fbpx
ದೇವರು

ಚಂದ್ರ ಗ್ರಹ ದೋಷ ಹೆಚ್ಚಾದ್ರೆ ಮಾನಸಿಕ ರೋಗ ಮತ್ತೆ ಖಿನ್ನತೆ ಕಾಡುತ್ತೆ ಇದನ್ನ ಶಾಸ್ತ್ರದ ಪ್ರಕಾರ ಪರಿಹಾರ ಮಾಡ್ಬೇಕು ಅಂದ್ರೆ ಇಷ್ಟು ಮಾಡಿ ಸಾಕು!

ಚಂದ್ರ ಗ್ರಹ ದೋಷ ಹೆಚ್ಚಾದ್ರೆ ಮಾನಸಿಕ ರೋಗ ಮತ್ತೆ ಖಿನ್ನತೆ ಕಾಡುತ್ತೆ ಇದನ್ನ ಶಾಸ್ತ್ರದ ಪ್ರಕಾರ ಪರಿಹಾರ ಮಾಡ್ಬೇಕು ಅಂದ್ರೆ ಇಷ್ಟು ಮಾಡಿ ಸಾಕು 

ಚಂದ್ರ ಗ್ರಹದಿಂದ ಉಂಟಾಗುವ ಮಾನಸಿಕ  ರೋಗಗಳನ್ನು ಈ ರೀತಿಯಾಗಿ ಸರಿಪಡಿಸಿಕೊಳ್ಳಿ.

 

ಚಂದ್ರ ಗ್ರಹ ದೋಷ ಗೆ ಚಿತ್ರದ ಫಲಿತಾಂಶ

 

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನತೆ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ , ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನಸ್ಸು ಸಮತೋಲನವನ್ನು  ಕಳೆದುಕೊಳ್ಳುತ್ತದೆ ಮತ್ತು ಖಿನ್ನತೆಯು ಉಂಟಾಗಲು ಶುರುವಾಗುತ್ತದೆ .

ಮನಸ್ಸು ಸಮತೋಲನವನ್ನು  ಕಳೆದುಕೊಳ್ಳಲು ಚಂದ್ರ ಹಾಗೂ ಬುಧಗ್ರಹ ಕಾರಣರು. ಜಾತಕದಲ್ಲಿ ಚಂದ್ರನ ಸ್ಥಾನ ಸರಿಯಾಗಿಲ್ಲವಾದಲ್ಲಿ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಚಂದ್ರನನ್ನು ಮನಸ್ಸಿನ ಸ್ವಾಮಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಖಿನ್ನತೆಗೆ ಬಹುಮುಖ್ಯ ಕಾರಣ ಚಂದ್ರ ಹಾಗೂ ಬುಧ.

ಚಂದ್ರ ಗ್ರಹ, ಶನಿ, ರಾಹು ಮತ್ತು ಸೂರ್ಯ ಗ್ರಹದ ಮೇಲೆ ಪ್ರಭಾವ ಬೀರುತ್ತದೆ. ಜಾತಕದಲ್ಲಿ ಬುಧ ಬಲಿಷ್ಠನಾಗಿದ್ದರೆ ಬೇರೆ ಗ್ರಹ ದೋಷ ಆತನನ್ನು ಏನು ಮಾಡಲು ಸಾಧ್ಯವಿಲ್ಲ. ಆದರೆ ಬುಧ ದುರ್ಬಲನಾಗಿದ್ದು ಚಂದ್ರನ ಮೇಲೆ ಶನಿ ಪ್ರಭಾವವಿದ್ದಲ್ಲಿ ವ್ಯಕ್ತಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

 

ಶನಿ, ರಾಹು ಮತ್ತು ಸೂರ್ಯ ಗೆ ಚಿತ್ರದ ಫಲಿತಾಂಶ

 

ಖಿನ್ನತೆಯನ್ನು ತಡೆಗಟ್ಟಲು ಯೋಗ ಹಾಗೂ ಪ್ರಾಣಾಯಾಮವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ನಂತರ ಸೂರ್ಯನ ಶಾಖಕ್ಕೆ ಮೈ ಒಡ್ಡಬೇಕು ಇದರಿಂದ ಸಾಕಷ್ಟು ಲಾಭಗಳಿವೆ. ಖಿನ್ನತೆಗೆ ಒಳಗಾದವರು ಕತ್ತಲಿನಿಂದ ದೂರವಿರಬೇಕು.

ಖಿನ್ನತೆಗೆ ಒಳಗಾದವರು ಪ್ರತಿದಿನ ಬಾಳೆ ಹಣ್ಣನ್ನು ತಿನ್ನಬೇಕು.

ಬೆಳಗ್ಗೆ ಹಾಗೂ ರಾತ್ರಿ ಗಾಯತ್ರಿ ಮಂತ್ರವನ್ನು ಮತ್ತು ಲಲಿತಾ ಸಹಸ್ರನಾಮ  ನೂರಾ ಎಂಟು ಬಾರಿ ಪಠಿಸಬೇಕು.

ಖಿನ್ನತೆಗೆ ಒಳಗಾದವರು ಮುತ್ತಿನಿಂದ ಮಾಡಿದ ಯಾವುದೇ ರೀತಿಯ ಆಭರಣಗಳನ್ನು ಧರಿಸಬಾರದು.

 ಹುಣ್ಣಿಮೆ ಅಂದರೆ ಪೌರ್ಣಮಿಯ ದಿನದಂದು ಉಪವಾಸ ಮಾಡಬೇಕು ಚಂದ್ರನಿಗೆ ಅರ್ಘ್ಯವನ್ನು ನೀಡಬೇಕು .

 

ಗ್ರಹ ದೋಷ ಗೆ ಚಿತ್ರದ ಫಲಿತಾಂಶ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top