fbpx
ಹೆಚ್ಚಿನ

ಟಿಕೆಟ್ ಕಾಸುಳಿಸಲು ಮೆಟ್ರೋ ಗೇಟ್ ಹಾರಿದವನಿಗೇನಾಯ್ತು ಗೊತ್ತಾ?

ಟಿಕೆಟ್ ಕಾಸುಳಿಸಲು ಮೆಟ್ರೋ ಗೇಟ್ ಹಾರಿದವನಿಗೇನಾಯ್ತು ಗೊತ್ತಾ?

ಎಲೆಕ್ಟ್ರಿಕ್ ಗೇಟಿಗೆ ಸಿಕ್ಕಿಕೊಂಡ `ಅದ’ನ್ನು ಬಿಡಿಸಲು ಹರಸಾಹಸ!

ದಯವಿಟ್ಟು ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿ, ಟಿಕೆಟ್ಟಿಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ ಅಂತೆಲ್ಲ ಸ್ಲೋಗನ್ನುಗಳಿಗೆ ಭಾರತದಲ್ಲಿ ಸಾರಿಗೆ ವ್ಯವಸ್ಥೆಯಷ್ಟೇ ಹಳತಾದ ಇತಿಹಾಸವಿದೆ. ಆದರೆ ಇದೆಲ್ಲದರಾಚೆಗೂ ಟಿಕೆಟ್ ಕಳ್ಳತನದ ಪರಂಪರೆ ಕೂಡಾ ವಿಘ್ನವಿಲ್ಲದೆ ಮುಂದುವರೆದುಕೊಂಡು ಬಂದಿದೆ!

 

 

ಆದರೆ ಟಿಕೆಟ್ ಕಾಸು ಯಾಮಾರಿಸೋ ಖಯಾಲಿ ಇಂಡಿಯಾಕ್ಕೆ ಮಾತ್ರ ಸೀಮಿತ ಅಂದುಕೊಳ್ಳುವಂತಿಲ್ಲ.ಬೇರೆ ಬೇರೆ ದೇಶಗಳಲ್ಲೂ ನಮ್ಮವರನ್ನು ಮೀರಿಸುವಂಥಾ ಚಾಲಾಕಿಗಳಿದ್ದಾರೆ. ಆದರೆ ದೂರದ ಲಂಡನ್ನಿನಲ್ಲಿ ಮೆಟ್ರೋ ಟ್ರೇನಿನ ಟಿಕೆಟ್ ಯಾಮಾರಿಸಲು ಹೋದ ಚಾಲಾಕಿಯೊಬ್ಬ ಮಾನ ಮರ್ಯಾದೆಗಳ ಜೊತೆಗೆ ಗುಪ್ತ ಪ್ರದೇಶದ ಬಹು ಮುಖ್ಯ ಐಟಮ್ಮೊಂದನ್ನೂ ಕಳೆದುಕೊಳ್ಳುವ ಸ್ಥಿತಿ ತಂದುಕೊಂಡಿದ್ದಾನೆ!

 

 

ಲಂಡನ್ನಿನ ಮಹಾನಗರದಲ್ಲಿ ಆಫ್ರಿಕಾ ಮೂಲದ ಯುವಕನೋರ್ವ ಇಂಥಾ ಸ್ಥಿತಿ ತಂದುಕೊಂಡಿದ್ದಾನೆ. ಎಲೆಕ್ಟ್ರಿಕ್ ಸಿಸ್ಟಮ್ಮಿನ ಗೇಟಿನಲ್ಲಿ ಕಾಸು ತೆತ್ತು ಟಿಕೆಟಿನ ಟೋಕನ್ ಪಡೆಯೋ ಪದ್ಧತಿ ಅಲ್ಲೂ ಇದೆ. ಹಾಗೆ ಈ ಹುಡುಗ ಹೋಗುವಾಗ ಕೊಂಚ ರಶ್ ಇತ್ತಂತೆ. ಹೇಗಾದರೂ ಯಾಮಾರಿಸಬೇಕು ಅಂದುಕೊಂಡ ಆತ ಏಕಾಏಕಿ ಗೇಟು ಹಾರಿದ್ದಾನೆ. ಆದರೆ ಎಲೆಕ್ಟ್ರಿಕ್ ಗೇಟಿನ ಸಂದಿಯಲ್ಲಿ ಆತನ ಗುಪ್ತಾಂಗವೇ ಲಾಕ್ ಆಗಿದೆ.

 

ಕೂಡಲೆ ಆ ನೋವು ತಾಳಲಾರದೆ ಆತ ಲಬೋ ಲಬೋ ಅಂದದ್ದೇ ಸಿಬ್ಬಂಧಿಯೆಲ್ಲಾ ಬಂದು ಉಳಿಕೆ ಪ್ರಯಾಣಿಕರ ಸಹಾಯದಿಂದ ಆತನ ಐಟಮ್ಮನ್ನು ರಕ್ಷಣೆ ಮಾಡಲು ಶ್ರಮಿಸಿದ್ದಾರೆ. ಕಡೆಗೂ ಒಂದರ್ಧ ಘಂಟೆಗಳ ಕಾರ್ಯಾಚರಣೆಯ ಬಳಿಕ ಕಡೆಗೂ ಆತನ ಐಟಮ್ಮು ಬಚಾವಾಗಿದೆ.

ಆದರೆ, ಆ ನೋವಿನ ಬಾಧೆಯಿಂದಿದ್ದ ಆ ಹುಡುಗನಿಗೆ ಹೆಚ್ಚೇನೂ ಬೈಯದೆ ಮೆಟ್ರೋ ಸಿಬ್ಬಂದಿ ಕಳಿಸಿ ಕೊಟ್ಟಿದ್ದಾರೆ. ಅವನ ಐಟಮ್ಮಿನ ಸ್ಥಿತಿಗತಿ ಈಗ ಹೇಗಿದೆ ಎಂಬುದರ ವಿವರ ಮಾತ್ರ ಲಭ್ಯವಿಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top