fbpx
ಸಮಾಚಾರ

ಲಂಡನ್ ಹೋಟೆಲ್‍ನಲ್ಲಿ ಭಾರತದ ಮಾನ ಹರಾಜು ಹಾಕಿದ ಹೆಂಗೆ ಅಂತೀರಾ ಮುಂದೆ ಓದಿ

ಲಂಡನ್ ಹೋಟೆಲ್‍ನಲ್ಲಿ ಭಾರತದ ಮಾನ ಹರಾಜು ಹಾಕಿದ ಹೆಂಗೆ ಅಂತೀರಾ ಮುಂದೆ ಓದಿ .

ಲಂಡನ್ ಹೋಟೆಲ್‍ನಲ್ಲಿ ಭಾರತದ ಮಾನ ಹರಾಜು

ಥೂ… ಎಂತಹ ಸ್ಥಿತಿ ತರ್ತಾರಪ್ಪಾ… ಭಾರತದಲ್ಲಿತಮ್ಮ ಕಳ್ಳತನದ ಕೈಚಳಕತೋರಿಸುವುದು ಸಾಲದುಅಂತ, ಲಂಡನ್‍ನಲ್ಲೂಖತರ್ನಾಕ್ ಕೆಲಸ ಮಾಡಹೋದರೆಅವರೇನುದಡ್ಡರೇ, ಬಿಟ್ಟು ಕಳುಹಿಸುವುದಕ್ಕೆ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಅವರಜೊತೆ ಲಂಡನ್‍ಗೆ ತೆರಳಿದ ಹಿರಿಯ ಪತ್ರಕರ್ತರೊಬ್ಬರುಅಲ್ಲಿನ ಪ್ರತಿಷ್ಠಿತ ಹೋಟೆಲ್‍ನಲ್ಲಿಟ್ಟಿದ್ದ ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿ, ನಂತರ ಸಿಕ್ಕಿಬಿದ್ದಿರುವಘಟನೆ ಭಾರತದ ಮಾನವನ್ನು ಹರಾಜು ಮಾಡಿದೆ.

ಮಮತಾ ಬ್ಯಾಜರ್ನಿಅವರಿಗಾಗಿ ಲಂಡನ್ನಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ಭೋಜನಕೂಟವನ್ನುಏರ್ಪಡಿಸಲಾಗಿತ್ತು.ಅವರಜೊತೆ ಭೋಜನಕೂಟದಲ್ಲಿ ಭಾರತ ಮತ್ತು ಬ್ರಿಟನ್ ಗಣ್ಯವ್ಯಕ್ತಿಗಳು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪತ್ರಕರ್ತರೂಇದ್ದರು.ಇದರಲ್ಲಿ ಮಮತಾಅವರಜೊತೆ ತೆರಳಿದ್ದ ಭಾರತದ ಹಿರಿಯ ಪತ್ರಕರ್ತರೂಇದ್ದರು.

 

 

ಮೊದಲಿಗೆಒಬ್ಬ ಪತ್ರಕರ್ತ ಭೋಜನಕೂಟದಲ್ಲಿದ್ದ ಬೆಳ್ಳಿ ಚಮಚವನ್ನುತನ್ನ ಬ್ಯಾಗಿಗೆಹಾಕಿಕೊಂಡಿದ್ದಾನೆ. ಇದನ್ನ ನೋಡಿದಅದೇತಂಡದಇತರೆ ಪತ್ರಕರ್ತರೂ ಸಹ ಬೆಳ್ಳಿಯ ಪಾತ್ರೆಗಳನ್ನ ತಮ್ಮ ಚೀಲಗಳಲ್ಲಿ ತುಂಬಿಸಿಕೊಂಡಿದ್ದಾರೆ.ಇವೆಲ್ಲ ಕಳ್ಳಕೆಲಸಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹೋಟೆಲ್ ಸಿಬ್ಬಂದಿ ಪ್ರಾರಂಭದಲ್ಲಿ ಏನೂ ಮಾತಾಡದೆ ಮೌನವಾಗಿದ್ದಾರೆ.ಆದರೆಯಾವಾಗಇದುಅತಿರೇಕಕ್ಕೆ ಹೋಯಿತೋ ಆಗ ಪತ್ರಕರ್ತರಿಗೆಎಚ್ಚರಿಕೆ ನೀಡಿದ್ದಾರೆಎನ್ನಲಾಗಿದೆ.ಭಾರತದ ಪತ್ರಕರ್ತರಿಗೆ ಮುಜುಗರಉಂಟುಮಾಡಬಾರದೆಂಬ ಒಂದೇಕಾರಣಕ್ಕೆ ಹಾಗೂ ಭಾರತೀಯಗಣ್ಯರುಅವಮಾನಿತರಾಗಬಾರದೆಂಬ ಉದ್ದೇಶಕ್ಕೆ ಹೋಟೆಲ್ ಸಿಬ್ಬಂದಿ ಎಲ್ಲ ತಿಳಿದಿದ್ದರೂ ಮೊದಲು ಮೌನವಾಗಿಯೇಇದ್ದರು.ಆದರೆ ಬೆಳ್ಳಿಯ ಪಾತ್ರೆಗಳನ್ನೇ ಪತ್ರಕರ್ತರು ಚೀಲದೊಳಗೆ ನುಸುಳಿಸಿಕೊಂಡಾಗ, ಸಿಸಿ ಕ್ಯಾಮರಾಎಲ್ಲವನ್ನೂ ಸೆರೆಹಿಡಿದೆಎಂದು ಭಾರತದ ಪತ್ರಕರ್ತರಿಗೆ ಸೂಚನೆ ನೀಡಲಾಯಿತು ಎಂಬ ಲಂಡನ್‍ದೇಶದಔಟ್‍ಲುಕ್ ಪತ್ರಿಕೆ ವರದಿ ಮಾಡಿದೆ.

ಇದಿನ್ನೂಅವಮಾನ: ಭಾರತ ಪತ್ರಕರ್ತರತಂಡದಲ್ಲಿದ್ದಒಬ್ಬ ಹಿರಿಯ ಪತ್ರಕರ್ತರುತಾನೇನೂ ಮಾಡಿಲ್ಲಎಂದು ವಾದಿಸಿ, ಬೇಕಾದರೆತನ್ನತಪಾಸಣೆ ನಡೆಸುವಂತೆ ಹೇಳಿದ್ದಾರೆ. ಆದರೆಅದಕ್ಕೂ ಮೊದಲುಅವರುತಾವುಕದ್ದ ಬೆಳ್ಳಿ ಪಾತ್ರೆಗಳನ್ನು ಮತ್ತೊಬ್ಬ ಪತ್ರಕರ್ತರ ಬ್ಯಾಗಿನಲ್ಲಿ ಹಾಕಿರುವದೃಶ್ಯವನ್ನು ಸಿಸಿ ಕ್ಯಾಮೆರಾದಲ್ಲಿ ತೋರಿಸಿದ ಬಳಿಕ, 50 ಪೌಂಡ್‍ದಂಡಕಟ್ಟುವ ಮೂಲಕ
ಅ ಪತ್ರಕರ್ತ ಹೋಟೆಲ್‍ನಿಂದ ಹೊರನಡೆದಿದ್ದಾರೆ.

ಈ ಎಲ್ಲಾಅವಮಾನಕರ ಸುದ್ದಿಗಳು ಲಂಡನ್ ಪತ್ರಿಕೆಯಲ್ಲಿ ವರದಿಗಳಾಗಿ ಮೂಡಿಬಂದಿವೆ. ತಾವು ಮಾಡುವತಪ್ಪುಒಂದಿಡೀದೇಶದ ಮಾನ ಹರಾಜು ಹಾಕುತ್ತದೆ ಎಂಬ ಸಣ್ಣ ಪ್ರಜ್ಞೆಯೂಇಲ್ಲದಇವರುಇನ್ಯಾವತಪ್ಪುತಿದ್ದುವ ಪತ್ರಕರ್ತರೋ ಆ ಬ್ರಹ್ಮನೇ ಬಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top