fbpx
ಭವಿಷ್ಯ

ಜನವರಿ 12 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೧೨ ಜನವರಿ ೨೦೧೮
ಸೂರ್ಯೋದಯ : ೦೬:೪೮
ಸೂರ್ಯಾಸ್ತ : ೧೮:೦೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಕೃಷ್ಣ ಪಕ್ಷ
ತಿಥಿ : ಏಕಾದಶೀ
ನಕ್ಷತ್ರ : ವಿಶಾಖ
ಯೋಗ : ಗಂಡ
ಪ್ರಥಮ ಕರಣ : ಬವ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೨:೦೫ – ೧೨:೫೦
ಅಮೃತಕಾಲ : ೨೨:೩೮ – ೨೪:೨೫+
ರಾಹು ಕಾಲ: ೧೧:೦೩ – ೧೨:೨೭
ಗುಳಿಕ ಕಾಲ: ೦೮:೧೩ – ೦೯:೩೮
ಯಮಗಂಡ: ೧೫:೧೭ – ೧೬:೪೨

 

ಮೇಷ (Mesha)

ನಿಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳೊಡನೆ ಕಾಲ ಕಳೆಯಲು ಆಗುತ್ತಿಲ್ಲ ಎಂಬ ಚಿಂತೆ ಕಾಡುವುದು. ದೇಹಕ್ಕೆ ವಿಶ್ರಾಂತಿಯ ನೆಪದಲ್ಲಿ ಕಚೇರಿಗೆ ರಜೆ ಹಾಕಿ ಮಕ್ಕಳೊಡನೆ ಕಾಲ ಕಳೆಯಿರಿ. ಮನಸ್ಸು ಹಗುರವಾಗುವುದು. ಮತ್ತು ಮುಂದಿನ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡುವಿರಿ

 

ವೃಷಭ (Vrushabha)

ಇಚ್ಛಿತ ಕಾರ್ಯದಲ್ಲಿ ಗೆಲುವು ಸಿಗುವುದು. ವಿವಾಹಯೋಗ್ಯ ವಧು-ವರರಿಗೆ ಕಂಕಣಭಾಗ್ಯ ಬರುವುದು. ಬಹುಮೂಲಗಳಿಂದ ಹಣಕಾಸು ಹರಿದು ಬರುವುದು. ಕಲಾ ಕೌಶಲ್ಯದಲ್ಲಿ ಹೆಗ್ಗಳಿಕೆ, ವ್ಯಾಪಾರ-ಉದ್ಯೋಗಗಳಲ್ಲಿ ನಿರೀಕ್ಷಿತ ಆದಾಯ ಬರುವುದು.

 

ಮಿಥುನ (Mithuna)

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರೀಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಂದಿಗೆ ನಿಷ್ಠುರ ಮಾತುಕತೆ ಮಾಡದಿರುವುದು ಕ್ಷೇಮಕರ.

 

ಕರ್ಕ (Karka)

ಉಷ್ಣ ಸಂಬಂಧಿ ತೊಂದರೆಗಳು ಕಾಡುವ ಸಾಧ್ಯತೆ ಇರುವುದು. ಆರೋಗ್ಯದ ವಿಷಯದಲ್ಲಿ ಉದಾಸೀನ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಿರಿ. ಬರಬೇಕಾಗಿದ್ದ ಸಾಲದ ಮೊತ್ತ ಇಂದು ನಿಮ್ಮ ಕೈ ಸೇರುವುದು. ಬೆಲೆಯುಳ್ಳ ವಸ್ತುಗಳ ಖರೀದಿ ಮಾಡುವಿರಿ.

 

ಸಿಂಹ (Simha)

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರೀಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಂದಿಗೆ ನಿಷ್ಠುರ ಮಾತುಕತೆ ಮಾಡದಿರುವುದು ಕ್ಷೇಮಕರ.

 

ಕನ್ಯಾರಾಶಿ (Kanya)

ಗ್ರಹಗತಿಗಳ ಚಲನೆ ಅಷ್ಟೇನೂ ಪೂರಕವಾಗಿಲ್ಲ. ಹಾಗಾಗಿ ಈ ದಿನ ತಾಳ್ಮೆಯೇ ನಿಮ್ಮ ಗುರಿಯಾಗಿರಲಿ. ಕೆಲವು ಘಟನೆಗಳನ್ನು ಕಂಡರೂ ಕಾಣದಂತೆ ಇರುವುದು ಕ್ಷೇಮಕರ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ. ದೇವಿ ದೇವಸ್ಥಾನಕ್ಕೊಮ್ಮೆ ಭೇಟಿ ನೀಡಿರಿ.

 

ತುಲಾ (Tula)

ವೃತ್ತಿರಂಗದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಆತ್ಮಸ್ಥೈರ್ಯದಿಂದ ಮುಂದುವರಿಯಿರಿ. ಪತ್ನಿಗೆ ಅನುಕೂಲಕರವಲ್ಲ. ವಾಸಸ್ಥಳದ ಬದಲಾವಣೆ ತಂದೀತು. ದಿನಾಂತ್ಯ ಶುಭವಿದೆ.

 

ವೃಶ್ಚಿಕ (Vrushchika)

ನಿಮ್ಮ ಪ್ರೀತಿ ಪಾತ್ರರ ಆಗಮನ ಸಂತಸ ತಂದೀತು. ವಾದ ವಿವಾದಗಳಿಂದ ದೂರವಿದ್ದಷ್ಟು ಉತ್ತಮ. ಉದ್ಯೋಗದಲ್ಲಿ ಮುನ್ನಡೆ. ಕ್ರಿಯಾಶೀಲತೆಗೆ ಅನುಕೂಲವಾದೀತು.ವೃತ್ತಿರಂಗದಲ್ಲಿ ಆಗಾಗ ಅದೃಷ್ಟ ತೋರಿಬರುತ್ತದೆ. ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಪರಿಣಾಮ ಬೀರಲಿದೆ.

 

ಧನು ರಾಶಿ (Dhanu)

ಉದ್ಯೋಗದಲ್ಲಿ ಮುನ್ನಡೆ ತೋರಿಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಿಗುತ್ತದೆ. ದೇವತಾ ಕಾರ್ಯಗಳಿಗಾಗಿ ಧನವ್ಯಯವಾದರೂ ಮನಸ್ಸಿಗೆ ಸಮಾಧಾನ ಸಿಗಲಿದೆ.ವೃತ್ತಿರಂಗದಲ್ಲಿ ಹೊಂದಾಣಿಕೆ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಅವಿವಾಹಿತರಿಗೆ ಪ್ರಯತ್ನ ಬಲದ ಅಗತ್ಯವಿದೆ.

 

ಮಕರ (Makara)

ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ನೂತನ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಊಟದಲ್ಲಿ ರುಚಿ ಕಡಿಮೆ ಎನಿಸುವುದು. ಆಪ್ತ ಸ್ನೇಹಿತರಿಂದ ಬೇಸರ ಉಂಟಾಗುವ ಸಾಧ್ಯತೆಯಿದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ.

 

ಕುಂಭರಾಶಿ (Kumbha)

ಪರೋಪಕಾರದ ಕೆಲಸಗಳಿಂದ ಸಾಮಾಜಿಕ ಮನ್ನಣೆ ದೊರೆಯುವುದು. ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಜರೂರು ಆಗಬೇಕಾದ ಕೆಲಸಕ್ಕೆ ಅಡೆತಡೆ ಉಂಟಾಗುವುದು. ಬಂಧು ಬಳಗದವರಿಂದ ಸಹಾನುಭೂತಿ ದೊರೆಯುವುದು.

 

ಮೀನರಾಶಿ (Meena)

ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯ ಬಗೆಹರಿಸಿಕೊಳ್ಳಲು ಇಂದು ಶುಭ ದಿನ. ಸಂಗಾತಿಯ ನೆರವು ಪಡೆಯಿರಿ. ಬೆಳ್ಳಗಿರುವುದೆಲ್ಲಾ ಹಾಲಲ್ಲ. ಹಾಗಾಗಿ ಇತರೆಯವರ ಸಲಹೆ ಸಹಕಾರಗಳನ್ನು ಎಚ್ಚರಿಕೆಯಿಂದ ಪಾಲಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top