fbpx
ಆರೋಗ್ಯ

ಬೆಟ್ಟದ ನೆಲ್ಲಿಕಾಯಿ ಮೊರಬ್ಬ ಹೇಗೆ ಮಾಡೋದು ಅಂತ ತಿಳ್ಕೊಂಡು ದಿನಕ್ಕೆ ಎರಡು ಬಾರಿ ತಿಂದ್ರೆ ಈ 11 ಆರೋಗ್ಯಕರ ಲಾಭ ಪಡ್ಕೊಬಹುದು ..

ಬೆಟ್ಟದ ನೆಲ್ಲಿಕಾಯಿ ಮೊರಬ್ಬ ಹೇಗೆ ಮಾಡೋದು ಅಂತ ತಿಳ್ಕೊಂಡು ದಿನಕ್ಕೆ ಎರಡು ಬಾರಿ ತಿಂದ್ರೆ ಈ 11 ಆರೋಗ್ಯಕರ ಲಾಭ ಪಡ್ಕೊಬಹುದು ..

 

ನೆಲ್ಲಿಕಾಯಿ ಮೊರಬ್ಬ ತಯಾರಿಸುವ ವಿಧಾನ :

 

 

ಬಲಿತ ಬೆಟ್ಟದ ನೆಲ್ಲಿಕಾಯಿಯನ್ನು ಶುದ್ಧವಾದ ಬಟ್ಟೆಯಿಂದ ಒರೆಸಿ ಅಷ್ಟೇ ಪ್ರಮಾಣದ ಬೆಲ್ಲವನ್ನು ತೆಗೆದುಕೊಂಡು ಒಂದರ ಮೇಲೊಂದರಂತೆ ಪದರ ಪದರವಾಗಿ ಬೆಲ್ಲದ ಪುಡಿ ಹಾಗು ಬೆಟ್ಟದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಅಗಲ ಬಾಯಿಯ ಭರಣಿಯಲ್ಲಿ ತುಂಬಿಸಿಡಬೇಕು ,ನಂತರ ಭರಣಿಯನ್ನು ಮುಚ್ಚಿ 21 ದಿನಗಳ ಕಾಲ ಬಿಸಿಲಿನಲ್ಲಿಡಬೇಕು .

ನಂತರ ಈ ಪಾಕದಿಂದ ನೆಲ್ಲಿಕಾಯಿ ಬೀಜಗಳನ್ನು ಹೊರಗೆ ತೆಗೆದು ಸ್ವಲ್ಪ ಏಲಕ್ಕಿ , ಕಾಳು ಮೆಣಸು , ಒಣ ಶುಂಠಿ ಪುಡಿ ಮತ್ತು ಒಣ ದ್ರಾಕ್ಷಿಯನ್ನು ಸೇರಿಸಿ ಮೊರಬ್ಬ ತಯಾರಿಸಲಾಗುತ್ತದೆ .

ನಾಲ್ಕು ಚಮಚದಂತೆ ದಿನಕ್ಕೆ ಎರಡು ಬಾರಿ ಸೇವನೆ ಮಾಡಬೇಕು .

 

ಮೊರಬ್ಬ ಸೇವನೆ ಮಾಡಿದರೆ ಆಗುವ ಆರೋಗ್ಯ ಲಾಭಗಳು :

ಜೀರ್ಣ ಕ್ರಿಯೆ ವೃದ್ಧಿಯಾಗುತ್ತದೆ ಮತ್ತು ಅಜೀರ್ಣ ಸಮಸ್ಯೆಗೆ ಪರಿಹಾರ 

 

 

ಹೊಟ್ಟೆಯಲ್ಲಿ ನೋವು ಅಥವಾ ಸಂಕಟವಾಗುವುದನ್ನು ಆಜೀರ್ಣವ್ಯಾದಿ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಇದು ಆಹಾರ ಸೇವನೆ ಸಂಬಂಧಿ ಸಮಸ್ಯೆ.ಜೊತೆಗೆ ಹೊಟ್ಟೆ ಉಬ್ಬರಿಸಿದಂತಾಗುವುದು , ತೇಗು ಬರುವುದು ಮತ್ತು ವಾಂತಿ ಕೂಡ ಆಗುತ್ತದೆ. ಸೋಂಕು ಹಾಗೂ ಕೆಲವು ಔಷಧದಿಂದಲೂ ಅಜೀರ್ಣವ್ಯಾಧಿ ಉಂಟಾಗುತ್ತದೆ ಮೊರಬ್ಬ ಸೇವನೆ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು .

 

ಖನಿಜಗಳಿಂದ ತುಂಬಿದೆ 

 

ಕ್ರೋಮಿಯಂ, ಸತು, ತಾಮ್ರ, ಕಬ್ಬಿಣ ಮತ್ತು ಇತರ ಖನಿಜಗಳಲ್ಲಿ ಸಮೃದ್ಧವಾಗಿದೆ. ಆಯುರ್ವೇದ ತಜ್ಞರು ಈ ಖನಿಜಗಳು ದೇಹದ ಪ್ರತಿನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೊಲೆಸ್ಟರಾಲ್ ಮಟ್ಟವನ್ನು ರಕ್ತದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ .

 

ಸಂಧಿವಾತದ ನೋವು

 

 

ಸಂಧಿವಾತದ ನೋವು ಉರಿಯೂತಕ್ಕೆ ಆಮ್ಲಾ ಉತ್ತಮ ಪರಿಹಾರವಾಗಿದೆ. ಇದು ಮೊಣಕಾಲು ಅಥವಾ ಸ್ನಾಯು ನೋವಿನಿಂದ ಉಂಟಾಗುವ ತೊಂದರೆಗೆ ದಿನಕ್ಕೆ ಎರಡು ಬಾರಿ ಮೊರಬ್ಬ ಸೇವನೆ ಮಾಡಿ ಇದು ವಿಟಮಿನ್ ಸಿ ಸಮೃದ್ಧ ಮೂಲವಾಗಿದೆ.

 

ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದು

 

 

ಮೊರಬ್ಬ ತಾಯಿ ಮತ್ತು ಮಗುವಿಗೆ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ ಮತ್ತು ತಾಯಿಯ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಕೂದಲು ಉದರುವಿಕೆ ತಡೆಯುತ್ತದೆ.

 

ಮಲಬದ್ಧತೆಗೆ ಪರಿಹಾರ

 

 

ಮೊರಬ್ಬ ಮಲಬದ್ಧತೆ ಮತ್ತು ದೀರ್ಘಕಾಲದ ಮಲಬದ್ಧತೆಗೆ ಪರಿಹಾರವನ್ನು ತರಲು ಸಹಾಯ ಮಾಡುತ್ತದೆ, ಒಂದು ಲೋಟ ಹಾಲು ಕುಡಿದ ನಂತರವಷ್ಟೇ ಈ ಪರಿಹಾರ ಮಾಡಬೇಕು .

 

ಕೊಬ್ಬನ್ನು ಕರಗಿಸುತ್ತದೆ

 

 

ಮೊರಬ್ಬ ದೇಹಕ್ಕೆ ಪ್ರಮುಖವಾದ ಕ್ರೋಮಿಯಂ, ಸತು ಮತ್ತು ತಾಮ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ ಇದು ಕೊಲೆಸ್ಟರಾಲ್ ಮಟ್ಟವನ್ನು ರಕ್ತದಲ್ಲಿ ಕಾಪಾಡಿಕೊಳ್ಳಲು ಮತ್ತು ಹೃದಯದ ಕಾಯಿಲೆಯ ಅಪಾಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ .

 

ರೋಗನಿರೋಧಕ

 

ವಿಟಮಿನ್ ಸಿ ಅಧಿಕವಾಗಿದ್ದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಬಲಪಡಿಸುತ್ತದೆ. ಇದು ಶೀತ, ಜ್ವರ ಮತ್ತು ಮುಂತಾದ ಪುನರಾವರ್ತಿತ ಸೋಂಕುಗಳಿಗೆ ಸುರಕ್ಷಿತ ಮತ್ತು ನೈಸರ್ಗಿಕ ಪರಿಹಾರವಾಗಿದೆ.

 

ಮುಟ್ಟಿನ ನೋವು ಕಡಿಮೆ ಮಾಡುತ್ತದೆ

 

ಅನುಕ್ರಮವಾಗಿ ಮೂರು ತಿಂಗಳ ಕಾಲ ತೆಗೆದುಕೊಂಡರೆ ಭವಿಷ್ಯದಲ್ಲಿ ಮುಟ್ಟಿನ ನೋವು ಕಡಿಮೆ ಮಾಡುತ್ತದೆ ಎಂದು ಪುರಾತನ ವೈದ್ಯರು ಹೇಳಿದ್ದಾರೆ .

 

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಒಳ್ಳೆಯದು

 

 

ಮೊರಬ್ಬ ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅನುಕೂಲಕರವಾಗಿದೆ, ಏಕೆಂದರೆ ಅದು ಕಬ್ಬಿಣದ ಸಮೃದ್ಧ ಮೂಲವಾಗಿದೆ ಮತ್ತು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

 

ಮೊಡವೆಗಳನ್ನು ತೆಗೆದುಹಾಕುತ್ತದೆ

 

 

ಸುಮಾರು 6 ತಿಂಗಳ ಕಾಲ ಮೊರಬ್ಬ ಸೇವನೆ ಮಾಡಿದರೆ ಚರ್ಮದ ಮೇಲೆ ಮೊಡವೆ ಮಾರ್ಕ್ಸ್, ಕಲೆಗಳನ್ನು ನೈಸರ್ಗಿಕವಾಗಿ ಗುಣಪಡಿಸುತ್ತದೆ.

 

ವಯಸ್ಸಾಗುವಿಕೆಯನ್ನು ತಡೆಯುತ್ತದೆ

 

 

ವಿಟಮಿನ್ ಎ, ಸಿ ಮತ್ತು ಇ ನ ಸಮೃದ್ಧ ಮೂಲವಾಗಿದೆ ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ವಯಸ್ಸಾಗುವಿಕೆಯನ್ನು ತಡೆದು ತಾರುಣ್ಯ ನಿಮ್ಮದಾಗಿಸುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top