fbpx
News

ಈ 5000 ಮಂದಿ ಹುಟ್ಟಿದ್ದು ಒಂದೇ ದಿನವೇ?! ಇದು ಅಧಾರ್ ಅದ್ವಾನ ಅಂದರೆ ನೀವು ನಂಬಲೇಬೇಕು!

ಈ 5000 ಮಂದಿ ಹುಟ್ಟಿದ್ದು ಒಂದೇ ದಿನವೇ?!

ಇದು ಅಧಾರ್ ಅದ್ವಾನ ಅಂದರೆ ನೀವು ನಂಬಲೇಬೇಕು!

 

 

ಮಧ್ಯಪ್ರದೇಶದ ಐದು ಹಳ್ಳಿಗಳ ಒಟ್ಟು ಜನಸಂಖ್ಯೆಯ ಶೇ.90 ರಷ್ಟು ಭಾಗದ ಜನ ಹುಟ್ಟಿದ ದಿನಾಂಕ ಒಂದೇ ಆಗಿದೆ. ಅದು ಜನವರಿ ಒಂದು. ಇದು ಸತ್ಯವೇ ಎಂದು ನೀವು ಕೇಳಿದರೆ ಉತ್ತರ ಇಲ್ಲ ಎಂಬುದೇ ಸತ್ಯ. ಏಕೆಂದರೆ ಇದು ಅವರ ನಿಜವಾದ ಜನ್ಮ ದಿನಾಂಕ ಅಲ್ಲ. ಕೇಂದ್ರ ಸರ್ಕಾರದ ಮಹಾನ್ ಗುರುತಿನ ಚೀಟಿ ಆಧಾರ್ ನೀಡಿರುವ ಜನ್ಮದಿನಾಂಕ ಇದು!

ಪಲ್ಸೋಡ, ದೇವ್‍ಪುರ್, ಫತಹ್ ನಗರ್, ಜಟ್‍ಪುರಿಯಾ ಹಾಗೂ ಭೋಪಲ್‍ಗಂಜ್ ಹಳ್ಳಿಗಳ ಒಟ್ಟು ಜನಸಂಖ್ಯೆ 7000. ಇದರಲ್ಲಿ ಶೇ.90ರಷ್ಟು ಅಂದರೆ 5000 ಮಂದಿಯ ಜನ್ಮದಿನಾಂಕ ಜನವರಿ ಒಂದು. ಹೀಗೆ ನಮೂದಿಸಿರುವುದು ಆಧಾರ್ ಕಾರ್ಡಿನಲ್ಲಿ.

 

 

ಈ ಎಡವಟ್ಟಿಗೆ ಏನು ಕಾರಣ ಎಂಬುದನ್ನು ಹುಡುಕಿದರೆ ಮುಖ್ಯವಾಗಿ ತಿಳಿಯುವುದು ಇದೊಂದು ತಾಂತ್ರಿಕ ದೋಷ ಎಂಬುದು. ಬಹುಶಃ ಒಬ್ಬರ ಜನ್ಮದಿನಾಂಕ ಎಲ್ಲರಿಗೂ ಅನ್ವಯವಾಗುವಂತೆ ಏನೋ ತಾಂತ್ರಿಕ ಲೋಪವಾಗಿದೆ ಎಂದು ಮೇಲ್ನೋಟಕ್ಕೆ ಭಾವಿಸಿದರೂ, ಒಳ ತಿರುಳೇ ಬೇರೆ ಇದೆ.

ಹಳ್ಳಿಪ್ರದೇಶದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕ ಗೊತ್ತಿರದ ಕಾರಣ ಅವರ ಹುಟ್ಟಿದ ದಿನಾಂಕ ಕಾಲಂನಲ್ಲಿ ಕಂಪ್ಯೂಟರ್ ಮಹಾಶಯ ತಾನೇ ಜನವರಿ ಒಂದು ಎಂದು ಪೂರ್ಣಗೊಳಿಸುವಂತೆ ನೂತನ ಸಾಫ್ಟ್‍ವೇರ್ ಅಳವಡಿಸಿರುವುದೇ ಮಧ್ಯಪ್ರದೇಶದ ಈ ಘಟನೆಗೆ ಕಾರಣವಾಗಿದೆ.

 

 

 

ಕರ್ನಾಟಕದಲ್ಲೂ ಇಂಥದ್ದೇ ಸಮಸ್ಯೆ ಎದುರಾಗಿದ್ದು ಇತ್ತೀಚೆಗಷ್ಟೇ ಗೊತ್ತಾಗಿತ್ತು. ಮೂಲಗಳ ಪ್ರಕಾರ ಕರ್ನಾಟಕದಲ್ಲಿನ ಅತಿಹೆಚ್ಚು ಜನ ಹುಟ್ಟಿದ ದಿನವಾಗಿ ದಾಖಲಾಗಿರೋದು ಜೂನ್ 1 ಅಂದರೆ ನೀವು ನಂಬಲೇ ಬೇಕು. ಆ ಕಾಲದಲ್ಲೆಲ್ಲಾ ಹುಟ್ಟಿದನ ದಿನವನ್ನು ಯಾರೂ ನೆನಪಿಟ್ಟುಕೊಳ್ಳುವುದಾಗಲಿ, ಬರೆದಿಟ್ಟುಕೊಳ್ಳುವ ಪರಿಪಾಠವಿರಲಿಲ್ಲವಲ್ಲಾ? ಹೀಗಾಗಿ ಮಕ್ಕಳು ಶಾಲೆಗೆ ಸೇರುವ ಸಂದರ್ಭದಲ್ಲಿ ಶಾಲೆಯವರು ಡೇಟು ಗೊತ್ತಿಲ್ಲದವರ ಹುಟ್ಟಿದ ದಿನಾಂಕದ ಜಾಗದಲ್ಲಿ ಜೂನ್ ಒಂದು ಎಂದು ನಮೂದಿಸುತ್ತಿದ್ದರು. ಈಗ ಆಧಾರ್ ಕಾರಣದಿಂದ ಎಲ್ಲವೂ ಲೆಕ್ಕಕ್ಕೆ ಸಿಗುವಂತಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top