು, ಈ ಅಪಾದನೆ ನನಗೆ ನೋವುಂಟು ಮಾಡಿದೆ.ಹೆಣ್ಣುಮಕ್ಕಳ ಜೊತೆ ನಾನು ಎಂದೂ ಹೀಗೆ ನಡೆದುಕೊಂಡೇ ಇಲ್ಲ.”

‘ಆ ಮಸಾಜ್ ಸೆಂಟರ್ ಓಪನಿಂಗ್ ಮಾಡಿದ್ದೂ ನಾನೇ ಅದರ ಮಾಲಿಕ ನನಗೆ ಗೊತ್ತು, ಆದರೆ ಅಲ್ಲಿ ಈ ರೀತಿ ಚಟುವಟಿಕೆ ನಡೆಯುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ನಾನು ಆ ಮಸಾಜ್ ಪಾರ್ಲರ್ ನಲ್ಲಿ ಒಂದು ಬಾರಿ ಮಾತ್ರ ಹೋಗಿ ಕಟಿಂಗ್ ಮಾಡಿಸಿಕೊಂಡು ಬಂದಿದ್ದೆ ಹೊರತು ಅಸಭ್ಯವಾಗಿ ವರ್ತಿಸಿಲ್ಲ” ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top