fbpx
News

ಈ ಸುದ್ದಿವಾಚಕಿ ತನ್ನ ಮಗಳನ್ನು ಎತ್ತಿಕೊಂಡು ನ್ಯೂಸ್ ಓದ್ತಾ ಇದ್ದಾಳೆ: ಯಾಕೆ ಗೊತ್ತಾ?

ಈ ಸುದ್ದಿವಾಚಕಿ ತನ್ನ ಮಗಳನ್ನು ಎತ್ತಿಕೊಂಡು ನ್ಯೂಸ್ ಓದ್ತಾ ಇದ್ದಾಳೆ: ಯಾಕೆ ಗೊತ್ತಾ?

 

 

ಈ ಆಂಕರ್ ತನ್ನ ಮಗಳನ್ನು ಎತ್ತಿಕೊಂಡು ಸುದ್ದಿಯನ್ನು ಓದಿದ್ದಾಳೆ . ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಏಳು ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ . ಇದು ಇಡೀ ಪಾಕಿಸ್ತಾನಿಗಳ ಕ್ರೋಧಕ್ಕೆ ಕಾರಣವಾಗಿದ್ದು , ಅತ್ಯಾಚಾರದ ವಿರುದ್ಧ ಎಲ್ಲೆಡೆ ಹೋರಾಟ ನಡೆಯುತ್ತಿದೆ .

 

 

ಪಾಕಿಸ್ತಾನದ ಒಬ್ಬ ಆಂಕರ್ ತನ್ನ ಮಗಳ ಜೊತೆ ಈ ಸುದ್ದಿಯನ್ನು ಓದಿ ಎಲ್ಲರನ್ನು ಭಾವುಕರನ್ನಗಿಸಿದ್ದಾಳೆ . ಆಂಕರ್ ಕಿರಣ್ ನಾಜಾ ತನ್ನ ಹೆಣ್ಣು ಮಗಳನ್ನು ಎತ್ತುಕೊಂಡು ರೇಪ್ ಸುದ್ದಿಯನ್ನು ಓದಿದ್ದಾಳೆ . ಈ ಸಮಯದಲ್ಲಿ ಕಣ್ಣೀರಿಟ್ಟಿದ್ದಾಳೆ. ಪ್ರಾರಂಭದಲ್ಲಿ ನಾನು ಇಂದು ಕಿರಣ್ ಆಗಿ ಬಂದಿಲ್ಲ ಒಬ್ಬ ಅಮ್ಮನಾಗಿ ಸುದ್ದಿ ಓದಿತ್ತಿದ್ದೇನೆ ಎಂದಳು .

 

 

ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕಿರಣ್ ಪ್ರಶ್ನಿಸಿದ್ದಾಳೆ . ಹಿಂದಿನ ಗುರುವಾರ ಏಳು ವರ್ಷದ ಬಾಲಕಿಯ ಅಪಹರಣವಾಗಿತ್ತು . ಮಂಗಳವಾರ ಮಗುವಿನ ಶವ ಕಸದ ಬುಟ್ಟಿಯಲ್ಲಿ ಸಿಕ್ಕಿದೆ . ಮೂರ್ನಾಲ್ಕು ದಿನಗಳ ಹಿಂದೆಯೇ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top