fbpx
ಭವಿಷ್ಯ

03 ಫೆಬ್ರವರಿ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೦೩ ಫೆಬ್ರವರಿ ೨೦೧೮
ಸೂರ್ಯೋದಯ : ೦೬:೪೯
ಸೂರ್ಯಾಸ್ತ : ೧೮:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾಘ
ಪಕ್ಷ : ಕೃಷ್ಣ ಪಕ್ಷ
ತಿಥಿ : ತದಿಗೆ
ನಕ್ಷತ್ರ : ಹುಬ್ಬ
ಯೋಗ : ಅತಿಗಂಡ
ಪ್ರಥಮ ಕರಣ : ವಿಷ್ಟಿ
ಸೂರ್ಯ ರಾಶಿ : ಮಕರ
ಅಭಿಜಿತ್ ಮುಹುರ್ತ : ೧೨:೧೦ – ೧೨:೫೬
ಅಮೃತಕಾಲ : ೨೭:೩೩+ – ೨೯:೦೫+
ರಾಹು ಕಾಲ: ೦೯:೪೧ – ೧೧:೦೭
ಗುಳಿಕ ಕಾಲ: ೦೬:೪೯ – ೦೮:೧೫
ಯಮಗಂಡ: ೧೩:೫೯ – ೧೫:೨೫

ಮೇಷ (Mesha)

ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಆದಷ್ಟು ಎಚ್ಚರ ಜತೆಗೆ ಇರಲಿ.

ವೃಷಭ (Vrushabh)


ದೂರದ ಊರಿನ ಪ್ರವಾಸದ ಬಗೆಗೆ ಪೂರ್ತಿ ತಯಾರಿಯಿಂದಲೇ ಇರಿ. ಸರ್ರನೆ ನಿಶ್ಚಯ ಸಾಧ್ಯವಾಗಲಿದೆ.

ಮಿಥುನ (Mithuna)


ಎಲ್ಲವೂ ಕೇವಲ ಅರ್ಧರ್ಧ ಕೆಲಸಗಳು ಪೂರೈಸುತ್ತಿವೆ ಎಂಬ ಚಿಂತೆ ಬೇಡ. ಪರ್ಯಾಯ ಮಾರ್ಗಗಳು ಕೂಡ ಲಭ್ಯ.

ಕರ್ಕ (Karka)


ಕ್ರೀಡಾಪಟುಗಳಿಗೂ, ಬಂಗಾರದ ಒಡವೆ, ರತ್ನದ ಹರಳುಗಳ ವ್ಯಾಪಾರಿಗಳಿಗೂ ಹಿನ್ನಡೆಆಗಲಿದೆ. ಎಚ್ಚರ ಇರಲಿ.

ಸಿಂಹ (Simha)


ಆನೆ ನಡೆದಿದ್ದೇ ದಾರಿ ಎಂಬ ವಿಚಾರ ಮನಸ್ಸಿಗೆ ಬಾರದಿರಲಿ. ಸರಳತೆ, ವಿನಯಗಳಿಂದಲೇ ಎಲ್ಲರನ್ನೂ ಗೆದ್ದು ನೋಡಿ.

ಕನ್ಯಾರಾಶಿ (Kanya)


ನಿಮ್ಮದು ಮೃದು ಮನಸ್ಸು. ಆದರೆ ಅಯೋಗ್ಯರು ಶೋಷಿಸಬಹುದು. ಜಾಣತನವು ಮಾತ್ರ ನಿಮ್ಮ ಜತೆಗೆ ಇದ್ದೇ ಇರಲಿ.

ತುಲಾ (Tula)


ವ್ಯಾಪಾರ, ವ್ಯವಹಾರಗಳು ಪುನಶ್ಚೇತನಗೊಂಡಾವು. ವೈದ್ಯಕೀಯ ವೃತ್ತಿ ನಿರತರಿಗೆ ಉತ್ತಮ ಆದಾಯ. ಶಿಕ್ಷಣ ವರ್ಗಕ್ಕೆ ಸಾœನಮಾನ ಪ್ರಾಪ್ತಿ. ಸ್ವಾಭಿಮಾನಿಗಳಿಗೆ ಅಪಮಾನ ಪ್ರಸಂಗ ಒದಗಿ ಬಂದೀತು.

ವೃಶ್ಚಿಕ (Vrushchika)


ವಿವಾಹಿತರಿಗೆ ಹೊಂದಾಣಿಕೆ ಅತೀ ಆಗತ್ಯವಿದೆ. ಸಹೋದರರೊಳಗೆ ಧನಚಿತಾವಣೆ. ಯುವತಿಯ ಪ್ರೇಮ ಪ್ರಕರಣ ಬಹಿರಂಗಗೊಳ್ಳಲಿದೆ. ವ್ಯಾಪಾರಿಗಳಿಗೆ ಸರಕಾರಿ ಅಧಿಕಾರಿಗಳಿಂದ ಕ್ಲೇಶ ಒದಗಿ ಬಂದೀತು.

ಧನು ರಾಶಿ (Dhanu)


ಬಂಧುಗಳ ಸಮಾಗಮ ಸಂತಸ ತಂದೀತು. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ವಾಹನ ಸಂಚಾರದಲ್ಲಿ ಅತೀ ಹೆಚ್ಚಿನ ಜಾಗ್ರತೆ ವಹಿಸಿರಿ. ದಾಯಾದಿಗಳ ಬಗ್ಗೆ ಹೆಚ್ಚಿನ ವಿಶ್ವಾಸಬೇಡ.

ಮಕರ (Makara)


ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಲಿದ್ದಾರೆ. ನೂತನ ವ್ಯವಹಾರ ಗಳಿಗೆ ಧೈರ್ಯದಿಂದ ಮುಂದುವರಿದರೂ ಜಾಗ್ರತೆ ಅತೀ ಆಗತ್ಯ. ವಾಹನ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ಮನಸ್ಸು ಮಾಡಬಹುದು.

ಕುಂಭರಾಶಿ (Kumbha)


ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿದಾಯಕ ವಾತಾವರಣವಿರುತ್ತದೆ. ಆಗಾಗ ತಾಪತ್ರಯಧಿಗಳು ತೋರಿ ಬಂದರೂ ಹಂತ ಹಂತವಾಗಿ ಉಪಶಮನವಾಗಲಿವೆ. ಸಾಂಸಾರಿಕವಾಗಿ ದೂರ ಪ್ರಯಾಣದ ಯೋಗವಿದೆ.

ಮೀನರಾಶಿ (Meena)


ನೂತನ ವ್ಯವಹಾರಗಳು ಅಭಿವೃದ್ಧಿದಾಯಕವಾದರೂ ಹೆಚ್ಚಿನ ಗಮನ ಆಗತ್ಯವಿದೆ. ಸರಕಾರಿ ಅಧಿಕಾರಿಗಳಿಗೆ ವಿದೇಶಯಾನದ ಯೋಗ ಒದಗಿ ಬರಲಿದೆ. ಆರ್ಥಿಕವಾಗಿ ಅನಿರೀಕ್ಷಿತ ರೂಪದಲ್ಲಿ ಧನಾಗಮನವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top