fbpx
ಹೆಚ್ಚಿನ

ಆಧಾರ್ ಮತ್ತು ಜಿಎಸ್.ಟಿ ಹಿಂದಿಕ್ಕಿ 2017 ರ ಟ್ರೇಡಿಂಗ್ ಲಿಸ್ಟನಲ್ಲಿ ಮೊದಲ ಸ್ಥಾನ ಪಡೆದ ಮೋದಿಯವರ “ಮನ್ ಕಿ ಬಾತ್”

#Aadhar ಮತ್ತು #GST ಮೀರಿಸಿ 2017 ರ ಟ್ರೇಡಿಂಗ್

ಲಿಸ್ಟನಲ್ಲಿ ಮೊದಲ ಸ್ಥಾನ ಪಡೆದ ಮೋದಿಯವರ ಮನ್ ಕಿ ಬಾತ್

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್” 2017 ರಲ್ಲಿ ಟ್ವಿಟರ್ನಲ್ಲಿ ಅತಿ ಹೆಚ್ಚು ಟ್ರೆಂಡಿಂಗ್ ಹ್ಯಾಷ್ ಟ್ಯಾಗ್ ಆಗಿ ಹೊರಹೊಮ್ಮಿದೆ. #Aadhar ಮತ್ತು #GST ಯನ್ನು ಹಿಂದೆ ಹಾಕಿ ಪ್ರಥಮ ಸ್ಥಾನ ಪಡೆದಿದೆ. ಟ್ವಿಟ್ಟರ್ ಈ ಮಾಹಿತಿಯನ್ನು ಘೋಷಿಸಿದೆ.

 

 

“ಮಾನ್ ಕಿ ಬಾತ್” ಕಾರ್ಯಕ್ರಮವು ಆಲ್ ಇಂಡಿಯಾ ರೇಡಿಯೋ, ಡಿಡಿ ನ್ಯಾಷನಲ್ ಮತ್ತು ಡಿಡಿ ನ್ಯೂಸ್ನಲ್ಲಿ ರಾಷ್ಟ್ರದ ಜನರನ್ನು ಉದ್ದೇಶಿಸಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಿ ಮೋದಿಯವರು ಮಾತನಾಡುತ್ತಾರೆ.

 

 

#MumbaiRains ಮತ್ತು #TripleTalaq ಹ್ಯಾಷ್ ಟ್ಯಾಗ್ ಗಳು ಕ್ರಮವಾಗಿ ನಾಲ್ಕು ಹಾಗು ಐದನೇ ಸ್ಥಾನದಲ್ಲಿವೆ.

ತಮಿಳಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು 2016 ರಲ್ಲಿ ಗಮನ ಸೆಳೆದಿತ್ತು.

ಇನ್ನುಳಿದ ಪ್ರಸಿದ್ದ್ದ ಹ್ಯಾಷ್ ಟ್ಯಾಗಳೆಂದರೆ #Demonetisation, #SwachhBharat, #UttarPradesh, #GujaratElections

 

 

ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಲಹೆಗಳನ್ನು ಪಡೆಯುತ್ತಾರೆ. ಸಾರ್ವಜನಿಕರು ತಾವು ನೀಡಬೇಕಾದ ಸಲಹೆಯನ್ನು 1800-11-7800 ಕ್ಕೆ ಕರೆ ಮಾಡಿ ಮನ್ ಕಿ ಬಾತ್ ಗಾಗಿ ಸಂದೇಶವನ್ನು ರೆಕಾರ್ಡ್ ಮಾಡಿ ಕಳುಹಿಸಬೇಕು, My Goverment ಆಪ್ ಮೂಲಕವೂ ಸಹ ಸಲಹೆಗಳನ್ನು ನೀಡಬಹುದು. ಮೋದಿಯವರ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಿಂದಾಗಿ ಆಕಾಶವಾಣಿಗೆ ಈವರೆಗೆ ಬರೊಬ್ಬರಿ 10 ಕೋಟಿ ರೂ ಆದಾಯ ಹರಿದುಬಂದಿದೆ. ನಷ್ಟದಲ್ಲಿದ್ದ ಆಕಾಶವಾಣಿ ಮತ್ತೆ ಲಾಭದತ್ತ ಮುಖಮಾಡಿದೆ.

38ನೇ ಮನ್ ಕಿ ಬಾತ್’ನಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ಮೋದಿಯವರು ಕರ್ನಾಟಕದ ಮಕ್ಕಳ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಮಕ್ಕಳು ಅನೇಕ ಸಮಸ್ಯೆಗಳ ಬಗ್ಗೆ ತಿಳಿಸಿ ತಮಗೆ ಪತ್ರ ಬರೆದಿದ್ದಾರೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top