fbpx
ನನ್ನ ಕಥೆ

ಹುಟ್ಟುತ್ತಲೇ ಅಂಧನಾಗಿ ಹುಟ್ಟಿದ ಶ್ರೀಕಾಂತ್ ಇಂದು ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ಹುಟ್ಟುತ್ತಲೇ ಅಂಧನಾಗಿ ಹುಟ್ಟಿದ ಶ್ರೀಕಾಂತ್ ಇಂದು ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ಹುಟ್ಟುನಿಂದಲೇ ಅಂಧನಾಗಿರುವ ಶ್ರೀಕಾಂತ್ ಬೊಲ್ಲನ್ಟ್ ಇಂಡಸ್ಟ್ರಿಯ ಸಿಇಒ ಹಾಗೂ 450 ಜನರಿಗೆ ಉದ್ಯೋಗದಾತರಾಗಿದ್ದಾರೆ.

Image result for ShriKanth is the CEO of Bollant Industry and is an employer of 450 people.

ಶ್ರೀಕಾಂತ್ ಬೊಲ್ಲ ಇಂದು ತನ್ನದೇ ಕಂಪನಿ ಬೊಲ್ಲನ್ಟ್ ಇಂಡಸ್ಟ್ರಿಯ ಸಿಇಒ. ಇವರ ಕಂಪನಿ 50 ಕೋಟಿಗೂ ಹೆಚ್ಚಿನ ಮೌಲ್ಯ ಹೊಂದಿದ್ದು, ಪರಿಸರದಲ್ಲಿ ದೊರಕುವ ಎಲೆ ಮತ್ತು ಪುನರ್ ಬಳಕೆ ಮಾಡಲಾಗುವ ವಸ್ತುಗಳಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯನ್ನು ಮಾಡಲಾಗುತ್ತದೆ.

Related image

ಇಷ್ಟಕ್ಕೂ ಶ್ರೀಕಾಂತ್ ಬೊಲ್ಲ ಸಾಧನೆ ಸಾಮಾನ್ಯವಾದುದಲ್ಲ. ಇವರು ಹುಟ್ಟುನಿಂದಲೇ ಅಂಧನಾಗಿದ್ದು, ಇವರನ್ನು ಪೋಷಿಸದಂತೆ ಆತನ ಸಂಬಂಧಿಗಳೇ ಅವರ ಪೋಷಕರಿಗೆ ಹೇಳಿದ್ದರಂತೆ ! ಆದರೆ ಇವರ ಪೋಷಕರು ಪೋಷಿಸಿದ ಫಲವೇ ಇಂದು ಶ್ರೀಕಾಂತ್ ಬೊಲ್ಲನ್ಟ್ ಇಂಡಸ್ಟ್ರಿಯ ಸಿಇಒ ಆಗಿ ಅಶಿಕ್ಷಿತ ಹಾಗೂ ದಿವ್ಯಾಂಗರಿಗೆ ತನ್ನ ಕಂಪನಿಯಲ್ಲಿ ಉದ್ಯೋಗ ನೀಡಿದ್ದಾರೆ.

Related image

ಈ ಸಾಧನೆಯ ಹಾದಿಯಲ್ಲಿ ಶ್ರೀಕಾಂತ್ ಬೊಲ್ಲ ಅವರ ಪಾಲನೆ ಪೋಷಣೆ ಮತ್ತು ಶಿಕ್ಷಣದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಶಾಲೆಗೆ ಸೇರಿಸುವ ಸಂದರ್ಭ ಹಲವು ಶಿಕ್ಷಣ ಸಂಸ್ಥೆಗಳು ಇವರಿಗೆ ಪ್ರವೇಶ ನೀಡಲು ನಿರಾಕರಿಸಿದ್ದವು. ತದ ನಂತರ ವಿಶೇಷ ಮಕ್ಕಳ ಶಾಲೆಗೆ ಸೇರಿಸಲಾಯಿತು. ಅಲ್ಲಿಯ ತರಗತಿಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದು, ಚೆಸ್ ಮತ್ತು ಕ್ರಿಕೆಟ್ ಆಟವಾಡುವುದರಲ್ಲಿ ಮೊದಲಿಗರಾಗಿದ್ದರು ಶ್ರೀಕಾಂತ್.

Related image

ಎಸ್.ಎಸ್.ಎಲ್.ಸಿ.ಯಲ್ಲಿ 90 ಪ್ರತಿಶತ ಅಂಕಗಳಿಸಿದರೂ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರವೇಶಾತಿ ದಾಖಲಿಸಲು ಆರು ತಿಂಗಳ ಹೋರಾಟ ನಡೆಸಬೇಕಾಯಿತು. ಪಿಯುಸಿಯಲ್ಲಿ ಇವರ ಶಿಕ್ಷಕರು ಆಡಿಯೋ ಕ್ಲಿಪ್ ಮೂಲಕ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಈ ಮೂಲಕ ಪಿಯು ಶಿಕ್ಷಣ ಪಡೆದ ಶ್ರೀಕಾಂತ್ ಪಿಯುಸಿಯಲ್ಲಿ 98 ಪ್ರತಿಶತ ಅಂಕಗಳನ್ನು ಪಡೆದು ಸಾಧನೆಯನ್ನು ಮರೆದರು. ಇದರ ನಂತರವೂ 2009ರಲ್ಲಿ ಐಐಟಿಯಲ್ಲಿ ಅಂಧತ್ವದ ಕಾರಣವನ್ನು ನೀಡಿ ಪ್ರವೇಶಾತಿ ನಿರಾಕರಿಸಲಾಯಿತು. ಆದರೆ 2012 ರಲ್ಲಿ Massachusetts Institute of Technology ಯಲ್ಲಿ ಪ್ರವೇಶಾತಿ ನೀಡಲಾಯಿತು.

ತದನಂತರ ಶ್ರೀಕಾಂತ್ ಬೊಲ್ಲ ತನ್ನದೇ ಕಂಪನಿ ಬೊಲ್ಲನ್ಟ್ ಇಂಡಸ್ಟ್ರಿನ ಸ್ಥಾಪಿಸಿದ್ದು 450 ಜನರಿಗೆ ಉದ್ಯೋಗದಾತರಾಗಿದ್ದಾರೆ.

Image result for ShriKanth is the CEO of Bollant Industry and is an employer of 450 people.

ಇವರ ಕಂಪನಿಯು ಕರ್ನಾಟಕದ ನೆರೆಯ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಫಟಕಗಳನ್ನು ಹೊಂದಿದೆ. ಇವರ ಸಾಧನೆಗೆ ದಿವಂಗತ ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ, ರತನ್ ಟಾಟಾ, ಸತೀಶ್ ರೆಡ್ಡಿ ಮತ್ತು ರವಿ ಮಂತ, ಶ್ರೀನಿ ರಾಜು ಮಂತಾಂದ ವ್ಯಾಪಾರ ಕ್ಷೇತ್ರದ ದಿಗ್ಗಜರು ಮತ್ತು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Image result for ShriKanth is the CEO of Bollant Industry and is an employer of 450 people.

ಇವರು ಮಾಜಿ ರಾಷ್ಟ್ರಪತಿ ಮತು ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂರೊಂದಿಗೆ ಯುವಕರನ್ನು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸುಶಿಕ್ಷಿತರನ್ನಾಗಿ ಲೀಡ್ ಇಂಡಿಯಾ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Image result for ShriKanth is the CEO of Bollant Industry and is an employer of 450 people.

ಇವರ ಕಂಪನಿಯಲ್ಲಿ ಟಾಟಾ ಸಂಸ್ಥೆಯ ರತನ್ ಟಾಟಾ, ಪೀಪುಲ್ ಕ್ಯಾಪಿಟಲ್‌ನ ಶ್ರೀನಿರಾಜು, ಡಾ. ರೆಡ್ಡಿ ಲೆಬೋರೇಟರಿಸ್‌ನ ಸತೀಶ್‌ರೆಡ್ಡಿ ಮತ್ತು ರವಿ ಮಂತ ರಂತಹ ವ್ಯಾಪಾರ ಕ್ಷೇತ್ರದ ದಿಗ್ಗಜರು ಹೂಡಿಕೆಯನ್ನು ಮಾಡಿದ್ದಾರೆ.

Related image

ಸಾಧನೆಗೆ ವೈಕಲ್ಯ ಬಾಧಿಸದು ಎನ್ನುವ ಶ್ರೀಕಾಂತ್, ಸಹಾನುಭೂತಿ ಎನ್ನುವುದು ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷುಕರಿಗೆ ಒಂದು ನಾಣ್ಯವನ್ನು ನೀಡುವುದಲ್ಲ. ಬದುಕುವ ದಾರಿ ತೋರಿಸಿ, ಅವರ ಏಳ್ಗೆಗೆ ಅವಕಾಶ ಕಲ್ಪಿಸುವುದಾಗಿದೆ ಎನ್ನುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top