fbpx
News

ಮೊಳೆಯುಂಟು, ಹಕ್ಕಿಗಳಿಲ್ಲದ ಮರ

ಮೊಳೆಯುಂಟು, ಹಕ್ಕಿಗಳಿಲ್ಲದ ಮರ

 

‘ಮನೆಯಲ್ಲಿ ಅಕ್ಕಿ ಇದ್ದರೆ ತಪ್ಪಿಲ್ಲ – ಮರದಲ್ಲಿ ಹಕ್ಕಿ ಇದ್ದರೆ ತಪ್ಪಿಲ್ಲ’ ಅನ್ನೋದು ಕನ್ನಡದ ಗಾದೆ. ಆದರೆ ಈ ದರಿದ್ರ ಜನರ ಮನೆಯಲ್ಲಿ ಅಕ್ಕಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮರದ ಮೇಲೆ ಹಕ್ಕಿ ಕೂರಲು ಬಿಡುತ್ತಿಲ್ಲ!

ಏನು ಮಾಡಿದ್ದಾರೆ ಈಗ?

ಹಕ್ಕಿ ಕೂರದಂತೆ ಮರದ ಟೊಂಗೆ-ಕೊಂಬೆಗೆಲ್ಲಾ ಮೊಳೆ ಜಡಿದಿದ್ದಾರೆ. ಅಪ್ಪಿ ತಪ್ಪಿ ಹಕ್ಕಿ ಬಂದು ಕೂತರೆ ‘ಗೊಟಕ್’ ಎನ್ನಲಿದೆ.

ಯಾಕೆ ಹೀಗೆ ಮಾಡಿದರು?

 

 

ತಮ್ಮ ಐಷಾರಾಮಿ ಕಾರುಗಳ ಮೇಲೆ ಹಕ್ಕಿಗಳು ಹಿಕ್ಕೆ ಹಾಕುತ್ತವೆ. ಅಲ್ಲಿಂದ ಇಲ್ಲಿಂದ ತಂದ ಆಹಾರದ ತುಂಡುಗಳನ್ನು ಉದುರಿಸುತ್ತವೆ. ಮರದ ಎಲೆ/ಹೂಗಳನ್ನು ಉದುರಿಸುತ್ತವೆ.

ಏನಾಯಿತು ಈಗ?

ದುಬಾರಿ ಕಾರು ಗಲೀಜಾಗುತ್ತದೆ. ಮಾಲೀಕನ ಮಾನ ಮೂರು ಕಾಸಿಗೆ ಹರಾಜಾಗುತ್ತಿದೆ. ಆತನ ಘನತೆ, ಗಾಂಭೀರ್ಯಗಳು ನೆಲದ ಪಾಲಾಗುತ್ತಿದೆ… ಹೀಗಾಗಿ ಕೊಂಬೆಗೆಲ್ಲಾ ಮೊಳೆ ಹೊಡೆಸಿದ್ದಾನೆ.

ಹಕ್ಕಿಗಳ ಬದುಕಿಗೇ ಸಂಚಕಾರ ತಂದ ಶ್ರೀಮಂತ ಜಂತುಗಳು ಎಲ್ಲಿವೆ?

ಇಂಗ್ಲೇಂಡ್‍ನ ಬ್ರಿಸ್ಟೋಲ್‍ನಲ್ಲಿ ನೆಲೆಸಿವೆ.

 

 

ಸ್ಥಳೀಯ ಆಡಳಿತ ತೆಪ್ಪಗೆ ನೋಡುತ್ತಿದೆಯಾ?

ಹೌದು! ಏಕೆಂದರೆ ಮರ ರಸ್ತೆಯಲ್ಲಿಲ್ಲ. ಅಥವಾ ಸಾರ್ವಜನಿಕ ಸ್ಥಳದಲ್ಲಿ ಇಲ್ಲ. ಬದಲಿಗೆ ಕಾರ್ ಮಾಲೀಕನ ಅಂಗಳದಲ್ಲಿಯೇ ಇದೆ. ಹೀಗಾಗಿ ಹಕ್ಕಿ ಇಲ್ಲದ ಮರಗಳು ಮಾತ್ರ ಇಲ್ಲಿವೆ.

ಈಗ ಓ.ಕೆ. ಮುಂದೆ ಮರದ ಟೊಂಗೆಗಳು ಬೆಳೆದರೆ ಆಗ?

ಸೂಪರ್ ಸಾರ್… ಒಳ್ಳೆ ಪ್ರಶ್ನೆ… ಟೊಂಗೆಗಳು ಬೆಳೆಯಲಿ… ಹಕ್ಕಿಗಳು ಅಲ್ಲಿ ಗೂಡುಕಟ್ಟಲಿ. ಸಂಸಾರ ಮಾಡಲಿ… ಹಕ್ಕಿಗಳ ಕಲರವ ಮೂಡಲಿ…ಆ ಸದಾಶಯ ಮಾತ್ರ ನಮ್ಮದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top