fbpx
ಸಮಾಚಾರ

ನಾಲ್ವರಜೊತೆ ಸಪ್ತಪದಿ ತುಳಿದ ಹದಿನೈದು ವರ್ಷದ ಹುಡುಗಿ ಈಗ ಗರ್ಭಿಣಿ!

ನಾಲ್ವರಜೊತೆ ಸಪ್ತಪದಿ ತುಳಿದ ಹದಿನೈದರ ಬಾಲೆ ಈಗ ಗರ್ಭಿಣಿ!

‘ಹೆಣ್ಣು ವ್ಯಾಪಾರದ ವಸ್ತುವಲ್ಲ’ ಅಂತ ಸಂಘಸಂಸ್ಥೆಗಳೇ ತಮ್ಮ ಹೋರಾಟಗಳನ್ನ, ಜಾಗೃತಿ ಕಾರ್ಯಕ್ರಮಗಳನ್ನ ಮಾಡುತ್ತಲೇಇರುತ್ತದೆ.ಆದರೆ ನಿರಾಯಾಸವಾಗಿ ಹೆಣ್ಣನ್ನು ಹಣಕ್ಕಾಗಿ ವಸ್ತುವಿನಂತೆ ಮದುವೆಯ ಹೆಸರಿನಲ್ಲಿ ಮಾರಾಟ ಮಾಡುವುದು ನಡೆಯುತ್ತಲೇ ಇವೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದುತಾಜಾಉದಾಹರಣೆಅಲ್ಲಲ್ಲ, ಸಾಕ್ಷಿಯೇ ನಮ್ಮುಂದೆಇದೆ.

ಆಕೆಗಿನ್ನು 15ರ ಹರೆಯ.ಇನ್ನೂ ಶಾಲೆಯಲ್ಲಿಕಲಿಯುವ ವಯಸ್ಸು.ಆದರೆ ಹೆತ್ತವರ ಹಣದಾಸೆಯಪೈಶಾಚಿಕತನಕ್ಕೆ ಈಕೆ ಬಲಿಯಾಗಿದ್ದಾಳೆ.ಅಂದರೆ ಬರೋಬ್ಬರಿ ನಾಲ್ಕು ಜನರಜೊತೆ ಸಪ್ತಪದಿ ತುಳಿದಿದ್ದಾಳೆ.ಈಗ ಗರ್ಭಿಣಿಯೂ ಆಗಿದ್ದಾಳೆ.

 

 

ಇದೆಲ್ಲ ನಡೆದಿರುವುದು ಬೆಳಗಾವಿ ಜಿಲ್ಲೆಯಕಿತ್ತೂರು ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ.35 ವರ್ಷಕ್ಕೂ ಮೇಲ್ಪಟ್ಟ ನಾಲ್ಕು ಪುರುಷರಜೊತೆ ಈ ಬಾಲಕಿ ವಿವಾಹವಾಗಿರುವುದು ನಿಜಕ್ಕೂ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ.

ಕೇವಲ ಹಣದಾಸೆಗಾಗಿರಾಯಭಾಗತಾಲ್ಲೂಕಿನ ನಿಪನಾಳ ಗ್ರಾಮದ ಈ ಬಾಲಕಿಯನ್ನುಎರಡು ವರ್ಷಗಳ ಹಿಂದೆಆಕೆಯ ಪಾಲಕರೇಏಜೆಂಟರ ಮೂಲಕ ಮಾರಾಟ ಮಾಡಿದ್ದಾರೆ.ಹುಕ್ಕೇರಿತಾಲ್ಲೂಕಿನಚಿಕ್ಕಾಲಗುಡ್ಡ ಹಳ್ಳಿಯ ಮಹಾಂತೇಶ ಹಾಗೂ ಈಶ್ವರ ಬಾಲಕಿಯನ್ನು ಖರೀದಿಸಿದ ಮಹನೀಯಏಜೆಂಟರು! ಇವರೇ ಬಾಲಕಿಗೆ ನಾಲ್ಕು ಮದುವೆ ಮಾಡಿಸಿರುವ ದುರುಳರು!

 

 

ಪೊಲೀಸ್ ಮೂಲಗಳ ಪ್ರಕಾರ 2015ರಲ್ಲಿ ಹುಕ್ಕೇರಿಯ ಶಿವು ಚನ್ನಗಿಜೊತೆ ಬಾಲಕಿಗೆ ವಿವಾಹ ಮಾಡಿಡಲಾಗಿತ್ತು.ಅನಂತರ ಮನೆಯಲ್ಲಿಕಾರ್ಯಕ್ರಮವಿದೆಎಂದು ಮಗಳನ್ನು ಕರೆದುಕೊಂಡು ಬಂದು, ಕುರಣಿಗ್ರಾಮದ 35 ವರ್ಷದ ಹಾಲಿನ ವ್ಯಾಪಾರಿಜೊತೆ ಮದುವೆ ಮಾಡಿಸಿದ್ದಾರೆ.2016ರಲ್ಲಿ ಶಹಾಪುರದ ಮಲ್ಲಿಕಾರ್ಜುನ (55) ಜೊತೆ, ಖಾನಾಪುರದ ಸಿದ್ದಪ್ಪ ಶಿರುಗುಪ್ಪಿ ಎಂಬುವವರಜೊತೆಯೂ ವಿವಾಹ ಮಾಡಿಸಿದ್ದಾರೆ.ಒಟ್ಟಾರೆಬಾಲಕಿಯತಂದೆ-ತಾಯಿಗೆ ಈ ನಾಲ್ಕು ಮದುವೆಗೂ ಸಹಕರಿಸಿರುವುದು ದುರಂತ!

 

 

ನಾಲ್ವರಜೊತೆ ಮದುವೆ ಮಾಡಿಸಿದ್ದ ಬಳಿಕವೂ ಅಪ್ರಾಪ್ತೆಯನ್ನು ಕೆಲದಿನಗಳ ಹಿಂದೆಯಷ್ಟೆ ಹುಕ್ಕೇರಿಯಘೊಡಗೇರಿಗ್ರಾಮದ ಬಸು (25) ಎಂಬಾತನಜೊತೆ ಮದುವೆ ಮಾಡಲು ನಿಶ್ಚಯಿಸಿದ್ದಾರೆ.ಈ ಮಧ್ಯೆ ಬಸು ಎಂಬಾತ ಬಾಲಕಿಯನ್ನುಅಪಹರಿಸಿ, ನಿರಂತರಅತ್ಯಾಚಾರಎಸಗಿದ್ದಾನೆ. ಈ ವೇಳೆ ಕಾಮುಕನಿಂದ ತಪ್ಪಿಸಿಕೊಂಡ ಬಾಲಕಿಯನ್ನುಸಾರ್ವಜನಿಕರು ಬೆಳಗಾವಿಯ ಮಕ್ಕಳ ಸಂರಕ್ಷಣಾಘಟಕಕ್ಕೆ ಒಪ್ಪಿಸಿದ್ದಾರೆ.ಆನಂತರ ಬಾಲಕಿಯ ಪ್ರಾಥಮಿಕಆರೋಗ್ಯತಪಾಸಣೆ ನಡೆಸಿದಾಗ ಆಕೆ, ಗರ್ಭಿಣಿಯಾಗಿರುವುದು ತಿಳಿದುಬಂದಿದೆ.ಸದ್ಯಕಿತ್ತೂರು ಪೊಲೀಸರು 9 ಜನರ ವಿರುದ್ಧದೂರು ದಾಖಲಿಸಿಕೊಂಡಿದ್ದು, ಪ್ರಕರಣದತನಿಖೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top