fbpx
ಮನೋರಂಜನೆ

2017ರ ಅತ್ಯುತ್ತಮಖಳನಟ : ದಿನಕರ್ ತೂಗುದೀಪ

ಅತ್ಯುತ್ತಮ ಖಳನಟ : ದಿನಕರ್ ತೂಗುದೀಪ

 

 

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ, ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಈ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ…
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ…

 

 

 

ಸಾರಥಿ ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮಿದ್ದವರು ತೂಗುದೀಪ ದಿನಕರ್. ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಅವರು ಏಕಾಏಕಿ ಚಕ್ರವರ್ತಿ ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರ ಮಾಡೋ ಬಗ್ಗೆ ಸುದ್ದಿಯಾದಾಗ ಆ ಬಗ್ಗೆ ಎಲ್ಲೆಡೆ ಒಂದು ಕೌತುಕವಿತ್ತು. ಆದರೆ ಆ ಪಾತ್ರದಲ್ಲಿ ಪಳಗಿದ ನಟನಂತೆ ನಟಿಸಿ ಸೈ ಅನ್ನಿಸಿಕೊಂಡಿರೋ ದಿನಕರ್ ಆ ಮೂಲಕ ನಟನಾಗಿಯೂ ಗಮನ ಸೆಳೆದಿದ್ದಾರೆ. ರಕ್ತಗತವಾಗಿ ಬಂದ ನಟನೆಯ ಶಕ್ತಿಯಿಂದಲೇ ಅವರೀಗ ನಟನೆಯಲ್ಲೂ ಬ್ಯುಸಿಯಾಗುವಂತೆ ಮಾಡಿದೆ. ಇದೀಗ ದಿನಕರ್ ಅವರು `ಗಾಂಧಿ ಕ್ಲಾಸ್ ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top