fbpx
News

ವಾಹನ ಸವಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಪೆಟ್ರೋಲ್ ಬೆಲೆ 22 ರೂಪಾಯಿ ಮಾತ್ರ

ವಾಹನ ಸವಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಪೆಟ್ರೋಲ್ ಬೆಲೆ 22 ರೂಪಾಯಿ ಮಾತ್ರ

 

 

ವಾಹನಗಾರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ.ವಾಹನಗಳಿಗಾಗಿ ಉಪಯೋಗಿಸುವ ಪೆಟ್ರೋಲ್ ದರದಲ್ಲಿ ಬದಲಾವಣೆ ಕಂಡುಬರಲಿದೆ.ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಪಾಲಿಸಿಯನ್ನು ತರಲು ಪ್ರಣಾಳಿಕೆಗಳನ್ನು ಹೂಡಿದೆ.ಅತಿ ಶೀಘ್ರದಲ್ಲೇ ಪೆಟ್ರೋಲ್ ಕಡಿಮೆ ಬೆಲೆಗೆ ದೊರೆಯಲಿದೆ.ಇದಕ್ಕಾಗಿ ಡಿಸಂಬರ್ 29 ,2017 ರಂದು ಮಿಥೆನಾಲ್ ಪಾಲಿಸಿಯನ್ನು ಪ್ರಕಟಿಸಿದೆ ಕೇಂದ್ರ ಸರ್ಕಾರ.ಈ ಪಾಲಿಸಿ ಯಲ್ಲಿ ಪೆಟ್ರೋಲ್ ನಲ್ಲಿ ಶೇ.15 ರಷ್ಟು ಇದ್ದಿಲಿನಿಂದ ಉತ್ಪತ್ತಿಯಾಗುವ ಮಿಥೆನಾಲ್ ಮಿಶ್ರಣ ಬೆರೆಸಲಿದ್ದಾರೆ.ಇದರಿಂದ ಪೆಟ್ರೋಲ್ ನ ಬೆಲೆ ಕಡಿಮೆಯಾಗಲಿದೆ ಎಂದು ಹಾಗೂ ವಾತಾವರಣದಲ್ಲಿನ ಕಾಲುಷ್ಯ ಕಡಿಮೆಯಾಗುತ್ತದೆಂದು ಕೇಂದ್ರ ರಸ್ತೆ ಶಾಖೆಯ ಸಚಿವ ನಿತಿನ್ ಗಡ್ಕರಿ ವಿವರಿಸಿದ್ದಾರೆ.

 

 

ಸಾದಾರಣ ಪೆಟ್ರೋಲ್ ಬೆಲೆ ರೂ.80 ಗಳಿಗೆ ಹೋಲಿಸಿದರೆ ಇದ್ದಲಿನಿಂದ ಉತ್ಪತ್ತಿಯಾಗುವ ಮಿಥೆನಾಲ್ ಪೆಟ್ರೋಲ್ ನ ಬೆಲೆ ಕೇವಲ ರೂ.22 ಮಾತ್ರ ಎಂದು ಹೇಳಿದ್ದಾರೆ.ಈಗಾಗಲೇ ಚೀನಾ ಇದನ್ನು ಕೇವಲ 17 ರೂಗಳಿಗೆ ಮಾರಾಟ ಮಾಡುತ್ತಿದೆಯಂತೆ.ಈ ಹೊಸ ವಿಧಾನದಿಂದ ಖರ್ಚನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ವಾತಾವರಣದ ಕಾಲುಷ್ಯವನ್ನೂ ತಡೆಗಟ್ಟಬಹುದಾಗಿದೆ.ಮಿಥೆನಾಲ್ ವಿನಿಯೋಗವೂ ಕೂಡ ಹೆಚ್ಚಿಸಬೇಕು ಎಂದರು ನಿತಿನ್ ಗಡ್ಕರಿಯವರು.

 

 

ಮೀಥೆನಾಲ್ ನ ಬಳಕೆಯಿಂದ ಮೈಲೇಜ್ ಹೆಚ್ಚಾಗುವುದಲ್ಲದೇ,ಇದರೊಂದಿಗೆ ಇಂಜಿನ್ ನಿಂದ ಹೊರಬರುವ ಹೊಗೆಯ ಪ್ರಮಾಣ ಕಡಿಮೆಯಾಗಿ ಪರಿಸರ ಮಾಲಿನ್ಯವನ್ನು ಕೂಡ ತಡೆಗಟ್ಟಬಹುದಾಗಿದೆ.ವಾತಾವರಣದ ಕಾಲುಷ್ಯವನ್ನುಕೆಡಿತಗೊಳಿಸುವಲ್ಲಿ ಇದು ಉಪಯುಕ್ತವಾಗಿದೆ.

 

 

ದೀಪಕ್ ಫರ್ಟಿಲೈಸರ್ಸ್,ರಾಷ್ಟ್ರೀಯ ಕೆಮಿಕಲ್ಸ್,ಫರ್ಟಿಲೈಸರ್ಸ್ ಆರ್ ಸಿ ಐ ಕೂಡ ಮುಂಬೈ ಸುತ್ತಮುತ್ತಲು ಬಹಳಷ್ಟು ಕರ್ಮಾಗಾರಗಳು ಉತ್ಪತ್ತಿ ಮಾಡುತ್ತವೆ.ಸ್ವೀಡನ್ ಅಟೋಮೇಜರ್ ವೋಲ್ವೋ ಮೀಥೆನಾಲ್ ನಿಂದ ನಡೆಯುವ ಸ್ಪೆಷಲ್ ಎಂಜಿನ್ ಅನ್ನು ರೂಪಿಸಿದೆ.ಲೋಕಲ್ ತಯಾರಿಸಿದ ಇಂಧನದಿಂದ ಮೊದಲು 25 ಬಸ್ ಗಳನ್ನು ಮೊದಲಿಗೆ ನಡೆಸಲಿದ್ದಾರೆ.ನಂತರ ಶೀಘ್ರದಲ್ಲೇ ಈ ಪ್ರಯೋಗವನ್ನು ದೇಶವ್ಯಾಪ್ತಿಯಾಗಿ ಅಮಲುಗೊಳಿಸಲು ಕೇಂದ್ರಸರ್ಕಾರ ನಿರ್ಧರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
MANOJ says:

HURREEEE I’M GOING TO BUY CAR

MALLIKARJUN says:

Is it possible? Really unbelievable

To Top