fbpx
ಮನೋರಂಜನೆ

ಕನಕ: ಅಣ್ಣಾವ್ರ ಕಟೌಟ್ ಪ್ರಮುಖ ಆಕರ್ಷಣೆ!

ಕನಕ: ಅಣ್ಣಾವ್ರ ಕಟೌಟ್ ಪ್ರಮುಖ ಆಕರ್ಷಣೆ!

 

 

ಆರ್ ಚಂದ್ರು ನಿರ್ದೇಶನದ ಕನಕ ಚಿತ್ರ ತೆರೆಕಾಣಲು ಕ್ಷಣಗಣನೆ ಆರಂಭವಾಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಅಣ್ಣಾವ್ರ ಅಭಿಮಾನಿಯಾಗಿ ಕಾಣಿಸಿಕೊಳ್ಳುತ್ತಿರುವ ವಿಚಾರ ಗೊತ್ತೇ ಇದೆ. ನಿರ್ದೇಶಕ ಚಂದ್ರು ರಾಜ್‌ಕುಮಾರ್ ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಭಾರೀ ಎತ್ತರದ ಡಾ. ರಾಜ್ ಕಟೌಟನ್ನು ಮುಖ್ಯ ಚಿತ್ರಮಂದಿರದ ಮುಂದೆ ನಿಲ್ಲಿಸುವ ಬಗೆಗೂ ಮಾತಾಡಿದ್ದರು.
ಇದೀಗ ಅಣ್ಣಾವ್ರ ಅತಿ ಎತ್ತರದ ಕಟೌಟ್ ಸಿದ್ಧಗೊಂಡಿದೆ. ನಾಳೆ ಈ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಮುಖ್ಯ ಚಿತ್ರಮಂದಿರದ ಎದುರು ಈ ಕಟೌಟ್ ರಾರಾಜಿಸಲಿದೆ. ಆ ಬಳಿಕ ಅದಕ್ಕೆ ಹಾಲಿನ ಅಭಿಶೇಕ ಮಾಡುವ ಕಾರ್ಯಕ್ರಮವನ್ನೂ ಚಿತ್ರತಂಡ ಹಮ್ಮಿಕೊಂಡಿದೆ. ಈ ವಿಚಾರವೀಗ ಡಾ ರಾಜ್‌ಕುಮಾರ್ ಅಭಿಮಾನಿಗಳನ್ನೂ ಕೂಡಾ ಸೆಳೆಯುವಲ್ಲಿ ಯಶ ಕಂಡಿದೆ.

ಇದುವರೆಗೂ ಡಾ ರಾಜ್ ಕುಮಾರ್ ಅವರಿಂದ ಸ್ಫೂರ್ತಿ ಪಡೆದ ಕಥೆ ಹೊಂದಿರೋ ಒಂದಷ್ಟು ಚಿತ್ರಗಳು ಬಂದಿವೆ. ಆದರೆ ರಾಜ್‌ಕುಮಾರ್ ಅವರ ಅಭಿಮಾನಿಯೋರ್ವನ ರಿಯಲ್ ಕಥಾನಕ ಹೊಂದಿರೋ ಕನಕ ಬೇರೆಯದ್ದೇ ಫೀಲ್ ಹುಟ್ಟಿಸಲಿದೆ ಎಂಬ ಭರವಸೆ ಚಂದ್ರು ಅವರದ್ದು. ಮಾನ್ವಿತಾ ಹರೀಶ್ ಮತ್ತು ಹರಿಪ್ರಿಯಾ ವಿಜಯ್‌ಗೆ ನಾಯಕಿಯರಾಗಿ ಅಭಿನಯಿಸಿರೋ ಈ ಚಿತ್ರ ವಿಜಯ್ ಸಿನಿಮಾ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಗಳೂ ಇವೆ.

 

 

ಅಣ್ಣಾವ್ರ ಅಭಿಮಾನಿಯ ಕಥೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೆಣೆದಿರೋ ಚಂದ್ರು ನಾಯಕ ವಿಜಿಯನ್ನು ಮೈನವಿರೇಳಿಸೋ ಸಾಹಸ ದೃಶ್ಯಗಳಲ್ಲಿ ಮಿಂಚಿಸಿದ್ದಾರೆ. ಈ ಹಿಂದೆ ಕೆಂಡಸಂಪಿಗೆ ಚಿತ್ರದ ಪಾತ್ರದ ಮೂಲಕ ಗಮನ ಸೆಳೆದಿದ್ದ ಮಾನ್ವಿತಾ ಕನಕ ಚಿತ್ರದಲ್ಲಿ ಬೇರೆಯದ್ದೇ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ನಿಜಜೀವನದಲ್ಲಿಯೂ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮಾನ್ವಿತಾ ಈ ಚಿತ್ರದಲ್ಲಿ ರಾಜ್‌ಕುಮಾರ್ ಅಭಿಮಾನಿಯ ಪ್ರೇಯಸಿಯಾಗಿ ಕಾಣಿಸಿಕೊಂಡ ಖುಷಿಯಲ್ಲಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top