fbpx
ದೇವರು

ಈ ಬಾರಿಯ ಮಕರ ಸಂಕ್ರಾಂತಿ 70 ವರ್ಷಗಳ ನಂತರ 2 ಮಹಾ ಸಂಯೋಗಗಳನ್ನು ಹೊತ್ತು ತಂದಿದೆ ,ಆ ದಿನ ಏನು ಮಾಡಿದ್ರೆ ಒಳ್ಳೆಯದು ಮತ್ತು ಪೌರಾಣಿಕ ಹಿನ್ನಲೆ ಏನು ತಿಳಿಯಿರಿ

ಈ ಬಾರಿಯ ಮಕರ ಸಂಕ್ರಾಂತಿ 70 ವರ್ಷಗಳ ನಂತರ 2 ಮಹಾ ಸಂಯೋಗಗಳನ್ನು ಹೊತ್ತು ತಂದಿದೆ ,ಆ ದಿನ ಏನು ಮಾಡಿದ್ರೆ ಒಳ್ಳೆಯದು ಮತ್ತು ಪೌರಾಣಿಕ ಹಿನ್ನಲೆ ಏನು ತಿಳಿಯಿರಿ

ಸೂರ್ಯನು ಮಕರ ರಾಶಿಗೆ ಜನವರಿ ಹದಿನಾಲ್ಕನೇ ತಾರೀಖಿನಂದು ಮಧ್ಯಾಹ್ನ 1:50 ಕ್ಕೆ ಪ್ರವೇಶ ಮಾಡಲಿದ್ದಾನೆ. ಮಾಘ ಮಾಸದ , ಕೃಷ್ಣ ಪಕ್ಷದಲ್ಲಿ ಸೂರ್ಯನು ರಾಶಿ ಪರಿವರ್ತನೆಯನ್ನು ಮಾಡಲಿದ್ದಾನೆ. ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೂರ್ಯನು ಪ್ರವೇಶ ಮಾಡಲಿದ್ದಾನೆ. ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಭಾರತದಲ್ಲಿ ಅ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ.

ಸನಾತನ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಬಹಳ ಮಹತ್ವಪೂರ್ಣವಾದ ದಿನವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಭೀಷ್ಮ ಪಿತಾ ಮಹಾರಿಗೆ ಮೋಕ್ಷದ ಪ್ರಾಪ್ತಿಯಾಗಿದ್ದು ಇದೇ ದಿನವೇ. ಭೀಷ್ಮನು ಈ ದಿನವೇ ಪ್ರಾಣ ಬಿಡುವುದಕ್ಕೆ ಈ ದಿನಕ್ಕೋಸ್ಕರ ಅನೇಕ ದಿನಗಳವರೆಗೆ ತಮ್ಮ ಜೀವನವನ್ನು ಬಾಣಗಳ ಹಾಸಿಗೆಯ ಸುರಿಮಳೆಯ ಮೇಲೆ ಮಲಗಿಕೊಂಡೇ ಕಾಲ ಕಳೆದಿದ್ದರು. ಇದರ ಜೊತೆ ಜೊತೆಗೇ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣದವರೆಗೆ ಬರುತ್ತದೆ ಮತ್ತು ಹಾಗೆ ಧನುರ್ಮಾಸ ಕೂಡ ಕೊನೆಗೊಳ್ಳುತ್ತದೆ.

2018 ರವಿವಾರ ಹದಿನಾಲ್ಕನೇ ತಾರೀಖು ಮತ್ತು ಕರ್ನಾಟಕದಲ್ಲಿ 15 ನೇ ತಾರೀಖಿನಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.ಸೂರ್ಯನು ಹದಿನಾಲ್ಕನೇ ತಾರೀಖು ಜನವರಿಯಂದು ಮಧ್ಯಾಹ್ನ 1 ಗಂಟೆ 50 ನಿಮಿಷಕ್ಕೆ ಮಕರ ರಾಶಿಗೆ ಸೂರ್ಯನು ಪ್ರವೇಶ ಮಾಡುತ್ತಾನೆ. ಆ ಪುಣ್ಯ ಸಂಕ್ರಮಣ ಕಾಲದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವುದು ಉತ್ತಮ .

 

 

ಎಪ್ಪತ್ತು ವರ್ಷಗಳ ನಂತರ ಈ ರೀತಿಯ ಮಕರ ಸಂಕ್ರಾಂತಿಯು ಬರುತ್ತಿದ್ದು, ಯಾಕೆಂದರೆ ಪಾರಿಜಾತ ಯೋಗ, ಸಿದ್ಧಿ ಯೋಗದಲ್ಲಿ ಮತ್ತು ತ್ರಯೋದಶಿಯ ತಿಥಿಯು ರವಿವಾರವೂ ಬಂದಿರುವುದರಿಂದ ಸಿದ್ಧಿ ಯೋಗವೂ ಉಂಟಾಗುತ್ತಿದೆ. ಗುರು ಮತ್ತು ಮಂಗಳ ಗ್ರಹವು ತುಲಾ ರಾಶಿಯಲ್ಲಿ ಒಟ್ಟಾಗಿ ಸ್ಥಿತರಿರುವುದರಿಂದ ಪಾರಿಜಾತ ಯೋಗವೂ ಉಂಟಾಗುತ್ತಿದೆ. ಈ ಯೋಗವು ಮಕರ ಸಂಕ್ರಾಂತಿಯಂದೇ ಉಂಟಾಗುತ್ತಿದೆ.

ಸಂಕ್ರಾಂತಿಯಲ್ಲಿ ಏನೇನು ಮಾಡಬೇಕು ಎಂದು ತಿಳಿಯೋಣ ಬನ್ನಿ…..

ಗಂಗಾ ಸ್ಥಾನವನ್ನು ಈ ದಿನ ಮಾಡಿದರೆ ಒಂದು ಸಾವಿರ ಬಾರಿ ಅಶ್ವಯಜ್ಞ ಮಾಡಿದಷ್ಟೇ ಪುಣ್ಯ ಲಭಿಸುವುದು. ಎಳ್ಳು, ಬೆಲ್ಲ ಮೊಸರು, ಅವಲಕ್ಕಿ ಮತ್ತು ಬಟ್ಟೆಗಳನ್ನು ಈ ದಿನ ದಾನ ಮಾಡಬಹುದು. ದಾನಕ್ಕೆ ಅತ್ಯಂತ ಮಹತ್ವಪೂರ್ಣವಾದ ಲಾಭವಿದೆ. ಎಳ್ಳು ವಿಷ್ಣುವಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದ್ದು, ಜೊತೆಗೆ ಶರೀರದ ಉಷ್ಣವನ್ನು ಸಹ ಎಳ್ಳು ಕಾಪಾಡುತ್ತದೆ. ನೀವು ಈ ದಿನ ಎಳ್ಳನ್ನು ದಾನ ಮಾಡಿದರೆ ಜೀವನದಲ್ಲಿರುವ ಎಲ್ಲ ರೀತಿಯ ಕಷ್ಟಗಳು ದೂರವಾಗುತ್ತವೆ. ಈ ದಿನ ಭಗವಂತನಾದ ಸೂರ್ಯನು ಸ್ವಯಂ ತನ್ನ ಮಗನಾದ ಶನೈಶ್ಚರ ದೇವನನ್ನು ಭೇಟಿ ಮಾಡಲು ಹೋಗುತ್ತಾನೆ.

ಯಾಕೆಂದರೆ ಶನಿದೇವನು ಮಕರ ರಾಶಿಯ ಸ್ವಾಮಿಯಾಗಿದ್ದು ಆ ಮನೆಗೆ ತಂದೆಯಾದ ಸೂರ್ಯನು ಪ್ರವೇಶ ಮಾಡಲಿದ್ದಾನೆ. ಆದ್ದರಿಂದಲೇ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ .

ಈ ದಿನ ಗಂಗಾ ಮಾತೆಯು ಭಗೀರಥನ ಹಿಂದೆ ಹಿಂದೆ ಹೋಗಿ ಕಪಿಲ ಮುನಿಯ ಆಶ್ರಮಕ್ಕೆ ಬಂದು ನಂತರ ಸಾಗರದೊಳಗೆ ಹೋಗಿ ಭೇಟಿ ಮಾಡುತ್ತಾರೆ . ಈ ದಿನ ಭಗವಂತನಾದ ವಿಷ್ಣುವು ಅಸುರರ ಜೊತೆಗೆ ಯುದ್ಧ ಮಾಡಿ ಅವರನ್ನು ಅಂತ್ಯ ಕಾಣಿಸುವೆನೆಂದು ಘೋಷಣೆಯನ್ನು ಮಾಡಿದ್ದನು .ಎಲ್ಲಾ ಅಸುರರ ತಲೆಗಳನ್ನು ಕಡಿದು ಮಂದಾರ ಪರ್ವತದಲ್ಲಿ ಗುಡ್ಡೆ ಹಾಕಿದ್ದನು. ಈ ಪ್ರಕಾರ ಈ ದಿನ ಕೆಟ್ಟದ್ದನ್ನು ನಾಶಪಡಿಸುವ ದಿನವಾಗಿದೆ. ಯಶೋದೆಯು ಸಹ ಕೃಷ್ಣನ ಜನ್ಮ ಕೋಸ್ಕರ ವ್ರತವನ್ನು ಮಾಡಿದ್ದಳು. ಆಗ ಸೂರ್ಯದೇವನು ಉತ್ತರಾಯಣ ಕಾಲಕ್ಕೆ ಪಾದಾರ್ಪಣೆಯನ್ನು ಮಾಡಿದ್ದನು ಮತ್ತು ಆ ದಿನ ಮಕರ ಸಂಕ್ರಾಂತಿಯಾಗಿತ್ತು. ಹೀಗೆ ಆ ದಿನದಂದು ಅಂದರೆ ಅಂದಿನಿಂದ ಮಕರ ಸಂಕ್ರಾಂತಿಯ ವ್ರತವು ಆಚರಣೆಗೆ ಬಂತು.

ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಭಾಗದ ಜನರು ವಿಭಿನ್ನ ಹೆಸರಿನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ‘ಪೊಂಗಲ್’ ಎಂದು ಆಚರಿಸಲಾಗುತ್ತದೆ. ಅದೇ ಕರ್ನಾಟಕ ಮತ್ತು ಕೇರಳದಲ್ಲಿ ‘ಸಂಕ್ರಾಂತಿ’ ಎಂದು ಆಚರಿಸುತ್ತಾರೆ. ಒಂದು ದಿನ ಮುನ್ನವೇ ಪಂಜಾಬ್ ರಾಜ್ಯದಲ್ಲಿ ಲೋರಿಯ ರೂಪದಲ್ಲಿ ಆಚರಿಸಲಾಗುತ್ತದೆ.

 

 

ಗಂಗಾಸ್ನಾನ ಮತ್ತು ಗಂಗಾ ನದಿಯ ದಡದಲ್ಲಿ ಮಾಡುವ ದಾನಕ್ಕೆ ಈ ದಿನ ವಿಶೇಷ ಫಲವಿದೆ ಮತ್ತು ಇದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.ಕಟಕ ಹಾಗೂ ಮಕರ ರಾಶಿಗೆ ಸೂರ್ಯನ ಪ್ರವೇಶ ಬಹಳ ಫಲದಾಯಕವಾಗಿದ್ದು. ಈ ಪ್ರವೇಶ ಅಥವಾ ಸಂಕ್ರಮಣವು ಆರು ತಿಂಗಳ ಅಂತರದಲ್ಲಿ ಬರುವುದು.

 

 

ಭಾರತ ದೇಶವು ಉತ್ತರ ಗೋಳಾರ್ಧದಲ್ಲಿ ಸ್ಥಿತವಾಗಿದೆ ಆದ್ದರಿಂದ ಇಲ್ಲಿ ರಾತ್ರಿಯ ಸಮಯ ಅಧಿಕವಾಗಿದ್ದು, ದಿನ ಕಡಿಮೆ ಇರುತ್ತದೆ .ಭಾರತವು ಗೋಳಾರ್ಧದಿಂದ ತುಂಬಾ ದೂರದಲ್ಲಿದೆ. ಆದರೆ ಮಕರ ಸಂಕ್ರಾಂತಿಯ ನಂತರ ಸೂರ್ಯನು ಉತ್ತರ ಗೋಳಾರ್ಧದ ಕಡೆಗೆ ಬರುತ್ತಾನೆ. ಆದ್ದರಿಂದ ದಿನಂಪ್ರತಿ ರಾತ್ರಿ ಕಡಿಮೆಯಾಗಿ ಹಗಲು ಜಾಸ್ತಿಯಾಗುತ್ತಾ ಹೋಗುತ್ತದೆ. ದಿನದ ಸಮಯವು ಜಾಸ್ತಿ ಆಗುವುದರಿಂದ ಸೂರ್ಯನ ಪ್ರಕಾಶ ಅಧಿಕವಾಗಿ ಕಾಣಿಸುತ್ತದೆ. ಪ್ರಾಣಿಗಳಲ್ಲಿ ಚೇತನಾ ಶಕ್ತಿ ಹೆಚ್ಚಾಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಶಾಸ್ತ್ರಗಳ ಅನುಸಾರ ದಕ್ಷಿಣಾಯನ ದೇವತೆಗಳ ರಾತ್ರಿ ಅಂದರೆ ಅದು ನಕಾರಾತ್ಮಕಕ್ಕೆ ಪ್ರತೀಕವಾಗಿದ್ದು. ಉತ್ತರಾಯಣವನ್ನು ದೇವತೆಗಳ ದಿನ ಅಂದರೆ ಧನಾತ್ಮಕತೆಯ ಪ್ರತೀಕವೆಂದು ಭಾವಿಸಲಾಗಿದೆ. ಈ ದಿನ ಜಪ, ತಪಕ್ಕೆ ವಿಶೇಷ ಮಹತ್ವವಿದೆ. ಗಂಗಾ ಸ್ನಾನ, ದರ್ಪಣ ಅಥವಾ ಯಾವುದೇ ಪ್ರಕಾರದ ಧಾರ್ಮಿಕ ಕ್ರಿಯೆ ಮಾಡಿದರೆ ಇದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಶುದ್ಧ ಹಸುವಿನ ತುಪ್ಪ ಮತ್ತು ಕಂಬಳಿಯ ದಾನವನ್ನು ಮಾಡಿದರೆ ಮೋಕ್ಷದ ಮಾರ್ಗವೂ ದೊರೆತು ಮೋಕ್ಷ ಪ್ರಾಪ್ತಿಯಾಗುವುದು .

ಈ ಎರಡು ಮಹಾಸಂಯೋಗವು ಹೊತ್ತು ತಂದಿರುವ ಈ 2018ರ ಮಕರ ಸಂಕ್ರಾತಿ ಹಬ್ಬವು ಎಲ್ಲರಿಗೂ ಶುಭವನ್ನು ಹೊತ್ತು ತರಲಿ ಶುಭವನ್ನು ಉಂಟು ಮಾಡಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top