fbpx
ಮನೋರಂಜನೆ

2017ರ ಅತ್ಯುತ್ತಮ ಪ್ರಚಾರಕಲೆ:ಸಾಯಿ ಕೃಷ್ಣ ( ಮುಗುಳುನಗೆ )

2017ರ ಅತ್ಯುತ್ತಮ ಪ್ರಚಾರಕಲೆ:ಸಾಯಿ ಕೃಷ್ಣ ( ಮುಗುಳುನಗೆ )

 

 

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಈ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ…
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ…

 

 

ಒಂದು ಸಿನಿಮಾದ ಗೆಲುವಿನಲ್ಲಿ ಪ್ರಚಾರ ಕಲೆಯದ್ದು ಪ್ರಧಾನ ಪಾತ್ರ. ಈ ಚಿತ್ರದಲ್ಲೇನೋ ಇದೆ ಎಂಬ ಆರಂಭಿಕ ಕುತೂಹಲ ಹುಟ್ಟಿಸೋ ಪ್ರಧಾನ ಕೆಲಸ ಈ ಕಲೆಯದ್ದು. ಅದರಲ್ಲಿ ಕ್ರಿಯಾಶೀಲತೆಯಿಂದಲೇ ಹೆಸರು ಮಾಡಿರುವವರು ಸಾಯಿ. ಈ ವರೆಗೂ ಬಹಳಷ್ಟು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿರೋ ಸಾಯಿ ಅವರ ಪ್ರತಿಭೆಗೆ ಮುಗುಳುನಗೆ ಚಿತ್ರದ ಪೋಸ್ಟರುಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಮುಗುಳುನಗೆ ಎಂಬ ಮನಮೋಹಕ ಶೀರ್ಷಿಕೆಗೆ ಅನ್ವರ್ಥವಾಗಿ ಪೋಸ್ಟರ್ ಡಿಸೈನ್ ಮಾಡಿದ್ದ ಸಾಯಿ ಈ ವಿಭಾಗದ ಪ್ರಮುಖ ಕಲಾವಿದ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top