fbpx
ಆರೋಗ್ಯ

ಏನೆ ಮಾಡಿದ್ರು ಸಕ್ಕರೆ ಖಾಯಿಲೆ ಕಡಿಮೆ ಆಗ್ತಿಲ್ಲ ಅನ್ನೋರು ಈ ರಸವನ್ನು ನಿಯಮಿತವಾಗಿ ಕುಡಿಯುತ್ತಾ ಬಂದ್ರೆ ಖಾಯಿಲೆ ಮಾರು ದೂರ ಓಡೋಗುತ್ತೆ

ಇಂದಿನ ದಿನಗಳಲ್ಲಿ ಡಯಾಬಿಟೀಸ್‌ ಅಥವಾ ಮಧುಮೇಹ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಇದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೆ ಬೇಕಾದರೂ ಈ ತೊಂದರೆ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವ ಈ ಕಾಯಿಲೆಯು ವಂಶಪಾರಂಪರ್ಯವಾಗಿಯೂ ಬರಬಹುದು.

 

 

ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ಸಾಮಾನ್ಯವಾಗಿ ಮಧುಮೇಹ ದಿಂದ ಬಳಲುತ್ತಿರುವವರು ಮೆಡಿಸಿನ್ ಮೂಲಕ ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಕಾರಣ ಮಧುಮೇಹ ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗುವುದಿಲ್ಲ. ದುಡ್ಡು ಇದ್ದವರಿಗೆ ಸರಳವಾದ ಮಾರ್ಗ ಏನೆಂದರೆ ಮೆಡಿಸಿನ್ ಮೂಲಕ ಕಂಟ್ರೋಲ್ ಮಾಡುವುದು, ದುಡ್ಡು ಎಲ್ಲದವರಿಗೆ ಇಲ್ಲಿದೆ ಒಂದು ಸರಳ ಉಪಾಯ.

ಮೊದಲು ಈ ಕಾಯಿಲೆಯ ಪ್ರಮುಖ ಲಕ್ಷಣಗಳೆನೆಂದು ತಿಳಿಯೋಣ:

  • ಪದೇ ಪದೇ ಮೂತ್ರವಿಸರ್ಜಿಸುವುದು,
  • ತೀವ್ರವಾಗಿ ಬಾಯಾರಿಕೆ ಹಾಗು ಹಸಿವಾಗುವುದು,
  • ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ,
  • ಆಯಾಸ,
  • ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು.

 

ಏನೆ ಮಾಡಿದ್ರು ಸಕ್ಕರೆ ಖಾಯಿಲೆ ಕಡಿಮೆ ಆಗ್ತಿಲ್ಲ ಅನ್ನೋರು ಈ ರಸವನ್ನು ನಿಯಮಿತವಾಗಿ ಕುಡಿಯುತ್ತಾ ಬಂದ್ರೆ ಖಾಯಿಲೆ ಮಾರು ದೂರ ಓಡೋಗುತ್ತೆ

ಮಧುಮೇಹ ನಿಯಂತ್ರಣಕ್ಕೆ ಅರ್ಧ ಹಿಡಿ ಹಾಗಲಕಾಯಿಯ ರಸವನ್ನು ತೆಗದುಕೊಂಡು ದಿನಕ್ಕೆ ಎರಡು ಬಾರಿ ಕುಡಿದರೆ ಒಳ್ಳೆಯದು
ವಿಟಮಿನ್ ಎ ಹಾಗು ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ .

ಬೇಕಾಗುವ ಪದಾರ್ಥಗಳು :

ಹಾಗಲಕಾಯಿ:

 

 

ಹಾಗಲಕಾಯಿಯು ಆಹಾರ ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆಂದು ಹೇಳಲಾಗುತ್ತದೆ. ಅಲ್ಲದೇ ಈ ರೀತಿಯಾಗಿ ಅಜೀರ್ಣ ಹಾಗು ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿಯಾಗಿದೆ. ಈ ಋಣಾತ್ಮಕ ಪರಿಣಾಮಗಳು, ಶಮನಕಾರಿ ಹಾಗು ತೀಕ್ಷ್ಣವಲ್ಲದ ಉರಿಯೂತ ಮಾಡ್ಯೂಲೇಟರ್ ಆಗಿ ಇದರ ಕಾರ್ಯವು ಬಹಳ ಸೀಮಿತವಾಗಿದೆ

ಹಾಗಲಕಾಯಿಯು ಡಯಾಬಿಟಿಸ್ ಮೆಲ್ಲಿಟಸ್ ಟೈಪ್ ೨ವನ್ನು ತಡೆಗಟ್ಟಲು ಅಥವಾ ಅದನ್ನು ನಿಷ್ಫಲಗೊಳಿಸಲು ಸಹಾಯಕವಾಗಿದೆಯೆಂದು ಜನಪದೀಯ ಚಿಕಿತ್ಸಾ ವಿಧಾನದ ಜ್ಞಾನವು ಸೂಚಿಸುತ್ತದೆ. ಪನಾಮಾದ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ, ಈ ಉದ್ದೇಶಕ್ಕಾಗಿ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ.

ಶುಂಠಿ:

 

 

ಶುಂಠಿಯ ರಸವನ್ನು ಮೂಗಿಗೆ ಬಿಡುವುದರಿಂದ ಮೂರ್ಛೆ ರೋಗಕ್ಕೆ ಒಳ್ಳೆಯದು.
ಶುಂಠಿ ರಸಕ್ಕೆ ಸೈಂಧವ ಲವಣ ಬೆರೆಸಿ ಭೋಜನದ ಮೊದಲು ಸೇವಿಸಿದರೆ ಅಗ್ನಿ ವೃದ್ಧಿಯಾಗಿ ನಾಲಿಗೆಯ ರುಚಿ ಹೆಚ್ಚುತ್ತದೆ.

ಶುಂಠಿಯ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿಕೊಟ್ಟರೆ ಜ್ವರದಿಂದ ಬಳಲುತ್ತಿರುವವರಿಗೆ ಒಳ್ಳೆಯದು.
ಶುಂಠಿ ಪುಡಿಗೆ ನಿಂಬೆರಸ ಮತ್ತು ಸೈಂಧವ ಲವಣ ಸೇರಿಸಿ ಸೇವಿಸುವುದರಿಂದ ಅರುಚಿಗೆ ಒಳ್ಳೆಯದು.

ಶುಂಠಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ, ಕುದಿಸಿ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಬಲಹೀನತೆ ದೂರವಾಗುತ್ತದೆ.

ನಿಂಬೆಹಣ್ಣು:

 

 

ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ, ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ನಿಂಬೆಹಣ್ಣು ಕೂಡ ಒಂದು. ದೇಹ ತಂಪಾಗಿಸಲು ಮನೆಯಲ್ಲಿ ಶರಬತ್ ಮಾಡಿ ಕುಡಿಯುವುದು ಎಲ್ಲರಿಗೂ ಗೊತ್ತು. ಆದರೆ ಇದರಿಂದ ಇನ್ನೂ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಲಿ೦ಬೆಹಣ್ಣುಗಳಲ್ಲಿ ಫ್ಲೇವನಾಯ್ಡ್ (flavonoid) ಗಳೆ೦ಬ ರಾಸಾಯನಿಕಗಳಿದ್ದು, ಅವು ಆ೦ಟಿ ಆಕ್ಸಿಡೆ೦ಟ್ ಹಾಗೂ ಕ್ಯಾನ್ಸರ್ ರೋಗದ ವಿರುದ್ಧ ಸೆಣಸಾಡುವ ಗುಣಲಕ್ಷಣಗಳನ್ನು ಹೊ೦ದಿರುವ ಘಟಕಗಳನ್ನೊಳಗೊ೦ಡಿವೆ.

ಮಾತ್ರವಲ್ಲದೇ, ಲಿ೦ಬೆ ಹಣ್ಣು ಮಧುಮೇಹ, ಮಲಬದ್ಧತೆ, ಅಧಿಕ ರಕ್ತದೊತ್ತಡ, ಜ್ವರ, ಅಜೀರ್ಣತೆ, ಮತ್ತು ಇನ್ನೂ ಅನೇಕ ಇತರ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಲಿ೦ಬೆಯು ತ್ವಚೆ, ಕೂದಲು, ಹಾಗೂ ಹಲ್ಲುಗಳ ಆರೋಗ್ಯ ವೃದ್ಧಿಸುತ್ತದ.

ತಯಾರಿಸುವ ವಿಧಾನ :

 

 

ಅರ್ಧ ಬಟ್ಟಲು ಹಾಗಲಕಾಯಿ , ಒಂದು ಚಮಚ ನಿಂಬೆ ರಸ ಮತ್ತು ಅರ್ಧ ಚಮಚ ಶುಂಠಿ ಸೇರಿಸಿ ಈ ಮಿಶ್ರಣಕ್ಕೆ ಒಂದು ಲೋಟ ನೀರನ್ನು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು
ನಂತರ ಈ ಮಿಶ್ರಣವನ್ನು ಸೋಸಿಕೊಂಡು ದಿನ ಬೆಳಗ್ಗೆ ಹಾಗು ರಾತ್ರಿ ಎರಡು ಬಾರಿ ಸೇವಿಸಿದರೆ ಮಧುಮೇಹ ಕಡಿಮೆಯಾಗುವುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top