fbpx
ಹೆಚ್ಚಿನ

ಅಮೆರಿಕಕ್ಕೆ ಬೇಡದ ಪಾಕ್ – ಭಾರತಕ್ಕೆ ಬೇಕು! ಕದ್ದು -ಮುಚ್ಚಿ ಮಾತುಕತೆ ನಡೆಸಿದೆ ಮೋದಿ ಸರ್ಕಾರ

ಅಮೆರಿಕಕ್ಕೆ ಬೇಡದ ಪಾಕ್ – ಭಾರತಕ್ಕೆ ಬೇಕು!

ಕದ್ದು -ಮುಚ್ಚಿ ಮಾತುಕತೆ ನಡೆಸಿದೆ ಮೋದಿ ಸರ್ಕಾರ

 

 

ಪಾಕ್ ಸುಳ್ಳುಗಾರ ದೇಶ: 210 ಲಕ್ಷ ಕೋಟಿ ರೂ. ಧನಸಹಾಯ ರದ್ದು ಮಾಡಿದ ಅಮೆರಿಕ. ಗುಳ್ಳೆ ನರಿ ಪಾಕ್‍ನೊಂದಿಗೆ ಕದ್ದು -ಮುಚ್ಚಿ ಮಾತುಕತೆ ಮೋದಿ ಸರ್ಕಾರ ಮಾತುಕತೆ ನಡೆಸಿದೆ.

ಅಮೆರಿಕ ನೀಡುತ್ತಿರುವ ನೆರವು ಪಡೆದು ಪಾಕಿಸ್ತಾನ ಸುಳ್ಳು ಹೇಳುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೊಸ ವರ್ಷದ ಶುಭಾಶಯದ ಬಳಿಕ ಮಾಡಿರುವ ಟ್ವೀಟ್‍ನಲ್ಲಿ ಟ್ರಂಪ್ ಪಾಕಿಸ್ತಾನದ ವಿರುದ್ಧದ ಕಿಡಿಕಾರಿದ್ದಾರೆ. `ಅಮೆರಿಕವು ಮೂರ್ಖತನದಿಂದ 15 ವರ್ಷಗಳಿಂದ ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್‍ಗೂ ಹೆಚ್ಚು ನೆರವು ನೀಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಮಗೆ ನೀಡಿರುವುದು ಸುಳ್ಳು ಮತ್ತು ಕೃತಘ್ನತೆಯನ್ನು ಮಾತ್ರ. ಇದನ್ನು ನೋಡಿದರೆ ನಮ್ಮ ನಾಯಕರು ಎಂಥ ಮೂರ್ಖರು ಎಂಬುದು ಗೊತ್ತಾಗುತ್ತದೆ. ಅವರು ಉಗ್ರರಿಗೆ ರಕ್ಷಣೆ ನೀಡುತ್ತಿದ್ದಾರೆ. ಆಫ್ಗಾನಿಸ್ತಾನದಲ್ಲಿ ಉಗ್ರರನ್ನು ಬೇಟೆಯಾಡಲು ಸ್ವಲ್ಪ ಪ್ರಮಾಣದ ಸಹಾಯ ಸಿಕ್ಕಿದೆ ಅಷ್ಟೆ. ಮತ್ತೇನೂ ಇಲ್ಲ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

 

ಪಾಕಿಸ್ತಾನದ ಬಗೆಗೆ ಭಾರತ ಸರ್ಕಾರವು ಮೃದು ಧೋರಣೆ ಹೊಂದಿರುವಂತೆ ಗೋಚರವಾಗುತ್ತಿದೆ. ಕದ್ದು ಮುಚ್ಚಿ ಮಾತುಕತೆ ನಡೆಸಿದೆ. ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತನಾಗಿರುವ ಅಜಿತ್ ದೋವೆಲ್ ಇದರ ಪೌರೋಹಿತ್ಯ ವಹಿಸಿದ್ದು ಕಳವಳಕಾರಿ.

26 ಡಿಸೆಂಬರ್‍ನಂದು ಬ್ಯಾಂಕಾಕ್‍ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹಾಗೂ ಪಾಕಿಸ್ತಾನದ ತಮ್ಮ ಸಹವರ್ತಿ ನಾಸಿರ್ ಖಾನ್ ಜುನೌಜ ಅವರೊಡನೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದೆಲ್ಲವೂ ಪ್ರಧಾನಿ ಮೋದಿ ಅಣತಿಯಂತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಾರಣವೇನು? ಏನಿದೆ ಒಳ ಒಪ್ಪಂದ ಏನು?ಈಚೆಗೆ ಗುಜರಾತ್ ಚುನಾವಣೆಯಲ್ಲಿ ಪಾಕ್ ಹಸ್ತಕ್ಷೇಪ ಮಾಡುತ್ತಿದೆ ಎಂದು ಮೋದಿ ಗಳ ಗಳನೆ ಅತ್ತಿದ್ದರು. ಫಲಿತಾಂಶ ಬಂದ 14 ದಿನಗಳಲ್ಲಿ ಪಾಕ್‍ನೊಂದಿಗೆ ಮೋದಿ ಸರ್ಕಾರ ಗುಪ್ತ್ ಗುಪ್ತ ನಡೆಸಿದ್ದೇಕೆ? ಮೋದಿ ದರ್ಬಾರಿನಲ್ಲಿ ಎಲ್ಲವೂ ಅಯೋಮಯ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top