fbpx
ಸಿನಿಮಾ

ತೂಕ ಇರುವ ಪಾತ್ರ ಇದ್ದಲ್ಲಿ ಕನ್ನಡದಲ್ಲಿ  ನಟಿಸಲು ಸಿದ್ದ – ಅಲ್ಲು ಶಿರೀಷ್

ತೂಕ ಇರುವ ಪಾತ್ರ ಇದ್ದಲ್ಲಿ ಕನ್ನಡದಲ್ಲಿ  ನಟಿಸಲು ಸಿದ್ದ – ಅಲ್ಲು ಶಿರೀಷ್

 

ತೆಲುಗು  ನಟ ಅಲ್ಲುಶಿರೀಷ್  ತಮ್ಮ  ಪ್ರತಿ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆ  ‘ಒಕ್ಕ ಕ್ಷಣಂ’ ಚಿತ್ರವು ಗುರುವಾರ ಬಿಡುಗಡೆ ಆಗುತ್ತಿರುವುದರಿಂದ  ನಾಯಕಿಯರಾದ ಸುರಭಿ, ಸೀರಥ್‍ಕಪೂರ್ ಅವರೊಂದಿಗೆ  ಮಾದ್ಯಮದವರನ್ನು  ಕಂಡು  ಸಿನಿಮಾದ ಕುರಿತು  ಮತ್ತು ಪತ್ರಕರ್ತರ  ಪ್ರಶ್ನೆಗಳಿಗೆ ಉತ್ತರವಾದರು.

 

 

ಅಶಿ)ಒಕ್ಕ ಕ್ಷಣಂ ಯಾವ ಜಾನರ್ ಸೇರಲಿದೆ?

•   ಇದೊಂದು ರೋಮಾಂಟಿಕ್ ಥ್ರಿಲ್ಲರ್ ಚಿತ್ರ. ನನ್ನ ಬದುಕಿನಲ್ಲಿ ಆಗುವ  ಘಟನೆಗಳು  ಬೇರೊಬ್ಬರಲ್ಲಿ ನಡೆಯುತ್ತಿರುತ್ತದೆ.   ಸೈನ್ಸ್ ಫಿಕ್ಷನ್ ರೀತಿಯಂತೆ ಚಿತ್ರಕತೆ ಹೋಗುತ್ತದೆ.  ಹದಿನೈದು ಕೋಟಿ ಖರ್ಚಾಗಿದೆ. ಹೆಚ್ಚಿನ ವಿಷಯ ತಿಳಿಯಲು ಸಿನಿಮಾ ನೋಡಿ (ನಗುತ್ತಾ)ಅಶಿ) ಇಬ್ಬರು  ನಾಯಕಿಯರೊಂದಿಗೆ ನಿಮ್ಮ ಚಿತ್ರೀಕರಣ ಅನುಭವ

 

 

• ನಿರ್ದೇಶಕ ವಿ.ಆನಂದ್ ನಮ್ಮ ಕುಟುಂಬದ ಚಿತ್ರಗಳಿಗೆ ಕೆಲಸ ಮಾಡಿದವರು. ಮೊದಲಬಾರಿ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ನನಗೆ ಸುರಭಿ ಜೋಡಿಯಾಗಿದ್ದಾರೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ಶ್ರೀನಿವಾಸ್ ಅವಸರಳ ಇವರಿಗೆ ಸೀರತ್‍ಕಪೂರ್ ಇದ್ದಾರೆ.

 

ಅಶಿ)ಚಿತ್ರದಲ್ಲಿ ನಿಮಗೆ ಇಷ್ಟದ ಹಾಡು

• ಮಣಿಶರ್ಮ ಅದ್ಬುತವಾಗಿ ಸಂಗೀತ ನೀಡಿದ್ದಾರೆ. ಡೊಲೋರೆ ಗೀತೆ ಇಷ್ಟವಾಗಿದೆ.

 

ಅಶಿ) ಕನ್ನಡದಲ್ಲಿ  ಯಾವ ಸಿನಿಮಾಗಳನ್ನು ನೋಡಿದ್ದೀರಾ?

• ಅದ್ದೂರಿ, ಹೆಬ್ಬುಲಿ, ಯುಟರ್ನ್

 

ಅಶಿ) ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್ ಅವರೊಂದಿಗಿನ ಒಡನಾಟ ಹೇಗಿದೆ.

• ಮಾಮ ಚಿರಂಜೀವಿ ಕಾಲದಿಂದಲೂ ಅವರು ನಮ್ಮ ಕುಟುಂಬಕ್ಕೆ ಹತ್ತಿರದವರಾಗಿದ್ದಾರೆ. ಮೊನ್ನೆ ಟಗರು ಧ್ವನಿಸುರಳಿ ಕಾರ್ಯಕ್ರಮಕ್ಕೆ  ಬಂದಾಗ ಶಿವಣ್ಣರೊಂದಿಗೆ ಡ್ಯಾನ್ಸ್  ಮಾಡಿದ್ದು ಮರೆಯಲಿಕ್ಕೆ ಸಾದ್ಯವಿಲ್ಲ. ಪುನೀತ್ ತುಂಬ ಸರಳವ್ಯಕ್ತಿ. ಇಲ್ಲಿನ ಸೆಟ್‍ಗೆ ಭೇಟಿ ನೀಡಿ ಮಾತನಾಡಿಸಿದ್ದು  ಖುಷಿ  ತಂದಿದೆ.

 

 

ಅಶಿ)ಕನ್ನಡ ಚಿತ್ರದಲ್ಲಿ ನಟಿಸಲು ಆಸಕ್ತಿ ಇದೆಯಾ?

• (ಹಹಹ..) ಪಾತ್ರ ತೂಕ ಇದ್ದಲ್ಲಿ ನಟಿಸಲು ಸಿದ್ದ. ಅದು ನಾಯಕ ಆಗಿರಬೇಕಂದು ಇಲ್ಲ. ಪ್ರೇಕ್ಷಕರು ಗುರುತಿಸುವಂತಿರಬೇಕು.

 

ಅಶಿ)ನಿಮ್ಮ ಯೌವ್ವನದ ಗುಟ್ಟೇನು”

• ಹದಿನೇಳು ವರ್ಷ ಇರುವಾಗ 102 ಕೆ.ಜಿ ತೂಕ ಇತ್ತು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದರಿಂದ ಎಲ್ಲವು  ಸುಗುಮವಾಗಿ 25 ಕೆ.ಜಿ ಕಡಿಮೆ ಆಗಿದೆ. ವಿಲ್ ಪವರ್ ಇದ್ದರೆ ಏನು ಬೇಕಾದರೂ ಮಾಡಬಹುದು.

 

ಅಶಿ)ರಾಜಕೀಯಕ್ಕೆ  ಧುಮುಕಲು ಏನಾದರೂ ಯೋಜನೆಗಳು ಇದೆಯಾ?

• ಚಿತ್ರರಂಗ ಹೂರತುಪಡಿಸಿ ಬೇರೇಲ್ಲೂ ಆಸಕ್ತಿ ಇಲ್ಲ. ಉತ್ತಮ ಚಿತ್ರಗಳನ್ನು   ಕೊಡುವುದೊಂದೆ  ಧ್ಯೇಯವಾಗಿದೆ.

 

ಅಶಿ)ಬೇರೆ ಯಾವ ನಟರು ನಿಮಗೆ  ಗೊತ್ತಿದೆ.

• ಅರ್ಜುನ್‍ಸರ್ಜಾ, ಧ್ರುವಸರ್ಜಾ, ದಿಗಂತ್ ಅವರೊಂದಿಗೆ ಪರಿಚಯವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top