fbpx
ಕ್ರೈಂ ಸ್ಟೋರಿ

2 ದಿನ ಶಾಲೆ ಬಿಟ್ಟಿದ್ದಕ್ಕೆ 10 ವರ್ಷದ ಬಾಲಕಿಗೆ ಯರ್ರಾ ಬಿರ್ರಿ ಥಳಿಸಿದ ಶಿಕ್ಷಕ. ಬಾಲಕಿಯ ಪರಿಸ್ಥಿತಿ ನೋಡಿದ್ರೆ ಕರಳು ಕಿತ್ತು ಬರುತ್ತೆ.

2 ದಿನ ಶಾಲೆ ಬಿಟ್ಟಿದ್ದಕ್ಕೆ 10 ವರ್ಷದ ಬಾಲಕಿಗೆ ಯರ್ರಾ ಬಿರ್ರಿ ಥಳಿಸಿದ ಶಿಕ್ಷಕ. ಬಾಲಕಿಯ ಪರಿಸ್ಥಿತಿ ನೋಡಿದ್ರೆ ಕರಳು ಕಿತ್ತು ಬರುತ್ತೆ.

ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

 

 

ಮುಂಬೈ ಶಾಲೆ ಒಂದರಲ್ಲಿ ೧೦ ವರ್ಷದ ಬಾಲಕಿ ರಜಾ ಅರ್ಜಿಯನ್ನು ತರದೇ ಇದಕ್ಕೆ ಆ ಬಾಲಿಕಿಗೆ ಚನ್ನಾಗಿ ಥಳಿಸಿದ್ದ ಆ ತರಗತಿ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.

ಮುಂಬೈನ ಸಾಯಿ ಜೀವನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶ್ರೀಕೃಷ್ಣ ಕೆಂಜಾಲೆ ಅಮಾನತುಗೊಂಡಿರುವ ಶಿಕ್ಷಕ.

 

 

ಬಿಹಾರ ಮೂಲದ ಬಾಲಕಿ ಆ ಶಾಲೆಯಲ್ಲಿ 5 ನೇ ತರಗತಿ ಓದುತ್ತಿದ್ದಳು, ಹೊಟ್ಟೆನೋವು ಇದ್ದ ಕಾರಣ ಎರಡು ದಿನ ರಜೆ ತೆಗೆದುಕೊಂಡಿದ್ದಳು. ಎರಡು ದಿನದ ನಂತರ ಶಾಲೆಗೇ ಹೋಗುವಾಗ ರಜೆ ಅರ್ಜಿಯನ್ನು ಮನೆಯಲ್ಲೇ ಮರೆತುಬಿಟ್ಟಿದ್ದಳು. ಈ ಸಣ್ಣ ವಿಷಯಕ್ಕೆ ಕೋಪಗೊಂಡ ತರಗತಿ ಶಿಕ್ಷಕ ಆಕೆಗೆ ಬಳಗಯಲ್ಲಿ ಬಾಸುಂಡೆ ಬಾರೋ ಹಾಗೆ ಥಳಿಸಿದ್ದಾನೆ.

ಈ ವಿಚಾರವನ್ನು ಬಾಲಕಿಯ ತಂದೆ ಆ ಪಾಲಿಕೆಯ ಸದಸ್ಯರಾಗಿದ್ದ ರಾಹುಲ್ ಜಾಧವ್ ಗೆ ಹೇಳಿದ್ದಾರೆ. ರಾಹುಲ್ ಜಾಧವ್ ಅವರು ಕೂಡಲೇ ವಿಷಯವನ್ನು ಪುಣೆ ನಾಗರಾಯುಕ್ತರಿಗೆ ತಿಳಿಸಿದ್ದಾರೆ. ಪುಣೆಯ ಚಿಕಾಲಿ ಪೊಲೀಸ್ ತಾನಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ವಿಚಾರವಾಗಿ ಬಾಲಕಿ ಅಥವಾ ಬಾಲಕಿಯ ತಂದೆ ಯಾವ ದೂರು ಠಾಣಿಯಲ್ಲಿ ನೀಡಿಲ್ಲ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

ವರದಿಗಳ ಪ್ರಕಾರ ಬಾಲಕಿಯು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾಳೆಂದು ತಿಳಿದುಬಂದಿದೆ. ಈ ಘಟನೆ ನಡೆದ ದಿನ ಪ್ರಾಂಶುಪಾಲರು ಗೈರಾಗಿದ್ದರು ಎಂದು ಹೇಳಲಾಗಿದೆ. ಈ ಘಟನೆಗೆ ಸಮಂಧಿಸಿದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಅವಾರಿ ಅವರು ಹೇಳಿಕೆ ಕೊಟ್ಟಿದ್ದಾರೆ.

.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top