fbpx
ಮನೋರಂಜನೆ

ಚಳಿಗಾಲದಲ್ಲಿ ಮಳೆ ನಿಲ್ಲಲು ಸಾಧ್ಯವೇ? ಬಿ.ಎಸ್.ವೈ ಎಸ್ಕೇಪ್ ಆಗಿದ್ದು ಏಕೆ?

ಚಳಿಗಾಲದಲ್ಲಿ ಮಳೆ ನಿಲ್ಲಲು ಸಾಧ್ಯವೇ? ಬಿ.ಎಸ್.ವೈ ಎಸ್ಕೇಪ್ ಆಗಿದ್ದು ಏಕೆ?

 

 

ಪ್ರೊಫೆಷನಲ್ ಆಗಿ ಸಿನಿಮಾ ಮಾಡೋದನ್ನು ಬಿಟ್ಟು ಬೇರ‍್ಯಾವುದೋ ಕಾರಣಕ್ಕೆ ಸಿನಿಮಾ ಮಾಡೋರ ಕತೆಯೇ ಇಷ್ಟು. ಕೆಲವರನ್ನು ನೋಡಿದರಂತೂ ಇಂಥವರೆಲ್ಲಾ ಹೀರೋಗಳಾಗಿ ಸಿನಿಮಾ ಮಾಡ್ತಾರಲ್ಲ? ಅದೇನು ಭ್ರಮೆಯೋ ಇವರಿಗೆ ಅಂತಾ ಯಾರಿಗಾದರೂ ಅನಿಸುತ್ತದೆ. ಅಂಥವರ ಮಧ್ಯೆಯೇ ಗುಲ್ಜಾರ್ ಖಾನ್, ಹುಚ್ಚ ವೆಂಕಟ್ ರಂಥವರು ನಿರಂತರವಾಗಿ ಹೀರೋಗಳಾಗುತ್ತಲೇ ಇರುತ್ತಾರೆ. ಅದೇ ಸಾಲಿಗೆ ಸೇರೋ ಮತ್ತೊಂದು ದೈತ್ಯ ಪ್ರತಿಭೆ ಕುಳ್ಳ ಜಾನಿ ಅಲಿಯಾಸ್ ಅಮೋಘ್!

‘ಜಗತ್ತನ್ನೇ ಬದಲಾಯಿಸಿಬಿಡ್ತೀನಿ’ ಅಂತಾ ಬಂದು ‘ಸ್ವಯಂ ಕೃಷಿ’ ಎನ್ನುವ ಬ್ಲೇಡು ಕಂಪೆನಿ ಆರಂಭಿಸಿ, ಅದರಲ್ಲಿ ಗೆಬರಿದ ದುಡ್ಡಲ್ಲೇ ವೀರೇಂದ್ರ ಅನ್ನೋ ಐನಾತಿಯೊಬ್ಬ ಸಿನಿಮಾ ಮಾಡಿದ್ದ ಗೊತ್ತಾ? ಆ ಚಿತ್ರದ ನಿರ್ದೇಶಕರೇ ಶ್ರೀಮಾನ್ ಜನಾರ್ಧನ್! ಈ ಪ್ರಜೆ ‘ಸ್ವಯಂ ಕೃಷಿ’ಯ ನಂತರ ಮತ್ತೊಬ್ಬ ರಾಜಕಾರಣಿಯ ತಲೆ ಸವರಿ ‘ಪೋರ’ ಅನ್ನೋ ಸಿನಿಮಾವನ್ನು ಆರಂಭಿಸಿತ್ತು. ಸರಿಸುಮಾರು ಏಳೆಂಟು ವರ್ಷಗಳ ನಂತರ ಸದರಿ ಚಿತ್ರಕ್ಕೆ ‘ನೀನಿಲ್ಲದ ಮಳೆ’ ಅನ್ನೋ ಹೆಸರನ್ನಿಟ್ಟು ರಿಲೀಸೂ ಮಾಡಲಾಯಿತು. ವಾರಕ್ಕೆ ಮುನ್ನವಷ್ಟೇ ಬಿಡುಗಡೆಗೊಂಡ ಈ ಚಿತ್ರದ ಪೋಸ್ಟರುಗಳು ಗೋಡೆ ಮೇಲಿನ ಪಳೆಯುಳಿಕೆಯಾಗಿವೆಯೇ ವಿನಃ ಯಾವ ಚಿತ್ರಮಂದಿರದಲ್ಲೂ ಉಳಿದುಕೊಂಡ ಕುರುಹುಗಳು ಸಿಗುತ್ತಿಲ್ಲ.

 

 

ಸಾಮ್ರಾಜ್ಯಶಾಹಿ ಅಮೆರಿಕದ ವಿರುದ್ಧದ ಕತೆಯನ್ನು ಅಮೆರಿಕದಲ್ಲೇ ಚಿತ್ರೀಕರಿಸಿಕೊಂಡು ಬಂದಿದ್ದೀನಿ. ಇದು ಬಿಡುಗಡೆಯಾದರೆ ಜಾಗತಿಕಮಟ್ಟದಲ್ಲಿ ಸುದ್ದಿಯಾಗಿಬಿಡುತ್ತದೆ ಅಂತಾ ಜಾನಿ ಸಿಕ್ಕಸಿಕ್ಕಲ್ಲಿ ರೀಲು ಬಿಡುತ್ತಿತ್ತು. ಈ ಚಿತ್ರವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೋರಿಸಿ, ಅವರಿಂದ ಒಂದು ಹೇಳಿಕೆ ಪಡೆದರೆ ಅದನ್ನು ನೋಡಿದ ಜನ ಒಬ್ಬರ ಮೇಲೊಬ್ಬರು ಬಿದ್ದು, ಒದ್ದಾಡಿಕೊಂಡು ಥಿಯೇಟರಿಗೆ ನುಗ್ಗಿಬಿಡುತ್ತಾರೆ ಎನ್ನುವ ಅಮೋಘ ಲೆಕ್ಕಾಚಾರ ಕಾರ್ಯರೂಪಕ್ಕೂ ಬರಲಿಲ್ಲ. ಯಾಕೆಂದರೆ ಸಿನಿಮಾ ನೋಡಲು ಬಂದ ಯಡಿಯೂರಪ್ಪನವರು ಹತ್ತೇ ನಿಮಿಷಕ್ಕೆ ‘ಥೂತ್ತೇರಿ ಇದೇನ್ ಸಿನಿಮಾನ್ರೀ’ ಅಂದುಕೊಂಡು ಓಟ ಕಿತ್ತಿದ್ದರು. ಯಡಿಯೂರಪ್ಪನವರೇ ನೋಡದ ಮಳೆಯನ್ನು ಇನ್ಯಾರು ನೋಡಲು ಸಾಧ್ಯ?

‘ನೀನಿಲ್ಲದ ಮಳೆ’ ಥಿಯೇಟರಿನಲ್ಲಿ ನಿಲ್ಲದ ಕಾರಣ ನೊಂದ ಜಾನಿ ಗಾಂಧಿನಗರದಲ್ಲಿ ಗೋಡೆಯೊಂದಕ್ಕೆ ಮುಖ ಮಾಡಿ ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ’ ಅಂತಾ ತನ್ನದೇ ಸಿನಿಮಾದ ಪೋಸ್ಟರಿನ ಮೇಲೆ ಬಿಸಿನೀರು ಸುರಿಸುತ್ತಿತ್ತಂತೆ!

 

>

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top