fbpx
ದೇವರು

ಕುದಿಯೋ ಎಣ್ಣೆಗೆ ಕೈಹಾಕಿ ವಡೆ ತೆಗೆದ ಪವಾಡವಿದು! ಇದು ಅಯ್ಯಪ್ಪಸ್ವಾಮಿಯ ಪವಾಡ… ಓದುವ ಮುನ್ನ ಒಮ್ಮೆ ಕೈ ಮುಗಿಯಿರಿ…

ಕುದಿಯೋ ಎಣ್ಣೆಗೆ ಕೈಹಾಕಿ ವಡೆ ತೆಗೆದ ಪವಾಡವಿದು!

ಇದು ಅಯ್ಯಪ್ಪಸ್ವಾಮಿಯ ಪವಾಡ… ಓದುವ ಮುನ್ನ ಒಮ್ಮೆ ಕೈ ಮುಗಿಯಿರಿ…

 

 

ಕಾರವಾರ: ಶಬರಿಮಲೈ ಅಂದರೆ ಎಂತಹ ಮನುಷ್ಯನಲ್ಲೂ ಭಕ್ತಿಭಾವ ತುಂಬಿ ಬರುತ್ತದೆ. ಇನ್ನೇನು ಮಕರಜ್ಯೋತಿಯ ದರ್ಶನ ಪಡೆಯಲು ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕಾರವಾರದಲ್ಲಿ ಕುದಿಯುವ ಎಣ್ಣೆಗೆ ಕೈಹಾಕಿ ವಡೆ ತೆಗೆದಿರುವ ಪವಾಡಸದೃಶ ಘಟನೆ ನಡೆದಿದೆ.

 

 

ಎಲ್ಲೆಡೆ ಅಯ್ಯಪ್ಪನ ಮಾಲೆ ಧರಿಸಿ ವ್ರತಾಚರಣೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಅಯ್ಯಪ್ಪನ ನಾಮಸ್ಮರಣೆಯಲ್ಲಿ ತೊಡಗಿದ್ದಾರೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಿನ್ನಾರ ಗ್ರಾಮದಲ್ಲಿ ಅಯ್ಯಪ್ಪನ ನಿಷ್ಠೆಯಲ್ಲಿ ತಲ್ಲೀನರಾಗಿದ್ದ ಭಕ್ತರು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಬೇಯಿಸಿದ ವಡೆಯನ್ನು ತೆಗೆದು ಪ್ರಸಾದದ ರೂಪದಲ್ಲಿ ನೆರೆದಿದ್ದ ಜನರಿಗೆ ಹಂಚಿದ್ದಾರೆ.

 

 

ಒಂದೆಡೆ ವಡೆಗೆ ಬೇಕಾದ ಹಿಟ್ಟನ್ನು ಸಿದ್ದ ಮಡಿಕೊಂಡು ಎಣ್ಣೆಗೆ ತೇಲಿ ಬಿಡುತ್ತಿದ್ದರೆ, ಇನ್ನೊಂದೆಡೆ ಭಕ್ತರು ದೇವಾಲಯದ ಪೂಜಾರಿಯಿಂದ ಹೂವ ಪಡೆದುಕೊಂಡು ಕುದಿಯುವ ಎಣ್ಣೆಗೆ ಕೈಹಾಕಿ ಬೆಂದ ವಡೆಯನ್ನು ತೆಗೆಯುವ ದೃಶ್ಯ ನೋಡಿದರೆ ಭಕ್ತಿಯ ಪರಾಕಾಷ್ಠೆ ಹೀಗೂ ಇರಬಹುದಾ ಎಂದು ಅನಿಸುವುದರಲ್ಲಿ ಯಾವ ಸಂಶಯವಿರಲಿಲ್ಲ.

 

 

ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಈ ತೆರನಾದ ಆಚರಣೆ ಉಂಟು. ಇದು ಬರೀ ಅಯ್ಯಪ್ಪನ ಭಕ್ತರ ಕಾಯಕವಲ್ಲ. ಕುಮುಟಾದ ಕಾಮಾಕ್ಷಿದೇವಿ ದೇವಾಲಯದಲ್ಲೂ ನವರಾತ್ರಿ ಹಾಗೂ ಹುಣ್ಣಿಮೆಯ ದಿನಗಳಲ್ಲಿ ಹರಕೆ ಕಟ್ಟಿಕೊಂಡಂತಹ ಭಕ್ತರು ಕುದಿಯುವ ಎಣ್ಣೆಗೆ ಬರಿಗೈ ಹಾಕಿ ವಡೆಯನ್ನು ತೆಗೆಯುವ ಪವಾಡದ ಕೆಲಸ ನಡೆಯುತ್ತದೆ. ವಿಸ್ಮಯ ಎಂದರೆ ಯಾರಿಗೂ ಕಿಂಚತ್ತೂ ಸುಟ್ಟಗಾಯವಾಗಲೀ, ಬೊಬ್ಬೆ ಬರುವುದಾಗಲೀ ಆಗುವುದೇ ಇಲ್ಲ ಎಂಬುದು.

ಅಂತಿಮವಾಗಿ ಅನ್ನಿಸುವುದು ಇಂತಹ ಪವಾಡಗಳು ದೇವರ ಲೀಲೆಯಿಂದಾದುದೋ ಅಥವಾ ಭಕ್ತರ ನಂಬಿಕೆಯ ಪವಾಡವೋ ಆ ಭಗವಂತನೇ ಬಲ್ಲ ಎಂಬುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top