fbpx
Food

ಅಲ್ಲಿ ಇಲ್ಲಿ ತಿಂದು ಆರೋಗ್ಯ ಹಾಳು ಮಾಡ್ಕೊಳ್ಳೋ ಬದಲು ಮನೆಯಲ್ಲೇ ಮಾಡಿ ರುಚಿರುಚಿ ಗರಿಗರಿಯಾದ ಮಸಾಲೆ ವಡೆ

ಅಲ್ಲಿ ಇಲ್ಲಿ ತಿಂದು ಆರೋಗ್ಯ ಹಾಳು ಮಾಡ್ಕೊಳ್ಳೋ ಬದಲು ಮನೆಯಲ್ಲೇ ಮಾಡಿ ರುಚಿರುಚಿ ಗರಿಗರಿಯಾದ

ಮಸಾಲೆ ವಡೆ 

 

 

ಮಸಾಲೆ ವಡೆ :
೧.೧ ಕಪ್ ಕಡ್ಲೆ ಬೆಳೆ
೨.೨ ಈರುಳ್ಳಿ
೩.೨ ಚಮಚ ಅಕ್ಕಿಹಿಟ್ಟು
೪.ಸ್ವಲ್ಪ ಕೊತಂಬರಿ ಸೊಪ್ಪು
೫.ಸ್ವಲ್ಪ ಕರಿಬೇವಿನ ಸೊಪ್ಪು
೬.ಸ್ವಲ್ಪ ಸಬ್ಬಕ್ಕಿ ಸೊಪ್ಪು
೭.ಬೆಳ್ಳುಳ್ಳಿ ೪ ಹೆಸಲು
೮.ಶುಂಠಿ ಸ್ವಲ್ಪ
೯.ಹಸಿ ಮೆಣಸಿನ ಕಾಯಿ
೧೦.ಸ್ವಲ್ಪ ಜೀರಿಗೆ ,ಕರಿ ಮೆಣಸು ,ಲವಂಗ .
೧೧.ಉಪ್ಪು ರುಚಿಗೆ
೧೨.ಎಣ್ಣೆ

 

 

ಮಾಡುವ ವಿಧಾನ:

ಮೊದಲು ಒಂದು ಕಪ್ ಕಡ್ಲೆ ಬೆಳೆಯನ್ನು ಚೆನ್ನಾಗಿ ೧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು ನಂತರ ನೆನೆದ ಕಡ್ಲೆ ಬೆಳೆಯನ್ನು ಚೆನ್ನಾಗಿ ರುಬ್ಬಿಕೊಂಡು ಪಕ್ಕದಲ್ಲಿ ಇರಿಸಿಕೊಳ್ಳಬೇಕು .
ನಂತರ ಸ್ವಲ್ಪ ಜೀರಿಗೆ ,ಕರಿ ಮೆಣಸು ,ಲವಂಗ ,ಶುಂಠಿ ,ಬೆಳ್ಳುಳ್ಳಿ ೪ ಹೆಸಲು,ಹಸಿ ಮೆಣಸಿನ ಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು .
ರುಬ್ಬಿಕೊಂಡ ಎರಡು ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ೨ ಚಮಚ ಅಕ್ಕಿಹಿಟ್ಟು,ಸ್ವಲ್ಪ ಕೊತಂಬರಿ ಸೊಪ್ಪು ,ಸ್ವಲ್ಪ ಕರಿಬೇವಿನ ಸೊಪ್ಪು ಮತ್ತು ಸ್ವಲ್ಪ ಸಬ್ಬಕ್ಕಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.
ಕಲಸಿಕೊಂಡ ನಂತರ ಅದನ್ನು ಚಪಟ್ಟೆ ಆಕಾರದಲ್ಲಿ ಮಾಡಿಕೊಂಡು ಎಣ್ಣೆಯಲ್ಲಿ ಕರಿದುಕೊಳ್ಳಬೇಕು.
ತುಂಬಾ ಸುಲಭ ವಿಧಾನದಲ್ಲಿ ಮಸಾಲೆ ವಡೆ ಮಾಡಿಕೊಂಡು ತಿನ್ನಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top