fbpx
News

ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದ್ದು ಯಾಕೆ?

ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದ್ದು ಯಾಕೆ?

 

 

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಸಿಸಿಯು ಪಂದ್ಯದ ಒಟ್ಟು ಶುಲ್ಕದ ಶೇ . 25 ರಷ್ಟನ್ನು ದಂಡವಾಗಿ ವಿಧಿಸಲಾಗಿದೆ . ಪಂದ್ಯದ ಸಮಯದಲ್ಲಿ ಅನುಚಿತ ವರ್ತನೆಯನ್ನು ತೋರಿದ ಕಾರಣದಿಂದಾಗಿ ಕೊಹ್ಲಿ ಅವರು ದಂಡಕ್ಕೆ ಒಳಗಾಗಿದ್ದಾರೆ .

 

 

ಸದ್ಯ ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೂರನೆಯ ದಿನದಾಟದಲ್ಲಿ ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ ನ 25 ನೇ ಓವರ್ ನ ಆಟ ನಡೆಯುತ್ತಿತ್ತು . ಮಳೆಯಿಂದಾಗಿ ಮೈದಾನವು ತೇವವಾಗಿತ್ತು . ಇದರಿಂದ ಚೆಂಡಿಗೆ ತೊಂದರೆಯಾಗುತ್ತದೆಂದು ಕೊಹ್ಲಿ ಅವರು ಅಂಪೈರ್ ಬಳಿ ದೂರು ನೀಡಿದ್ದರು . ನಂತರ ಮಳೆ ಬಂದ ಕಾರಣದಿಂದಾಗಿ ಕೆಲಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು . ಇದಾದ ನಂತರವೇ ಮಂದ ಬೆಳಕಿನ ಕಾರಣದಿಂದಾಗಿ ದಿನದಾಟವನ್ನು ನಿಲ್ಲಿಸಲಾಯಿತು .

 

 

ಇದರಿಂದ ಕುಪಿತಗೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಚೆಂಡನ್ನು ಕೋಪದಿಂದ ನೆಲಕ್ಕೆ ಕುಕ್ಕಿದರು . ವಿರಾಟ್ ಕೊಹ್ಲಿ ಅವರ ಈ ವರ್ತನೆಯಿಂದಾಗಿ ಪಂದ್ಯದ ನಿಯಮವನ್ನು ಉಲ್ಲಂಘಿಸಿದಂತಾಗಿದೆಯೆಂದು ಐಸಿಸಿಯು ಕೊಹ್ಲಿ ಅವರಿಗೆ ದಂಡ ವಿಧಿಸಿದೆ . ಕೊಹ್ಲಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು , ದಂಡವನ್ನು ಪಾವತಿಸಲು ಸಮ್ಮತಿಸಿದ್ದಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top