fbpx
ಸಮಾಚಾರ

ಹೊಸ ವರ್ಷಕ್ಕೆ ಬಂಪರ್ ಆಫರ್ ಘೋಷಿಸಿದ ಜಿಯೋ..!

ಹೊಸ ವರ್ಷಕ್ಕೆ ಬಂಪರ್ ಆಫರ್ ಘೋಷಿಸಿದ ಜಿಯೋ..!

 

 

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಸೃಷ್ಟಿಸಿಕೊಂಡಿರುವ ರಿಲಯನ್ಸ್ ಜಿಯೋ ವರ್ಷಕ್ಕೆ ಎರಡು ಆಫರ್’ಗಳನ್ನ ಘೋಷಿಸಿದೆ. ಜಿಯೋ ಸಿಮ್ ಬಂದಾಗಿನಿಂದಲೂ ತತ್ತರಿಸಿ ಹೋಗಿದ್ದ ಉಳಿದ ಟೆಲಿಕಾಂ ಸಂಸ್ಥೆಗಳು ಜಿಯೋಗೆ ಸೆಡ್ಡುಹೊಡೆಯಲು ಒಂದರ ಮೇಲೆಂದು ಆಫರ್ ಗಳನ್ನೂ ನೀಡುತ್ತಾ ಬಂದಿದ್ದರೂ ತನ್ನ ಪ್ರಭಾವವನ್ನು ಕುಗ್ಗಿಸಿಕೊಳ್ಳದ ಜಿಯೋ ಭಾರಿ ಆಫರ್ ನೀಡಿದೆ.

 

 

ಸದ್ಯ ಹೊಸ ವರ್ಷಕ್ಕೆ ಜಿಯೋ ಎರಡು ಆಫರ್’ಗಳನ್ನ ಘೋಷಿಸಿದೆ ಅದರಂತೆ 199 ರುಪಾಯಿಗೆ ರಿಚಾರ್ಜ್ ಮಾಡಿಸಿದರೆ FREE ಅನ್’ಲಿಮಿಟೆಡ್ ಕಾಲ್ ಮತ್ತು ಉಚಿತ SMS ಮತ್ತು ಒಂದು ದಿನಕ್ಕೆ 1.2 ಜಿಬಿ 4ಜಿ ಡೇಟಾ ಸೌಲಭ್ಯ ಸಿಗಲಿದೆ ಈ ಸೌಲಭ್ಯಗಳು 28 ದಿನಗಳಿಗೆ ಮಾತ್ರ ಅನ್ವಯವಾಗಲಿವೆ.

ಮತ್ತೊಂದು ಆಫರ್ ನಂತೆ 299 ರುಪಾಯಿಗೆ ರಿಚಾರ್ಜ್ ಮಾಡಿಸಿದರೆ FREE ಅನ್’ಲಿಮಿಟೆಡ್ ಕಾಲ್ ಮತ್ತು SMS ಹಾಗು ಒಂದು ದಿನಕ್ಕೆ ಬರೋಬ್ಬರಿ 4GB 4G ಡೇಟಾ ಸೌಲಭ್ಯ ಸಿಗಲಿದೆ ಈ ಪ್ಲಾನ್ ನ ವ್ಯಾಲಿಡಿಟಿ ಕೂಡ 28 ದಿನವಾಗಿರುತ್ತದೆ. ಅಂದಹಾಗೆ ಈ ಆಫರ್ ಗಳು ಕೇವಲ ಪ್ರೀಫೈಯ್ಡ್ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top