fbpx
ಸಮಾಚಾರ

ಕಲಿಯುಗದ ಪಾಂಚಾಲಿ ಈಕೆಗೆ ಐವರು ಗಂಡದಿಂದರಿದ್ದಾರೆ ಅಂದರೆ ನಂಬ್ತೀರಾ?

ಕಲಿಯುಗದ ಪಾಂಚಾಲಿ ಈಕೆಗೆ ಐವರು ಗಂಡದಿಂದರಿದ್ದಾರೆ ಅಂದರೆ ನಂಬ್ತೀರಾ?

ಪಾಂಚಾಲಿ

ರಜೋವರ್ಮಳನ್ನು ‘ಮುತ್ತು ಐದೆ’, ದ್ರೌಪದಿ, ಪಾಂಚಾಲಿ ಎಂದೆಲ್ಲಾ ಕರೆಯಬಹುದು.

ಮುತೈದೆ ಓಕೆ ಆದರೆ ಮುತ್ತು ಐದೆ ಹಾಗೂ ದ್ರೌಪದಿ ಎಂದೆಲ್ಲಾ ಯಾಕೆ ಕಿಂಡಲ್ ಮಾಡುವುದು?

ಇವಳಿಗೆ ಐವರು ಗಂಡದಿಂದರಿದ್ದಾರೆ. ಮಹಾಭಾರತದಲ್ಲಿದ್ದಂತೆ ಇವರೆಲ್ಲ ಸಹೋದರರೇ. ಅಚ್ಚರಿಯ ಸಂಗತಿಯೆಂದರೆ ಒಂದು ಕೋಣೆಯ ಮನೆಯಲ್ಲಿ ಎಲ್ಲರೂ ವಾಸವಾಗಿದ್ದಾರೆ.

ರಾತ್ರಿಯಾದರೇ…?

 

 

ಥೇಟ್ ‘ಮಹಾಭಾರತ’ದ ಪದ್ಧತಿ.

ಒಬ್ಬರಿಗೆ ಮಾತ್ರ ಅವಕಾಶ- ಉಳಿದವರಿಗೆ ಆಕಾಶ!

ಇನ್ನೊಂದು ವಿಷಯ ಏನಪ್ಪಾ ಅಂದರೇೀೀ ಈಕೆ ಒಂದು ಮಗುವಿನ ತಾಯಿ ಕೂಡ ಹೌದು.

 

 

ಅಪ್ಪ ಯಾರು?

‘ಗೊತ್ತಿಲ್ಲಪ್ಪ!’ ಎನ್ನುತ್ತಾಳೆ ರಜೋವರ್ಮ-ಆ ಮರ್ಮ ಬಿಡಿಸಲು ಸಹೋದರರು ಯಾರೂ ಸಿದ್ದರಿಲ್ಲ! ಏಕೆಂದರೆ ಅವರಿಗೆ ನೆಮ್ಮದಿ ಬೇಕು. ಮೇಲಾಗಿ ಎಲ್ಲರಿಗೂ ಆ ಮಗು ಬೇಕು. ನಕ್ಕಾಗ ಇವನಂತೆ, ಅತ್ತಾಗ ಅವನಂತೆ, ಬಿದ್ದಾಗ ಮತ್ತೊಬ್ಬನಂತೆ, ನಡೆದಾಗ ತನ್ನಂತೆ… ಎಂದೆಲ್ಲಾ ತಮ್ಮ ತಮ್ಮಲ್ಲಿಯೇ ಸಮಾಧಾನ ಮಾಡಿಕೊಳ್ಳುವ ದೊಡ್ಡ ಗುಣವುಳ್ಳವರು.

ಈ ಪಾಂಚಾಲಿಯ ಕುಟುಂಬ ಡೆಹ್ರಾಡೂನ್ ಸಮೀಪದ ಹಳ್ಳಿಯಲ್ಲಿದೆ. ಕೂಲಿ ಕಾರ್ಮಿಕರಾಗಿರುವ ಇವರದ್ದು ಬಡತನವಿರಬಹುದು. ಆದರೆ ಮಾನಸಿಕ ನೆಮ್ಮದಿಗೆ, ಹೃದಯ ಶ್ರೀಮಂತಿಕೆಗೆ ಕೊರತೆಯಿಲ್ಲ. ಇವರ ಪ್ರವರ ನಮ್ಮ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ವಿಶ್ವದ ನಾನಾ ಮಾಧ್ಯಮಗಳಲ್ಲಿ ಪ್ರಸಾರ/ಪ್ರಕಟವಾಗಿದೆ. ಆದರ್ಶ ದಾಂಪತ್ಯಕ್ಕೆ ಇವರು ಮತ್ತೊಂದು ಹೆಸರು.

 

 

ರಜೋವರ್ಮಳ ತಾಯಿ ಕೂಡ ಮೂವ್ವರು ಸಹೋದರರನ್ನು ವರಿಸಿದ್ದಳಂತೆ. ‘ತಾಯಂತೆ ಮಗಳು-ನೂಲಿನಂತೆ ಸೀರೆ’ ಎಂಬ ಗಾದೆಗೆ ರಜೋ- ರುಜುವಾತಾಗಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top