fbpx
ಹೆಚ್ಚಿನ

ಹೂ ಕೀಳಲು ಹೋದವನಿಗೆ ಬುಸ್ ಎಂದ 10 ಅಡಿ ಕಾಳಿಂಗ ಸರ್ಪ, ಭಯದಿಂದ ಓಡಿದ ಜನ!!

ಹೂ ಕೀಳಲು ಹೋದವನಿಗೆ ಬುಸ್ ಎಂದ 10 ಅಡಿ ಕಾಳಿಂಗ ಸರ್ಪ, ಭಯದಿಂದ ಓಡಿದ ಜನ

 

ಹೂ ಕೀಳಲೆಂದು ಹೋದರವರಿಗೆ ಕಂಡದ್ದು 10 ಅಡಿ ಎತ್ತರದ ಹೆಡೆ ಎತ್ತಿದ ಕಾಳಿಂಗ ಸರ್ಪ, ಭಯಭೀತರಾದ ಜನ

 

 

ಉಡುಪಿಯ ಕಾರ್ಕಳ ತಾಲೂಕಿನ ಚೆನ್ನಯ ಥೀಂ ಪಾರ್ಕನಲ್ಲಿ ಹೂ ಕೀಳಲೆಂದು ಹೋದ ಅಲ್ಲಿನ ವಸತಿ ಗೃಹದ ಜನರು ಕಂಡದ್ದು 10 ಅಡಿ ಎತ್ತರದ ಹೆಡೆ ಎತ್ತಿದ ಕಾಳಿಂಗ ಸರ್ಪ.
ಇದನ್ನು ನೋಡಿ ಭಯಭೀತರಾದ ಜನ ಒಡಲು ಪ್ರಾರಂಭಿಸಿದರು ನಂತರ ಹಾವುಗಳ ತಜ್ಞರಾದಂತಹ ಅನಿಲ್ ಪ್ರಭುರವರಿಗೆ ತಿಳಿಸಿದ್ದಾರೆ.

 

 

ಮಾಹಿತಿ ತಿಳಿದು ಆ ಸ್ಥಳಕ್ಕೆ ಬಂದ ಅವರು ಯಾವುದೇ ಉಪಕರಣವಿಲ್ಲದೆ ಆ ಭಯಾನಕವಾದ ಕಾಳಿಂಗ ಸರ್ಪ ಹಿಡಿದು ಅವರ ಸಾಹಸ ಮೆರೆದಿದ್ದಾರೆ.
ನಂತರ ಸರ್ಪವನ್ನು ಸೆರೆಹಿಡಿದ ನಂತರ ಅಲ್ಲಿನ ಜನರಿಗೆ ಅದರ ಬಗ್ಗೆ ಮಾಹಿತಿಯನ್ನು ಕೊಟ್ಟು ಆ ಕಾಳಿಂಗ ಸರ್ಪವನ್ನು ಕುದುರೆಮುಖ ರಕ್ಷಿತಾರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಈ ದಿನಗಳಲ್ಲಿ ಆಹಾರಕ್ಕೆ ಹುಡುಕಾಟ ಮಾಡಿಕೊಂಡು ನಾಡಿಗೆ ಬರುವ ಸರ್ಪಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.

 

 

ಕಾಳಿಂಗ ಸರ್ಪ ವು (ಒಫಿಯೊಫಗಸ್‌ ಹನ್ನಾ ) ೫.೬ ಮೀಟರ್‌ಗಳವರೆಗೆ (೧೮.೫ ಅ) ಬೆಳೆಯುವ ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಆಗಿದೆ. ಈ ಗುಂಪಿಗೆ ಸೇರಿದ ಹಾವುಗಳು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತವೆ. ಇವುಗಳು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top