fbpx
ಸಮಾಚಾರ

ಬಿಕ್ಷುಕರಿಂದಾಗಿ ಈ ಊರಲ್ಲಿ 1 ರೂ. ನಾಣ್ಯವನ್ನ ಯಾರೂ ಸ್ವೀಕರಿಸೋದಿಲ್ಲ: ಯಾಕೆ ಗೊತ್ತಾ? ಓದಿ ವಿಚಿತ್ರವಾಗಿದೆ!

ಬಿಕ್ಷುಕರಿಂದಾಗಿ ಈ ಊರಲ್ಲಿ 1 ರೂ. ನಾಣ್ಯವನ್ನ ಯಾರೂ ಸ್ವೀಕರಿಸೋದಿಲ್ಲ: ಯಾಕೆ ಗೊತ್ತಾ? ಓದಿ ವಿಚಿತ್ರವಾಗಿದೆ!

 

 

ಈ ಸುದ್ದಿಯನ್ನು ಕೇಳಿ ನಿಮಗೆ ನಗು ಬರಬಹುದು ಆದರೆ ಇದು ಸತ್ಯ. ಒಂದು ರುಪಾಯಿಯ ನಾಣ್ಯ ಸಣ್ಣ ಗಾತ್ರವನ್ನು ಹೊಂದಿರುವ ಕಾರಣ ಅದ್ರಿಂದ ಬೇಸರಗೊಂಡು ಉತ್ತರ ಪ್ರದೇಶದ ರಾಮ್ಪುರ್ನಲ್ಲಿರುವ ಭಿಕ್ಷುಕರು ಒಂದು ಗುಂಪು ಈ ನಾಣ್ಯಗಳು ನಖಲಿ ನಾಣ್ಯಗಳಾಗಿದ್ದು ಇವನ್ನು ಒಪ್ಪಿಕೊಳ್ಳಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಿ ಒಂದು ರುಪಾಯಿಯ ನಾಣ್ಯವನ್ನು ಅಪಮಾನ್ಯ ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರೂ. 500 ಮತ್ತು ರೂ. 1,000 ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿದ್ದರು ಈಗ ನಾವು ಒಂದು ರೂಪಾಯಿ ನಾಣ್ಯವನ್ನು ಬ್ಯಾನ್ ಮಾಡುತ್ತಿದ್ದೇವೆ, ಒಂದು ರುಪಾಯಿಯ ನಾಣ್ಯ ಅದು ಗಾತ್ರದಲ್ಲಿ 50 ಪೈಸೆ ನಾಣ್ಯವನ್ನು ಹೋಲುತ್ತದೆ ಹಾಗಾಗಿ ಇದು ಒಂದು ರೂಪಾಯಿ ನಾಣ್ಯವಲ್ಲ ಇದು ನಕಲಿ ನಾಣ್ಯವಾಗಿರೋದ್ರಿಂದ ಈ ಸಣ್ಣ ಗಾತ್ರದ ಒಂದು ರುಪಾಯಿಯ ನಾಣ್ಯವನ್ನು ಸ್ವಯಂ ಪ್ರೇರಿತರಾಗಿ ರದ್ದುಪಡಿಸಿಕೊಳ್ಳಲು ನಾವು ನಿರ್ಧರಿಸಿ ಬ್ಯಾನ್ ಮಾಡುತ್ತಿದ್ದೇವೆ ಎಂದು ಶುಕ್ರಮಾಣಿ ಎಂಬ ಭಿಕ್ಷುಕ ಹೇಳಿದ್ದಾನೆ!

 

 

ಭಿಕ್ಷುಕರ ಈ ನಡೆಗೆ ಬೆಂಬಲವಾಗಿ ಒಂದು ರೂಪಾಯಿಯ ನಾಣ್ಯ ಗಾತ್ರದಲ್ಲಿ ತುಂಬಾ ಚಿಕ್ಕವಾಗಿರೋದ್ರಿಂದ ಇವು ಖೋಟಾ ನಾಣ್ಯಗಳೆಂದು ಭಾವಿಸಿ ಸ್ಥಳೀಯ ಸಣ್ಣ ಗಾತ್ರದ ಅಂಗಡಿಗಳ ವ್ಯಾಪಾರಿಗಳು, ಸಣ್ಣ ಹೋಟೆಲ್ ಮಾಲೀಕರು,ಆಟೋ ಚಾಲಕರು ಸೇರಿದಂತೆ ಸಣ್ಣ ಪುಟ್ಟ ವ್ಯವಹಾರಸ್ಥರು ಕೂಡ ಒಂದು ರುಪಾಯಿಯ ನಾಣ್ಯವನ್ನು ಸ್ವೀಕರಿಸುತ್ತಿಲ್ಲ ಎಂದು ವರದಿಯಾಗಿದೆ..

ಕೆಲವು ತಿಂಗಳ ಹಿಂದೆ ಇದೇ ರೀತಿ ಹತ್ತು ರೂಪಾಯಿಯ ನಾಣ್ಯ ಕೂಡ ನಕಲಿ ಅದನ್ನು ಸ್ವೀಕರಿಸಬಾರದು ಎಂದು ದೇಶದೆಲ್ಲೆಡೆ ಸುಳ್ಳು ಸುದ್ದಿಯೊಂದು ಹಬ್ಬಿತ್ತು ಹಾಗಾಗಿ ಜನ ಹತ್ತು ರೂಪಾಯಿಯ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದರು. ನಂತರ RBI ಅದರ ಬಗ್ಗೆ ಸ್ಪಷ್ಟೀಕರಣ ನೀಡಿದ ಮೇಲೆ ಹತ್ತು ರೂಪಾಯಿಯ ನಾಣ್ಯಗಳನ್ನು ಸ್ವೀಕರಿಸಲು ಜನ ಶುರು ಮಾಡಿದ್ದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top