fbpx
ಭವಿಷ್ಯ

ಡಿಸೆಂಬರ್ 26 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೨೬ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೪೩
ಸೂರ್ಯಾಸ್ತ : ೧೭:೫೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ಅಷ್ಟಮೀ
ನಕ್ಷತ್ರ : ಉತ್ತರಾ ಭಾದ್ರ
ಯೋಗ : ವ್ಯತೀಪಾತ
ಪ್ರಥಮ ಕರಣ : ವಿಷ್ಟಿ – ೧೪:೪೯ ವರೆಗೆ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೧:೫೭ – ೧೨:೪೨
ಅಮೃತಕಾಲ : ೨೦:೫೨ – ೨೨:೩೦

ರಾಹು ಕಾಲ: ೧೫:೦೮ – ೧೬:೩೩
ಗುಳಿಕ ಕಾಲ: ೧೨:೨೦ – ೧೩:೪೪
ಯಮಗಂಡ: ೦೯:೩೧ – ೧೦:೫೫

 

ಮೇಷ (Mesha)

ಹೊಸದಾದ ವಿಚಾರವೊಂದು ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವುದು. ಇದಕ್ಕೆ ಹಿರಿಯರ ಸಂಗಡ ಚರ್ಚಿಸಿ ಮತ್ತು ನೀವು ಎರಡು ಬಾರಿ ಚಿಂತಿಸಿ ಒಂದು ನಿರ್ಧಾರಕ್ಕೆ ಬನ್ನಿ. ಅವಸರದ ತೀರ್ಮಾನ ತೊಂದರೆಯನ್ನುಂಟು ಮಾಡುವುದು.

 

ವೃಷಭ (Vrushabha)

ನಿಮ್ಮ ಚಾಣಾಕ್ಷ ತನದಿಂದ ಈದಿನ ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿರಿ.

 

ಮಿಥುನ (Mithuna)

ಧನ ಲಾಭದ ವಿಚಾರದಲ್ಲಿ ಮತ್ತು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಸಂಸ್ಥೆಯ ಸದಸ್ಯರೊಂದಿಗೆ ದೀರ್ಘವಾದ ಮಾತುಕತೆ ನಡೆಯಲಿದೆ. ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

 

ಕರ್ಕ (Karka)

ಅಪರೂಪದ ಯಶಸ್ಸೊಂದನ್ನು ನೀವು ಇಂದು ಸಂಪಾದಿಸಲಿದ್ದೀರಿ. ಸೂಕ್ತವಾದುದನ್ನು ಧೈರ‍್ಯದಿಂದ ಮಾಡಿ ಜಯವಿದೆ. ಅವರಿವರ ಮಾತಿಗೆ ಕಿವಿಗೊಡದಿರಿ. ಟೀಕಿಸಿದ ಜನರೇ ನಿಮ್ಮನ್ನು ಇಂದು ಕೊಂಡಾಡುವರು.

 

ಸಿಂಹ (Simha)

ಇಟ್ಟ ಗುರಿಯನ್ನು ತಲುಪುವ ಅಗತ್ಯವಿರುವುದರಿಂದ ನಿಮ್ಮ ಯೋಚನಾ ಲಹರಿಯನ್ನು ಬದಲಾಯಿಸುವುದು ಸೂಕ್ತ. ಇದರಿಂದ ನೀವು ಇಚ್ಛಿತ ಗುರಿಯನ್ನು ತಲುಪಲು ಸಾಧ್ಯ. ನಿಮ್ಮ ವಿಚಾರಧಾರೆಗಳಿಗೆ ಅಡ್ಡಿ ತರುವ ಜನ ಎದುರಾಗುವರು. ಚಿಂತಿಸದಿರಿ.

 

ಕನ್ಯಾರಾಶಿ (Kanya)

ಗುರುವಿನ ಕೃಪಾ ಕಟಾಕ್ಷ ಇರುವವವರೆಗೂ ಚಿಂತಿಸುವ ಅಗತ್ಯವಿಲ್ಲ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿರಿ. ಈದಿನ ಸಂತಸದ ದಿನವನ್ನಾಗಿ ರೂಪಿಸಿಕೊಳ್ಳುವಿರಿ.

 

ತುಲಾ (Tula)

ನೇರ ಮಾತುಗಳ ಮೂಲಕವೇ ಕೆಲಸ ಕಾರ್ಯಗಳನ್ನು ಸಾಧ್ಯ ಮಾಡಿಕೊಳ್ಳುವಿರಿ. ಇದರಿಂದ ಉಭಯತರರಿಗೂ ಒಳಿತಾಗುವುದು. ಆಂಜನೇಯ ಸ್ತೋತ್ರ ಪಠಿಸಿರಿ. ಉದ್ಯೋಗದ ವಿಚಾರವಾಗಿ ಶುಭ ಸಂದೇಶ ಬರುವುದು.

 

ವೃಶ್ಚಿಕ (Vrushchika)

ಹೊಸತನ್ನು ಮಾಡುವ ಹಲವು ದಿನಗಳ ತುಡಿತ ಇಂದು ಕಾರ್ಯರೂಪಕ್ಕೆ ಬಂದು ಯಶಸ್ಸು ಸಿಗಲು ಆರಂಭಿಸುವುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಮತ್ತು ಶೀತ, ಕೆಮ್ಮು, ನೆಗಡಿಯಂತಹ ತೊಂದರೆ ನಿವಾರಣೆಗೆ ಔಷಧ ತೆಗೆದುಕೊಳ್ಳುವುದು ಒಳ್ಳೆಯದು.

 

ಧನು ರಾಶಿ (Dhanu)

ಅಂತಿಮವಾದ ಮಾತನ್ನು ಮುಂಚೆಯೇ ಮಾತನಾಡದಿರಿ. ನಿಮ್ಮ ಮಾರ್ಗದರ್ಶಕರು ಸೂಚಿಸುವ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸುವಿರಿ.ಮನೆಯ ಹಿರಿಯರ ಆರೋಗ್ಯದ ವಿಷಯದಲ್ಲಿ ಆಸ್ಪತ್ರೆ ಖರ್ಚು ಬರುವ ಸಂಭವವಿದೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿರಿ. ಪ್ರತಿನಿತ್ಯ ವಿಷ್ಣುಸಹಸ್ರನಾಮ ಓದಿರಿ.

 

ಮಕರ (Makara)

ಧನ ಲಾಭದ ವಿಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ತಮ್ಮ ನಿರೀಕ್ಷಿತ ಗುರಿಯನ್ನು ತಲುಪಲು ಸಹಾಯ ಮಾಡುವುದು. ಕಾರ್ಯ ಬಾಹುಳ್ಯದ ಒತ್ತಡದಿಂದ ಶಿರೋವೇದನೆ ಬರುವ ಸಾಧ್ಯತೆ. ಆದಷ್ಟು ದೇವತಾ ಪ್ರಾರ್ಥನೆಯನ್ನು ಮಾಡಿ.

 

ಕುಂಭರಾಶಿ (Kumbha)

ಪ್ರಯಾಣದ ಸಂದರ್ಭದಲ್ಲಿ ನಿರ್ಲಕ್ಷ  ತೋರದಿರಿ. ಮಹತ್ವದ ಕಾಗದ ಪತ್ರಗಳ ಬಗ್ಗೆ ವಿಶೇಷವಾದ ಎಚ್ಚರಿಕೆ ಇರಲಿ. ಅಷ್ಟಮ ಶನಿಯು ಇನ್ನಷ್ಟು ದಿನ ನಿಮ್ಮನ್ನು ಸತಾಯಿಸುವನು. ಹೆದರದಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

 

ಮೀನರಾಶಿ (Meena)

ಪದೇ ಪದೆ ನಿಮ್ಮನ್ನು ಮತ್ತು ನಿಮ್ಮ ಕಾರ್ಯವನ್ನು ಟೀಕಿಸುತ್ತಿದ್ದ ವ್ಯಕ್ತಿಯು ಏಕಾಏಕಿ ನಿಮ್ಮ ಗುಣಗಾನವನ್ನು ಇಂದು ಮಾಡುವುದರಿಂದ ಆಶ್ಚರ್ಯವಾಗುವುದು. ಆತನು ತನ್ನ ಹಿಂದೆ ಮಾಡಿದ ತಪ್ಪುಗಳಿಗಾಗಿ ಕ್ಷ ಮೆಯಾಚಿಸುವನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top