fbpx
ದೇವರು

ನೆಲ್ಲಿತೀರ್ಥ ದೇವಾಲಯಕ್ಕೆ ಹೋದ್ರೆ ಸಕಲ ಕಷ್ಟಗಳು ಪರಿಹಾರ ಆಗೋದ್ರಲ್ಲಿ ಸಂದೇಹನೆ ಇಲ್ಲ ಆದ್ರೆ ಇಲ್ಲಿ ಕೇವಲ 6 ತಿಂಗಳು ಅಂದ್ರೆ ಅಕ್ಟೋಬರ್ ನಿಂದ ಮಾರ್ಚ್ ವರಿಗೂ ಮಾತ್ರ ಪ್ರವೇಶ

ನೆಲ್ಲಿತೀರ್ಥ ದೇವಾಲಯಕ್ಕೆ ಹೋದ್ರೆ ಸಕಲ ಕಷ್ಟಗಳು ಪರಿಹಾರ ಆಗೋದ್ರಲ್ಲಿ ಸಂದೇಹನೆ ಇಲ್ಲ ಆದ್ರೆ ಇಲ್ಲಿ ಕೇವಲ 6 ತಿಂಗಳು ಅಂದ್ರೆ ಅಕ್ಟೋಬರ್ ನಿಂದ ಮಾರ್ಚ್ ವರಿಗೂ ಮಾತ್ರ ಪ್ರವೇಶ.

ಈ ನೆಲ್ಲಿತೀರ್ಥ ದೇವಾಲಯಕ್ಕೆ ೬ ತಿಂಗಳುಗಳ ಮಾತ್ರ ಪ್ರವೇಶ ಅನುಮತಿ ಇದೆ.

 

 

ನಮ್ಮ ದೇಶ ದೇವಾಲಯಗಳಿಗೆ ಪ್ರಸಿದ್ದಿ ,ಅಂತಹ ತುಂಬಾ ಪ್ರಾಮುಖ್ಯತೆ ಹೊಂದಿದ ಒಂದು ದೇವಾಲಯ ನೆಲ್ಲಿತೀರ್ಥ ,ಈ ದೇವಾಲಯ ೧೪೮೦ ಕ್ಕಿಂತ ಮುಂಚೆ ಕಟ್ಟಿರುವುದು ,ಈ ಗುಹೆಯಲ್ಲಿ ಇರುವ ದೇವಾಲಯಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬರಲು ಕಾರಣ ಗುಹೆಯಲ್ಲಿ ತೆಂಗಿನ ನೀರಿನ ಒಂದು ನದಿ ಇರುವುದು ,ತಮಿಳಿನಲ್ಲಿ ನೆಲ್ಲಿ ಎಂದರೆ ಕೊಬ್ಬರಿ ಹೀಗೆ ಈ ದೇವಾಲಯಕ್ಕೆ ನೆಲ್ಲಿತೀರ್ಥ ಎಂದು ಹೆಸರು ಬಂತು .

ಈ ದೇವಾಲಯದ ಸ್ಥಳ ಪುರಾಣದ ಪ್ರಕಾರ ಅರುಣಾಸುರ ಎಂಬ ರಾಕ್ಷಸ ಜಾಬಿಲಿ ಎಂಬ ಋಷಿಯ ಹತ್ತಿರ ಪವಿತ್ರವಾದ ಗಾಯತ್ರಿ ಮಂತ್ರವನ್ನು ಪಠಿಸುತ್ತಿದನಂತೆ,ಶಕ್ತಿಯನ್ನು ಹೊಂದಿದ ಅರುಣಾಸುರ ಗಾಯತ್ರಿ ಮಂತ್ರವನ್ನು ದುರುಪಯೋಗ ಮಾಡಲು ಪ್ರಯತ್ನ ಮಾಡುತ್ತಾನೆ ,ತಪ್ಪಿಸಿನಲ್ಲಿ ಇದ್ದ ಜಾಬಿಲಿ ಋಷಿಗೆ ಈ ವಿಷಯ ಗೊತ್ತಿರುವುದಿಲ್ಲ ನಂತರ ಅರುಣಾಸುರ ಮಾಡುತ್ತಿರುವ ಎಲ್ಲ ಕೆಲಸಗಳನ್ನು ನಾರದ ಮಹಷಿ ಜಾಬಿಲಿ ಋಷಿಯ ಹತ್ತಿರ ಹೇಳುತ್ತಾನೆ .ವಿಷಯ ತಿಳಿದ ಜಾಬಿಲಿ ಋಷಿ ಅರುಣಾಸುರ ಮಾಡುತ್ತಿರುವಂತ ಕೆಟ್ಟ ಕೆಲಸಗಳನ್ನು ನಿಲ್ಲಿಸಿ ಅವನಿಗೆ ಒಳ್ಳೆ ಪಾಠ ಕಲಿಸಬೇಕು ಎಂದು ನಿರ್ಧಾರ ಮಾಡುತ್ತಾನೆ.
ಒಂದು ಗುಹೆಯಲ್ಲಿ ಜಾಬಿಲಿ ಋಷಿ ದುರ್ಗಾ ದೇವಿಯ ಕುರಿತು ತಪ್ಪಸ್ಸು ಮಾಡುತ್ತಾನೆ ,ಆಗ ದುರ್ಗಾದೇವಿ ಬಂದು ಏನು ವರ ಬೇಕು ಎಂದು ಕೇಳುವಂತೆ ಜಾಬಿಲಿ ಋಷಿಯನ್ನು ಕೇಳಿದಾಗ ಜಾಬಿಲಿ ಋಷಿ ಅರುಣಾಸುರ ಮಾಡುತ್ತಿರುವ ಎಲ್ಲ ಕೆಟ್ಟ ಕೆಲಸಗಳನ್ನು ಹೇಳಿ ಅವನನ್ನು ಸಂಹಾರ ಮಾಡುವಂತೆ ಕೇಳುತ್ತಾನೆ,ಆ ಸ್ಥಳವೇ ನೆಲ್ಲಿತೀರ್ಥ ಎಂದು ಹೆಸರು ಪಡೆಯಿತ್ತು.

 

 

ಗಾಯತ್ರಿ ಮಂತ್ರವನ್ನು ದುರುಪಯೋಗ ಮಾಡಿಕೊಂಡ ಅರುಣಾಸುರನನ್ನು ದುರ್ಗಾದೇವಿ ನಂದಿನಿ ಎಂಬ ನದಿಯ ತೀರಾದಲ್ಲಿ ಸಂಹಾರ ಮಾಡುತ್ತಾಳೆ,ಆದರಿಂದ ಈ ಸ್ಥಳದಲ್ಲಿ ದುರ್ಗಾ ಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.

ಈ ದೇವಾಲಯವನ್ನು ಕಟೀಲು ಎಂದು ಕೂಡ ಕರೆಯುತ್ತಾರೆ ಮತ್ತು ಕರ್ನಾಟಕದ ಮಂಗಳೂರಿನಲ್ಲಿ ಪ್ರಾಮುಖ್ಯತೆ ಪಡೆದಿದೆ,ಇಲ್ಲಿನ ಸೋಮನಾಥ ಲಿಂಗ ಸ್ವಚ್ಛವಾದ ಸಾಲಿಗ್ರಾಮದಿಂದ ಮಾಡಲಾಗಿದೆ,ಇಲ್ಲಿನ ಲಿಂಗ ಅರ್ಧನಂದೀಶ್ವರ ಎಂಬ ಹೆಸರಿನಲ್ಲಿ ಪೂಜೆ ಗಳನ್ನೂ ಸ್ವೀಕರಿಸುತ್ತಿದೆ .

ಈ ದೇವಾಲಯದಲ್ಲಿ ಇನ್ನೊಂದು ಸುಂದರವಾದ ಅಂಶವೆಂದರೆ ಗುಹೆ ,ದೇವಾಲಯದ ಉತ್ತರ ದಿಕ್ಕಿಗೆ ಇರುವ ಕೊಳ್ಳ ನಾಗಕೊಳ್ಳ ಗುಹೆ ಒಳ್ಳಗೆ ಹೋಗುವ ಮುನ್ನ ಎಲ್ಲ ಈ ಕೊಳ್ಳದಲ್ಲಿ ಸ್ನಾನ ಮಾಡಿಕೊಂಡು ಹೋಗುತ್ತಾರೆ .

 

ಸಂಬಂಧಿತ ಚಿತ್ರ

 

ಅರಸೊಲೊ ಮಂಚ ಎಂಬ ರಾಜ ದೇವಾಲಯದ ಮುಖ್ಯ ಪ್ರವೇಶ ದ್ವಾರದ ಉತ್ತರ ದಿಕ್ಕಿನಲ್ಲಿ ಕುಳಿತು ಕೊಂಡಿರುವನೆಂದು ಇತಿಹಾಸ ಪುರಾಣಗಳು ಹೇಳುತ್ತದೆ ,ರಾತ್ರಿಯ ಸಮಯದಲ್ಲಿ ಯಾರು ಈ ಪ್ರದೇಶದಲ್ಲಿ ಓಡಾಡುವುದಿಲ್ಲವಂತೆ ಇದಕ್ಕೆ ಕಾರಣ ಆ ರಾಜನ ಆತ್ಮ ಆ ಸಮಯದಲ್ಲಿ ಓಡಾಡುತಿರುವುದಂತೆ.

ಈ ದೇವಾಲಯದ ಇನ್ನೊಂದು ವಿಶೇಷ ವರ್ಷದಲ್ಲಿ ೬ ತಿಂಗಳು ಮಾತ್ರ ಈ ದೇವಾಲಯ ತೆರೆಯಲಾಗುತ್ತದೆ ಅಂತೆ,ಅಕ್ಟೋಬರ್ ನಿಂದ ಮಾರ್ಚ್ ವರಿಗೂ ಮಾತ್ರ ತೆರೆಯಲಾಗುತ್ತದೆ ,ಇನ್ನು ಉಳಿದ ೬ ತಿಂಗಳು ಬರಿ ಋಷಿಮುನಿಗಳಿಗೆ ಮಾತ್ರ ಪ್ರವೇಶವಂತೆ

 

ನೆಲ್ಲಿತೀರ್ಥ ದೇವಾಲಯ ಗೆ ಚಿತ್ರದ ಫಲಿತಾಂಶ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top