fbpx
ದೇವರು

ದೆವ್ವಗಳೇ ಕಟ್ಟಿದ ದೇವಾಲಯ ಇದು. ಇತಿಹಾಸದ ಪುಟ ತಿರುವಿದಾಗ ತಿಳಿದದ್ದು ಅಚ್ಚರಿಯ ಸಂಗತಿ. 

ದೆವ್ವಗಳೇ ಕಟ್ಟಿದ ದೇವಾಲಯ ಇದು.

ಇತಿಹಾಸದ ಪುಟ ತಿರುವಿದಾಗ ತಿಳಿದದ್ದು ಅಚ್ಚರಿಯ ಸಂಗತಿ. 

ನಮ್ಮ ದೇಶದ ದೇವಾಲಯಗಳಿಗೆ ತುಂಬಾ ಘನಚರಿತ್ರೆ ಇದೆ .ತುಂಬಾ ದೇವಾಲಯಗಳು ಅತಿ ಪುರಾತನ ಕಾಲದಿಂದ ಭಕ್ತರಿಂದ ಆರಾಧಿಸಲ್ಪಡುತ್ತಿದೆ.

 

 

 

ಸನಾತನ ಧರ್ಮದಲ್ಲಿ ದೇವರ ಮೇಲೆ ಇರುವ ನಂಬಿಕೆ,ಭಕ್ತಿ ,ಭಾವದಿಂದ ನಮ್ಮ ದೇಶದಲ್ಲಿ ತುಂಬಾ ದೇವಾಲಯಗಳು   ರಾಜರ ಕೈಯಿಂದ ಮತ್ತು ಜನರ ಕೈಯಿಂದ ಕಟ್ಟಿಸಲ್ಪಡುತ್ತಿದೆ.ಇನ್ನು ಕೆಲ ದೇವಾಲಯಗಳನ್ನು  ದೇವರುಗಳೇ ಕಟ್ಟಿರುವಂತೆ ನಮ್ಮ ಕೆಲ ಪುರಾಣಗಳು ಹೇಳುತ್ತದೆ,ಅಂತ ದೇವಾಲಯಗಳ ದರ್ಶನ ಮಾಡುವುದರಿಂದ ಎಲ್ಲ ಪಾಪಗಳು ಹೋಗಿ ಪುಣ್ಯ ಬಂದು ,ಜೀವನದಲ್ಲಿ ಸಕಲ ಸುಖ-ಸಂತೋಷ ದೊರಕುತ್ತದೆ ಎಂದು ಜನರ ನಂಬಿಕೆ.

ನೀವು ಇಲ್ಲಿಯವರಿಗೂ ಇಂತ ದೇವಾಲಯಗಳನ್ನು ಮಾತ್ರ ನೋಡಿರುತ್ತಿರಾ ಆದರೆ ಈಗ ನಾವು ಹೇಳುವ ದೇವಾಲಯದ ಬಗ್ಗೆ ಕೇಳಿದರೆ ನೀವು ಆಶ್ಚರ್ಯದ ಜೊತೆ ಶಾಕ್ ಆಗುತ್ತಿರಾ.

ಅದಕ್ಕೆ ಕಾರಣ ನಾವು ನಿಮಗೆ ಈಗ ಹೇಳುವ ಈ  ದೇವಾಲಯವನ್ನು ಕಟ್ಟಿದು ಭಕ್ತರೋ ಅಥವಾ ರಾಜರೋ ಅಲ್ಲ ,ಈ ದೇವಾಲಯವನ್ನು ಕಟ್ಟಿಸಿದ್ದು ದೆವ್ವಗಳಂತೆ .ಹೌದು ಇದು ನಿಜ ಈ ದೇವಾಲಯಗಳನ್ನು ಕಟ್ಟಿಸಿದ್ದು ದೆವ್ವಗಳಂತೆ ಎಂದು ಆ ಊರಿನ ಗ್ರಾಮಸ್ಥರು ಹೇಳುತ್ತಾರೆ.

ಆ ದೇವಾಲಯ ಇರುವುದು ಎಲ್ಲಿ?ಇಲ್ಲಿ ಇರುವ ದೇವರು ಯಾವುದು ?ಆ ದೇವಾಲಯದ ಚರಿತ್ರೆ ಏನು ?ನಿಮ್ಮ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

ಈ ದೇವಾಲಯ ಇರುವುದು ಕರ್ನಾಟಕದ  ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯ ಮಧ್ಯ ಇರುವ ಬೊಮ್ಮವರ ಎಂಬ ಹಳ್ಳಿಯಲ್ಲಿ.ಈ ಹಳ್ಳಿಯಲ್ಲಿ  ಸುಂದರೇಶ್ವರ ಎಂಬ ಶಿವನ ದೇವಾಲಯವಿದೆ.ಈ ದೇವಾಲಯವನ್ನು ತುಂಬಾ ವರ್ಷಗಳ ಹಿಂದೆ ದೆವ್ವ ಗಳು ಕಟ್ಟಿಸಿತಂತೆ.ಇಲ್ಲಿನ ಹಳ್ಳಿಯ ಜನರ ಪ್ರಕಾರ ೬೦೦ ವರ್ಷಗಳ ಹಿಂದೆ ಅಲ್ಲಿ ದೆವ್ವಗಳ ಕಾಟ ಅತಿ ಹೆಚ್ಚಾಗಿತ್ತಂತೆ,ಅಲ್ಲಿನ ಜನರಿಗೆ ತುಂಬಾ ಹಿಂಸೆ ಕೊಡುತ್ತಿತ್ತಂತೆ.ಈ ಕಾಟದಿಂದ ಹೊರಬರಲು ಬೊಚ್ಚಯ ಎಂಬ ಮನುಷ್ಯನೊಬ್ಬ ಮಾಯಾಮಂತ್ರ ಕಲಿಯುತ್ತಾನೆ.ಬೊಚ್ಚಯ ಮಂತ್ರಗಾರನಾದರು ಶಿವ ಭಕ್ತನಾಗಿದ್ದ ಕಾರಣದಿಂದ ಶಿವನ ದೇವಾಲಯ ಕಟ್ಟಿಸಬೇಕು ಎಂದು ನಿರ್ಧಾರ ಮಾಡುತ್ತಾನೆ.ಆ ಊರಿನ ಜನರ ಸಹಾಯದಿಂದ ದೇವಾಲಯ ನಿರ್ಮಾಣ ಮಾಡುತ್ತಾನೆ ,ಆ ಊರಿನಲ್ಲಿ ದೇವಾಲಯ ಕಟ್ಟುವುದು ಇಷ್ಟವಿಲ್ಲದ ದೆವ್ವಗಳು  ರಾತ್ರೋರಾತ್ರಿ ದೇವಾಲವನ್ನು ನಾಶಮಾಡಿತಂತೆ,ಇದರಿಂದ ಕೋಪಗೊಂಡ ಬೊಚ್ಚಯ ತನ್ನ ಮಂತ್ರ ಶಕ್ತಿಯಿಂದ ದೆವ್ವಗಳನ್ನು ಬಂಧಿಸುತ್ತಾನಂತೆ,ದೆವ್ವಗಳು ತಮ್ಮನ್ನು ಬಿಟ್ಟುಬಿಡುವಂತೆ ಕೇಳಿಕೊಂಡಾಗ ೨ ಷರತ್ತುಗಳ ಮೇಲೆ ಬಿಡುವಂತೆ ಹೇಳುತ್ತಾನೆ,ಮೊದಲನೇ ಷರತ್ತು ಆ ದೇವಾಲಯವನ್ನು ಒಂದು ರಾತ್ರಿಯಲ್ಲಿ ಮರು ಕಟ್ಟಬೇಕು ಇನ್ನೊಂದು ಷರತ್ತು ಆ ಊರಿನಿಂದ ಹೊರಹೋಗಬೇಕು ಮತ್ತು ಅಲ್ಲಿನ ಜನರಿಗೆ ತೊಂದರೆ ಕೊಡಬಾರದು ,ಈ ಷರತ್ತುಗಳಿಗೆ ಒಪ್ಪಿದ ದೆವ್ವಗಳು ಆ ದೇವಾಲಯ ನಿರ್ಮಿಸುತ್ತವಂತೆ.

 

 

ಸಾಮಾನ್ಯವಾಗಿ ದೇವಾಲಯಗಳ ಮೇಲೆ ದೇವರ ಚಿತ್ರ ಅಥವಾ ಸುಂದರವಾದ ವಿಗ್ರಹಗಳನ್ನ ನಾವು ನೋಡಬಹುದು ಆದರೆ ಇಲ್ಲಿನ ದೇವಾಲಯದ ಮೇಲೆ ದೆವ್ವಗಳ ಚಿತ್ರಗಳು ಇದೆ.ದೆವ್ವಗಳು ಈ ದೇವಾಲಯ ಕಟ್ಟಿದರಿಂದ ಈ ದೇವಾಲಯದ ಮೇಲೆ ದೆವ್ವಗಳ ಚಿತ್ರಇದೆ ಎಂದು ಹೇಳುತ್ತಾರೆ ಇಲ್ಲಿನ ಜನ .

ಕೆಲವು ಕಾರಣಗಳಿಂದ ಇಲ್ಲಿ ದೇವಾಲಯ ಕಟ್ಟಿಸಿದರು ಆದರೆ ದೇವರನ್ನು ಪ್ರತಿಷ್ಠಾಪನೆ ಮಾಡಿರಲಿಲ್ಲ ,೫೦ ವರ್ಷಗಳ ಹಿಂದೆ ಮಣ್ಣಿನಲ್ಲಿ ಅತಿ  ದೊಡ್ಡ  ೮ ಅಡಿ ಎತ್ತರದ ಶಿವಲಿಂಗ ದೊರಕಿತಂತೆ,ಆ ಲಿಂಗವನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದರು ,ಶಿವನ್ನು ಭೂತನಾಥ ಅದರಿಂದ ದೆವ್ವಗಳು ಕಟ್ಟಿಸಿದ ದೇವಾಲಯದಲ್ಲಿ  ಪ್ರತಿಷ್ಠಾಪನೆ ಮಾಡಿದರೆ ಎಲ್ಲ ಒಳ್ಳೆಯದೇ ಆಗುತ್ತದೆ ಎಂದು ತೀರ್ಮಾನ ಮಾಡುತ್ತಾರಂತೆ  ಜನ ಹಾಗೆ ಈ ದೇವಾಯಕ್ಕೆ ಸುಂದರೇಶ್ವರ ಎಂದು ನಾಮಕರಣ ಮಾಡಿದರಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top