ಡಿಸೆಂಬರ್ ಕೊನೆವಾರ ಚಮಕ್ ಕೊಡೋಕೆ ಬರ್ತಿದ್ದಾರೆ ಗಣೇಶ್ !
ಅದೃಷ್ಟ ಒಲಿಯುತ್ತ ನಿರ್ದೇಶಕ ಸುನಿಗೆ ?
ಡಿಸೆಂಬರ್ ಕೊನೆವಾರ ಚಮಕ್‍ಗೆ ಅದೃಷ್ಟದ ಸಂಕೇತ ‘ಚಮಕ್’ ಚಿತ್ರವು ಇದೇ ತಿಂಗಳು 29ರಂದು ತೆರೆಕಾಣುತ್ತಿರುವ ಕಾರಣ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯನ್ನು ನಿರ್ಮಾಪಕರು ಹಮ್ಮಿಕೊಂಡಿದ್ದರು. ಅಂಕಿ-ಅಂಶಗಳ ಪ್ರಕಾರ ಚಿತ್ರಕ್ಕೆ ಒಳ್ಳೆಯದೇ ಆಗುತ್ತಾ ಬಂದಿದೆ. ಮೊದಲಬಾರಿ ಸ್ಟಾರ್ ಮತ್ತು ಬಿಗ್ ಬಜೆಟ್ ಚಿತ್ರ ಮಾಡಿದ್ದೇನೆ. ಕತೆ ಬರೆಯಲು 2-3 ವರ್ಷ ಸಮಯ ತೆಗೆದುಕೊಳ್ಳಲಾಗಿದೆ. ವೈದ್ಯನಾಗಿ ಗಣೇಶ್ ಒಡ್ಕಾ ನೀರು, ಸಂಪ್ರದಾಯಸ್ಥ ಹುಡುಗಿಯಾಗಿ ರಶ್ಮಿಕಾಮಂದಣ್ಣಾ ತೀರ್ಥ. ಮನರಂಜನೆ, ಭಾವನಾತ್ಮಕ ಅಂಶಗಳು ಹೇರಳವಾಗಿದೆ. ಮುಂಗಾರುಮಳೆ, ಕಿರಿಕ್ ಪಾರ್ಟಿ 29ರಂದು ತೆರೆಕಂಡಿತ್ತು. ಅದರಂತೆ ಇದು ಸಹ ಅದೇ ದಿನ ಬರುತ್ತಿರುವುದರಿಂದ ಸಹಜವಾಗಿ ಸಕರಾತ್ಮಕವಾಗುತ್ತದೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಸುನಿ. ಶೀರ್ಷಿಕೆ ನೋಡಿ ಟಾಕೀಸ್ ಒಳಗಡೆ ಬಂದರೆ ಚಮಕ್ ಚಮಕ್ ದೃಶ್ಯಗಳು ಮನರಂಜನೆ ನೀಡುತ್ತದೆ. ಒಂದೊಂದು ಚಮಕ್ ಕೊಡುತ್ತಾ ಹೋಗುತ್ತದೆ. ಮದುವೆ ಆಗದೆ ಇರುವವರು, ಆಗುವವರು, ಆಗಿರುವವರು ಇದನ್ನು ನೋಡಲೇ ಬೇಕು. ಎಲ್ಲಾ ವರ್ಗಕ್ಕೂ ಆರೋಗ್ಯಕರವಾದ ಸಿನಿಮಾ ಅಂತ ಬಣ್ಣನೆ ಮಾಡಿದರು ನಾಯಕಿ ರಶ್ಮಿಕಾಮಂದಣ್ಣಾ.
ಸಕಲೇಶಪುರ ಅದೃಷ್ಟದ ಜಾಗ. ಅದೇ ಜಾಗದಲ್ಲಿ ನಿರ್ದೇಶಕರು ಕತೆ ಹೇಳಿದಾಗ ಇಷ್ಟವಾಯಿತು. ಬಿಡುಗಡೆ ದಿನಾಂಕ ನನ್ನ ಬದುಕನ್ನು ಬದಲಾಯಿಸಿದ ದಿನವಾಗಿದೆ. ಪ್ರಸೂತಿ ವೈದ್ಯನಾಗಿ ತರಲೆ, ಕೀಟಲೆ ಮಾಡುತ್ತಾ ಮದುವೆ ನಂತರ ಭಾವನೆಗಳಿಗೆ ಬೆಲೆ ಕೊಡುತ್ತನೆ. ಸಾಮಾಜಿಕ ಜಾಲತಾಣದಲ್ಲಿ ನೋಡಿರುವ ಹುಡುಗಿಯನ್ನು ನೋಡಲು ಬಂದಾಗ ಆಗುವ ಫಜೀತಿಯನ್ನು ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ. ಬಾಂದವ್ಯ, ಸಂಭಂದಗಳು ದೂರ ಹೋದಂತೆ ಏನೆಲ್ಲಾ ಆಗುತ್ತೆ ಎಂಬುದನ್ನು ಬೋರ್ ಆಗದಂತೆ ಸನ್ನಿವೇಶಗಳನ್ನು ಸೃಷ್ಟಸಿರುವುದು ಧನಾತ್ಮಕ ಅಂಶವಾಗಿದೆ. ರಶ್ಮಿಕಾರವರು ಮುಂದಿನವಾರ ಇರುವ ದೃಶ್ಯಕ್ಕೆ ಒಂದು ವಾರದ ಮುಂಚೆ ಸಂಭಾಷಣೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದರು. ನಿರ್ಮಾಪಕರ ಸಿನಿಮಾ ಅಭಿರುಚಿ ಚೆನ್ನಾಗಿರುವುದರಿಂದಲೇ ಇದು ತೆರೆಗೆ ಬರುವ ಮುನ್ನವೆ ಮೂರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳು ಮುಂಗಾರುಮಳೆ, ಶೈಲು, ಶ್ರಾವಣಿಸುಬ್ರಮಣಿ, ಮಳೆಯಲಿಜೊತೆಯಲಿ , ಸುಂದರಾಂಗಜಾಣ ತೆರೆಕಂಡು ಹಣ ಮಾಡಿತ್ತು. ಭಯ, ಖುಷಿ ಎರಡು ಒಟ್ಟಿಗೆ ಆಗುತ್ತಿದೆ ಅಂತ ಗಣೇಶ್ ಹೇಳಿದರು.
ನಿರ್ದೇಶಕರು ಕತೆ ಹೇಳಿದ್ದು, ಸಿನಿಮಾ ನೋಡಿದಂತೆ ಆಯಿತು. ಮೈಸೂರಿನಲ್ಲಿ ಉದ್ಯಮ ನಡೆಸುತ್ತಿರುವ ನಾನು ನಿರ್ಮಾಣ ಮಾಡುತ್ತೇನೆಂದು ಕನಸಿನಲ್ಲಿ ಎಣಿಸಿರಲಿಲ್ಲ. ಕನ್ನಡದ ಅಭಿಮಾನ, ಹಾಸ್ಯ ಪ್ರಿಯಾನಾಗಿದ್ದರಿಂದ ಕತೆಯ ತಿರುಳು ಇಷ್ಟವಾಗಿದೆ. ಬಿಡುಗಡೆ ಒಂದು ವಾರದ ನಂತರ ಅಮೇರಿಕಾದ 72 ಕೇಂದ್ರಗಳು, ಹಾಗು ಮತ್ತಷ್ಟು ದೇಶಗಳಲ್ಲಿ ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆ. ಆದ್ಯಾತ್ಮದಲ್ಲಿ ಒಲವು ಇರುವುದರಿಂದ ವೈಕುಂಠ ಏಕಾದಶಿ ಅಂದೇ ಬರಲಿದೆ. ಇದರಿಂದ ನನಗೂ ಅದೃಷ್ಟವೆಂದು ಭಾವಿಸಿದ್ದೇನೆ. ಸಂವಿಧಾನದಲ್ಲಿ ಪಿ.ಹೆಚ್‍ಡಿ ಮಾಡುತ್ತಿರುವುದಾಗಿ ಟಿ.ಆರ್.ಚಂದ್ರಶೇಖರ್ ಸಾಧನೆಗಳನ್ನು ನೆನಪು ಮಾಡಿಕೊಂಡರು.
ಭಾರತದಲ್ಲಿ ಮೊದಲಬಾರಿ ಹ್ಯಾರಿ ಅಲೆಕ್ಸ್ 560 ಕ್ಯಾಮಾರದಲ್ಲಿ ಇಟಲಿಯ ಸುಂದರ ತಾಣಗಳನ್ನು ಸೆರೆಹಿಡಿಯಲಾಗಿದೆ. ನಿರ್ಮಾಪಕರು ಧಾರಳವಾಗಿ ಖರ್ಚು ಮಾಡಿದ್ದರಿಂದಲೇ ಚಿತ್ರವು ಚೆನ್ನಾಗಿ ಮೂಡಿಬಂದಿದೆ ಎಂದು ಹೊಗಳಿದ್ದು ಛಾಯಗ್ರಾಹಕ ಸಂತೋಷ್‍ರೈಪಾತಾಜೆ. ನಾಯಕಿ ಅಜ್ಜಿಯಾಗಿ ಕಾಣಿಸಿಕೊಂಡಿರುವ ವಿಜಯಲಕ್ಷೀ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎನ್ನುವಲ್ಲಿಗೆ ಎಲ್ಲರ ಮಾತುಗಳಿಗೆ ವಿರಾಮ ಹಾಕಲಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
