fbpx
ಹೆಚ್ಚಿನ

ಪತಂಜಲಿಯಲ್ಲಿ ಬರೋಬ್ಬರಿ 3250 ಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ ಫ್ರೆಂಚ್ ಕಂಪನಿ

ಪತಂಜಲಿಯಲ್ಲಿ ಬರೋಬ್ಬರಿ 3250 ಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ ಫ್ರೆಂಚ್ ಕಂಪನಿ

 

ಫ್ರೆಂಚ್ ಲಕ್ಸುರಿ ಗ್ರೂಪ್ LVMH Moet Hennessy ಸಂಸ್ಥೆ – ಲೂಯಿ ವಿಟಾನ್, ಪತಂಜಲಿ ಆಯುರ್ವೇದದಲ್ಲಿ 500 ಮಿಲಿಯನ್ ಡಾಲರ್ (ರೂ 3250 ಕೋಟಿ) ಹೂಡಿಕೆ ಮಾಡಲು ಸಿದ್ಧರಿದ್ದಾರೆ.

 

ಪತಂಜಲಿಯ ವಕ್ತಾರ ಎಸ್.ಕೆ.ಗುಪ್ತ ಟಿಜಾರಾವಾಲಾ ಅವರು ಗುರುವಾರ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದರು. “ನಾವು ನಮ್ಮ ಅಭಿವೃದ್ಧಿಗೆ ವಿದೇಶಿ ತಂತ್ರಜ್ಞಾನವನ್ನು ಬಳಸುತ್ತಿರುವಾಗ, ನಮ್ಮ ದೇಶದ ಲಾಭಕ್ಕಾಗಿ ವಿದೇಶಿ ಹಣವನ್ನು ಬಳಸಲು ನಾವು ಹಿಂಜರಿಯುವುದಿಲ್ಲ ಎಂದು ಆಚಾರ್ಯ ಬಾಲಕೃಷ್ಣ (ಪತಂಜಲಿಯ ಎಂ.ಡಿ) ಹೇಳಿದ್ದಾರೆ. , ಆದರೆ ನಾವು ಅದನ್ನು ನಮ್ಮದೇ ಆದ ನಿಯಮಗಳಲ್ಲಿ ಈ ಒಪ್ಪಂದ ಮಾಡಿಕೊಳ್ಳುತ್ತೇವೆ. ಹಂಚಿಕೆ / ಪಾಲನ್ನು ನೀಡುವುದಿಲ್ಲ. ” ಎಂದು ಸ್ಪಷ್ಟ ಪಡಿಸಿದ್ದಾರೆ.

 

 

ಪತಂಜಲಿ ಸಂಸ್ಥೆಯು ನಾಗ್ಪುರ್, ಗ್ರೇಟರ್ ನೋಯ್ಡಾ, ಅಸ್ಸಾಂ, ಛತ್ತೀಸ್ಗಢ, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಮತ್ತು ರಾಜಸ್ತಾನದಲ್ಲಿ 10,100 ಎಕರೆಗಳಷ್ಟು ಸುಗಂಧ ಮತ್ತು ಗಿಡಮೂಲಿಕೆ ಸಸ್ಯಗಳ ಕೃಷಿಗಾಗಿ 5000 ಕೋಟಿ ರೂ. ಘಟಕಗಳನ್ನು ಸ್ಥಾಪಿಸಲು ಕಂಪನಿಗೆ ಅಗತ್ಯವಿದೆಯೆಂದು ಬಾಲಕೃಷ್ಣ ಹೇಳಿದ್ದಾರೆ.

 

 

ಯಾವುದೇ ಸಮಸ್ಯೆಗಳಿಲ್ಲದೆ ನಾವು ಬ್ಯಾಂಕುಗಳಿಂದ ಸಾಲಗಳನ್ನು ಪಡೆಯುತ್ತೇವೆ. ಯಾವುದೇ ನಿಧಿಯು ನಮ್ಮನ್ನು ಬೆಂಬಲಿಸಲು ಬಯಸಿದರೆ, ಬ್ಯಾಂಕುಗಳಿಗಿಂತಲೂ ಮತ್ತು ಭಾರತೀಯ ಕರೆನ್ಸಿಯಲ್ಲಿಯೂ ನಾವು ಕಡಿಮೆ ಬಡ್ಡಿಯೊಂದಿಗೆ ಸಾಲವನ್ನು ನೀಡಬೇಕು ಎಂದು ಎಂದು ಬಯಸುತ್ತೇವೆ. ಎಂದು ಅವರು ಹೇಳಿದರು.

ಪಾಲನ್ನು ಖರೀದಿಸಲು ಬಹಳಷ್ಟು ಜನರಿದ್ದಾರೆ. ನಾನು ನೂರಾರು ಎಂದು ಹೇಳಲಾರೆ ಆದರೆ ನಾನು ಈಗಾಗಲೇ ಸಂಭಾವ್ಯ ಡಜನ್ ಗಟ್ಟಲೆ ಹೂಡಿಕೆದಾರರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.

ಈ ಹೂಡಿಕೆ ಸಫಲವಾದರೆ ಪಜಂಜಲಿ ವಿದೇಶದಲ್ಲೂ ಹೆಚ್ಚು ಮಾರುಕಟ್ಟೆ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪತಂಜಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು ದೇಶ್ಯಾದ್ಯಂತ ಉತ್ಪಾದನಾ ಕೇಂದ್ರಗಳು ಹಾಗು ಮಾರುಕಟ್ಟೆ ಹೊಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top