fbpx
ದೇವರು

ರಾಜ ಕೌಶಿಕನು ಒಂದು ಪುಟ್ಟ ಹಸುವಿಗೆ ಆಸೆ ಪಟ್ಟು , ಆ ಆಸೆ ಅವನ ಅಹಂಕಾರ ಇಳಿಸಿ ನಂತರ ಎಲ್ಲ ಬಿಟ್ಟು ಬ್ರಹ್ಮರ್ಷಿ ವಿಶ್ವಾಮಿತ್ರನಾದ , ಓದಿ ಕಥೆ ಚೆನ್ನಾಗಿದೆ

ರಾಜ ಕೌಶಿಕನು ಒಂದು ಪುಟ್ಟ ಹಸುವಿಗೆ ಆಸೆ ಪಟ್ಟು , ಆ ಆಸೆ ಅವನ ಅಹಂಕಾರ ಇಳಿಸಿ ನಂತರ ಎಲ್ಲ ಬಿಟ್ಟು ಬ್ರಹ್ಮರ್ಷಿ ವಿಶ್ವಾಮಿತ್ರನಾದ , ಓದಿ ಕಥೆ ಚೆನ್ನಾಗಿದೆ

ವಿಶ್ವಾಮಿತ್ರ ಮಹರ್ಷಿಗಳ ಕಥೆ .

ಒಂದು ದಿನ ಅಯೋಧ್ಯೆಯಲ್ಲಿ ದಶರಥನ ಅರಮನೆಗೆ ಬ್ರಹ್ಮರ್ಷಿ ವಿಶ್ವಾಮಿತ್ರ ಮಹರ್ಷಿಗಳು ಬಂದರು. ಆ ಸಮಯದಲ್ಲಿ ರಾಜ ಕೌಶಿಕನು ತನ್ನ ಅಸಾಧ್ಯವಾದ ಹಟದಿಂದ ಬ್ರಹ್ಮರ್ಷಿ ವಿಶ್ವಾಮಿತ್ರನಾದ ವಿಷಯವನ್ನು ರಾಮಾಯಣದಲ್ಲಿ ವಿವರಿಸಲಾಗಿದೆ. ಅದರಂತೆ ವಿಶ್ವಾಮಿತ್ರರು ಸುದೀರ್ಘವಾದ ತಪಸ್ಸನ್ನು ಆಚರಿಸಿದ್ದು ಅಸಾಧ್ಯವಾದ ಅಮೋಘವಾದ ಕಾರ್ಯಗಳನ್ನು ಸಹ ಮಾಡಿದ ಮಹಾನುಭಾವರಾಗಿದ್ದರು. ಅವರ ಚರಿತ್ರೆಯೇ ವಿಚಿತ್ರವಾದದ್ದು.

 

ಹಿಂದೆ ಬ್ರಹ್ಮನ ಮಾನಸಪುತ್ರರಾದ ಕುಶ ಎಂಬುವವರಿಗೆ ಕುಷಾಂಬ, ಕುಶನಾಭ, ಅದೂರ್ಥರಜಸ್ಸು ಮತ್ತು ವಸು ಎಂಬ ಮಕ್ಕಳಿದ್ದರು. ಅವರಲ್ಲಿ ಕಲಹವಾಗಬಾರದೆಂಬ ಕಾರಣದಿಂದಾಗಿ ಕುಶನು ನಾಲ್ವರಿಗೆ ರಾಜ್ಯಗಳನ್ನು ಬೇರೆ ಬೇರೆಯಾಗಿ ವಹಿಸಿಕೊಟ್ಟನು.
ಕುಶಾಂಬನು ಕೌಶಾಂಬಿಗೆ ಅಧಿಪನಾದರೆ, ಕುಶನಾಭನು ಮಹೋದಯವನ್ನು ಆಳಿಕೊಂಡಿದ್ದನು.

ಅದೂರ್ಥರಜಸ್ಸು ಧರ್ಮಾ ರಣದಲ್ಲಿದ್ದರೆ ವಸುವು ಗಿರಿವಜ್ರದಲ್ಲಿದ್ದನು. ಕುಶನಾಭನ ಮಗನ ಹೆಸರು ಗಾದಿ. ಅವನ ಮಗನೇ ಕೌಶಿಕನು. ಕೌಶಿಕನನ್ನು ‘ಗಾದಿತನಯ’ ಎಂದು ಕರೆದಿದ್ದಾರೆ. ಕೌಶಿಕನು ವೀರನಾಗಿದ್ದನು.ಒಮ್ಮೆ ಅಕ್ಷೋಹಿಣಿ ಸೇನೆಯೊಂದಿಗೆ ಕೌಶಿಕನು ಭೂ ಪ್ರದಕ್ಷಿಣೆಗಾಗಿ ಹೊರಟನು ಈ ಸೈನ್ಯದಲ್ಲಿ 21,870 ಆನೆಗಳು, 21,870 ರಥಗಳು, 65,610 ಕುದುರೆಗಳು ಮತ್ತು 1,09,350 ಸೈನಿಕರು ಇದ್ದರು. ಅವರು ಅನೇಕ ದೇಶಗಳನ್ನು ದಾಟಿ ಕೊನೆಗೆ ವಸಿಷ್ಠರ ಆಶ್ರಮ ಇರುವ ಸ್ಥಳಕ್ಕೆ ಬಂದರು. ಕೌಶಿಕನು ಆಶ್ರಮವನ್ನು ಪ್ರವೇಶಿಸಿದನು.

 

 

ವಸಿಷ್ಠರು ಬ್ರಹ್ಮರ್ಷಿಗಳಾಗಿದ್ದರು. ಅವರ ಆಶ್ರಮವು ಶಾಂತವಾದಂತಹ ಸ್ಥಳದಲ್ಲಿತ್ತು. ಈ ಆಶ್ರಮಕ್ಕೆ ದೇವರ್ಷಿಗಳು, ಬ್ರಹ್ಮರ್ಷಿಗಳು, ರಾಜರ್ಶಿಗಳು ಬರುತ್ತಿದ್ದರು. ಅನೇಕ ಮಹರ್ಷಿಗಳು ಯಾವಾಗಲೂ ಇರುತ್ತಿದ್ದರು. ಈ ಸುಂದರವಾದ ವಸಿಷ್ಠರ ಆಶ್ರಮವನ್ನು ರಾಜಾ ಕೌಶಿಕನು ಪ್ರವೇಶಿಸಿದಾಗ ತಪೋವನದ ಹೊರಗೆ ಸೈನ್ಯವನ್ನು ನಿಲ್ಲಿಸಿದ್ದನು. ಆಶ್ರಮದ ಪರಿಸರದಲ್ಲಿ ಅನೇಕ ಮೃಗ ,ಪಕ್ಷಿಗಳು, ಪ್ರಾಣಿಗಳು ಓಡಾಡುತ್ತಿದ್ದವು.

ಪೂಜ್ಯರಾದ ಸಪ್ತರ್ಷಿಗಳಲ್ಲಿ ಒಬ್ಬರಾದ ಬ್ರಹ್ಮಮಾನಸ ಪುತ್ರರಾದ ವಸಿಷ್ಠರನ್ನು ಕಂಡು ಕೌಶಿಕನು ಸಾಷ್ಟಾಂಗ ನಮಸ್ಕಾರ ಸಲ್ಲಿಸಿದನು. ಮಹಾ ತಪಸ್ವಿಗಳಾದ ವಸಿಷ್ಟರು ರಾಕ್ಷಸರಿಂದ ಇಂದ್ರನನ್ನು ರಕ್ಷಿಸಿದವರು ಅವರ ಪತ್ನಿ ಅರುಂಧತಿ ದೇವಹೂತಿಯ ಮಗಳು ಜ್ಞಾನಿಗಳಾಗಿದ್ದರಿಂದ ಬ್ರಹ್ಮರ್ಷಿ ವರಿಷ್ಠರೆಂದೇ ಪ್ರಸಿದ್ಧರಾಗಿದ್ದರು. ಅವರು ಕೌಶಿಕನನ್ನು ಕುಳ್ಳಿರಿಸಿ ಕುಶಲವನ್ನು ಕೇಳಿದರು. ಆಶ್ರಮದ ಆತಿಥ್ಯವನ್ನು ಸ್ವೀಕರಿಸಲು ಕೇಳಿದರು. ಕೌಶಿಕ ರಾಜನಿಗೆ ಸಂತಸವಾಯಿತು. ಆದರೆ ತನ್ನಲ್ಲಿ ಸೈನ್ಯಕ್ಕೆಲ್ಲಿ ಆತಿಥ್ಯ ಉಂಟಾಗುವುದೆಂದು ತಿಳಿದಿರಲಿಲ್ಲ.

 

 

 

ಕಾಮಧೇನು ಶಬಲೆ.

ವಸಿಷ್ಠರು ಆಶ್ರಮದಲ್ಲಿದ್ದ ಕಾಮಧೇನು ‘ಶಬಲೆ’ ಗೆ ರಾಜಾ ಕೌಶಿಕ ಮತ್ತು ಆತನ ಸೈನಿಕರೆಲ್ಲರಿಗೂ ಉತ್ತಮವಾದ ಔತಣವನ್ನು ಉಣಬಡಿಸುವಂತೆ ಕೇಳಿದರು. ಆ ಕ್ಷಣದಲ್ಲಿ ಎಲ್ಲರಿಗಾಗಿ ಅತ್ಯುತ್ತಮವಾದ ಊಟವು ಸಿದ್ಧವಾಯಿತು. ಬೆಳ್ಳಿಯ ತಟ್ಟೆಗಳಲ್ಲಿ ಘಮಘಮಿಸುವ ಮೃಷ್ಟಾನ್ನ ಸಿದ್ಧವಾದಾಗ ವಿವಿಧ ಬಗೆಯ ಊಟದ ವಸ್ತುಗಳನ್ನು ಕೃಷಿಕನು ಕಂಡು ಆಶ್ಚರ್ಯ ಪಟ್ಟನು. ಅನ್ನ ತೊವ್ವೆ, ಪಾಯಸ , ಗಟ್ಟಿ ಹಾಲು, ತುಪ್ಪ ಮೊಸರು ಸಿಹಿ ತಿಂಡಿಗಳು ಕಬ್ಬಿನ ಹಾಲು ಸುವಾಸಿತ ನೀರು ಹರಿವಾಣದಲ್ಲಿ ವೀಳ್ಯದೆಲೆಗಳು ಸುಗಂಧದ್ರವ್ಯಗಳು ಎಲ್ಲವನ್ನು ರಾಜಾ ಕೌಶಿಕ ಮತ್ತು ಅವನು ಪರಿವಾರದವರು ಸೈನಿಕರು ಸೇವಿಸಿ ತೃಪ್ತರಾದರು. ಕೇವಲ ಒಂದು ಹಸು ಇಷ್ಟೆಲ್ಲ ನೀಡಿತೆ ? ಎಂದು ಆಶ್ಚರ್ಯಉಂಟಾಯಿತು. ಹಸುವನ್ನು ತಾನು ಪಡೆಯಬೇಕೆಂಬ ದುರಾಸೆ ಕೌಶಿಕನಿಗೆ ಉಂಟಾದಾಗ ವಸಿಷ್ಠರನ್ನು ಕಂಡು “ ಮಹರ್ಷಿಗಳೇ, ನೀವು ಈ ಶಬಲೆಯನ್ನು ನನಗೆ ಕೊಡಿರಿ, ಅದರ ಬದಲಿಗೆ ಸಾವಿರಾರು ಗೋವುಗಳನ್ನು ನಿಮಗೆ ಕೊಡುತ್ತೇನೆ” ಎಂದು ಹೇಳಿದನು.ಅದಲ್ಲದೆ ಆಶ್ರಮದ ಖರ್ಚಿಗಾಗಿ ಕೋಟಿಗಟ್ಟಲೇ ಹಣ ಕೊಡುತ್ತೇನೆಂದು ಕೌಶಿಕನು ಹೇಳಿದಾಗ ವಸಿಷ್ಠರು ‘ಈ ಶಬಲೆ’ ದೇವಲೋಕದ ಹಸು, ಅದನ್ನು ನಾನು ಯಾರಿಗೂ ಕೊಡಲು ಸಾಧ್ಯವಿಲ್ಲ. ಅಲ್ಲದೆ ಅದು ಸಾಮಾನ್ಯ ಹಸು ಅಲ್ಲ, ಅದು ನನ್ನ ಬಿಟ್ಟು ಬೇರೆ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದರು.

 

 

ವಸಿಷ್ಠರು ಬೇಕೆಂದೇ ಕೊಡಲು ಬಯಸುವುದಿಲ್ಲವೆಂದು ತಿಳಿದ ಕೌಶಿಕನು ಸಿಟ್ಟಿಗೆದ್ದನು. ಆವಿವೇಕಿಯಾಗಿ ವಸಿಷ್ಠರನ್ನು ನಿಂದಿಸಿ ಮಾತಾಡಿದನು. ನೀವು ಬ್ರಹ್ಮರ್ಷಿಗಳೆಂದು ಗೌರವಿಸಿ ಕೇಳಿದೆ. ನನ್ನ ರಾಜ್ಯದಲ್ಲಿ ಇರುವ ವಸ್ತುಗಳೆಲ್ಲ ನನ್ನವೇ.ನಾನು ಈ ದೇಶದ ರಾಜನು. ನಾನು ಈಗ ಅಧಿಕಾರದಿಂದ ಬಲಾತ್ಕಾರವಾಗಿ ಶಬಲೆಯನ್ನು ಕರೆದೊಯ್ಯುವೆನು ಎಂದು ಹೇಳಿ ಶಕ್ತಿಯಿದ್ದರೆ ತಡೆಯಿರಿ ಎಂದು ಸೈನಿಕರಿಗೆ ಶಬಲೆಯನ್ನು ಹಿಡಿದು ತರಲು ಆದೇಶ ಮಾಡಿದನು. ಶಬಲೆಯು ಒಮ್ಮೆ ಮೈ ಕೊಡವಿತು. ಆ ಕ್ಷಣದಲ್ಲಿ ಅದರ ಮೈಯಿಂದ ಸಾವಿರಾರು ಸೈನಿಕರು ಹೊರಬಂದರು. ಶಬಲೆ ಅಂಬಾ ಎಂದಾಗ ಕೌಶಿಕನ ಸೈನಿಕರನ್ನು ಓಡಿಸಿ ಬಿಟ್ಟರು.ತನ್ನ ಸೈನಿಕರು ಹೆದರಿ ಓಡಿದಾಗ ಕೌಶಿಕನು ನಾನು ಇಷ್ಟು ಪರಾಕ್ರಮಿಯಾದರೂ ಈ ದನದಿಂದ ಸೋಲಬೇಕಾಯಿತಲ್ಲ ಎಂದು ರಾಜ್ಯಕ್ಕೆ ಮರಳಿದ ತಕ್ಷಣವೇ ತಪಸ್ಸಿಗಾಗಿ ಹಿಮಾಲಯಕ್ಕೆ ಹೋದನು. ಅಲ್ಲಿ ಶಿವನ ಕರುಣೆಯಿಂದ ಅಸ್ತ್ರಗಳನ್ನು ಪಡೆದು ವಸಿಷ್ಠರ ಶಬಲೆಯ ವಿರುದ್ಧ ಪ್ರತೀಕಾರಕ್ಕಾಗಿ ಸೇನಾ ಸಹಿತನಾಗಿ ಬಂದನು.

ಕೌಶಿಕನು ಆಶ್ರಮದ ಮೇಲೆ ಬಂದು ಪ್ರಬಲವಾದ ಅಸ್ತ್ರವೊಂದನ್ನು ಬಿಟ್ಟನು. ಆಶ್ರಮದಲ್ಲಿ ಎಲ್ಲ ಕಡೆ ಉರಿಯುತ್ತಿರುವ ಅಗ್ನಿಯನ್ನು ಕಂಡ ವಸಿಷ್ಠರು ಎಲ್ಲರನ್ನೂ ಸಮಾಧಾನಗೊಳಿಸಿದರು. ನಂತರ ತಮ್ಮ ಬ್ರಹ್ಮ ದಂಡವನ್ನು ಎದುರಿಗಿಟ್ಟು ಕುಳಿತರು ಬೆಂಕಿ ಎಲ್ಲ ನಾಶವಾಯಿತು. ಕೌಶಿಕನು ಇನ್ನೊಂದು ಅಸ್ತ್ರವನ್ನು ಬಿಟ್ಟಾಗ ಬ್ರಹ್ಮದಂಡವೇ ಆ ಅಸ್ತ್ರವನ್ನು ನುಂಗಿತು. ಕೌಶಿಕನು ಎಲ್ಲಾ ಅಸ್ತ್ರಗಳ ಗತಿಯೂ ಇದೇ ಆದಾಗ ನೂರಾರು ಅಸ್ತ್ರಗಳನ್ನು ಪ್ರಯೋಗಿಸಿದಾಗಲೂ ವಸಿಷ್ಠರಿಗೆ ಅವರ ಆಶ್ರಮಕ್ಕೆ ಏನೂ ತೊಂದರೆ ಉಂಟಾಗಲಿಲ್ಲ ಅದನ್ನು ತಿಳಿದು ಕೌಶಿಕನು ಕೊನೆಯ ಪ್ರಯತ್ನವಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಮೂರು ಲೋಕದ ಜನರು ಹೆದರಿದ ಸಮಯದಲ್ಲಿ ವಸಿಷ್ಠರ ಬ್ರಹ್ಮದಂಡ ಬ್ರಹ್ಮಾಸ್ತ್ರವನ್ನು ನುಂಗಿ ಹಾಕಿತ್ತು.

 

 

 

ಆಗ ಕೌಶಿಕನಿಗೆ ಬ್ರಹ್ಮ ಬಲವೇ ನಿಜವಾದ ಬಲವು. ಅದರ ಮುಂದೆ ಕ್ಷತ್ರಿಯ ಬಲಕ್ಕೆ ಬೆಲೆಯಿಲ್ಲ ಎಂದು ಅರಿವಾಯಿತು. ತಾನೂ ಸಹ ತಪಸ್ಸಿನಿಂದ ಬ್ರಹ್ಮ ಬಲವನ್ನು ಪಡೆಯಬೇಕೆಂಬ ಛಲವುಂಟಾಯಿತು. ಆದುದರಿಂದ ಮೊದಲಿಗೆ ಕೌಶಿಕನು ದಕ್ಷಿಣ ದಿಕ್ಕಿಗೆ ಹೋಗಿ ತಪಸ್ಸನ್ನಾಚರಿಸಿದ್ದನು. ಆಗ ಬ್ರಹ್ಮದೇವನು ಮೆಚ್ಚಿ ಬಂದು ನೀನೀಗ ರಾಜರ್ಷಿ ಎಂದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top