fbpx
ಮನೋರಂಜನೆ

ಪ್ರಾಣಿ ಪ್ರೀತಿಯ ದರ್ಶನ್.

 

 

ಸಂಬಂಧಗಳಿಗೇ ಬೆಲೆಯಿಲ್ಲದ, ಸ್ನೇಹಕ್ಕೂ ಕಿಮ್ಮತ್ತಿಲ್ಲದ ಈ ಪ್ರಪಂಚದಲ್ಲಿ ದರ್ಶನ್‌ರ ಜೀವಪರ ಕಾಳಜಿ ನಿಜಕ್ಕೂ ದೊಡ್ಡ ವಿಚಾರವೇ ಸರಿ.
ದರ್ಶನ್ ಬರೀ ಮನುಷ್ಯ ಜೀವನಕ್ಕೆ ಮಾತ್ರ ಬೆಲೆ ಕೊಡುವ ವ್ಯಕ್ತಿಯಲ್ಲ. ಬದಲಿಗೆ ಪ್ರಪಂಚದ ಎಲ್ಲ ಬಗೆಯ ಪ್ರಾಣಿಗಳ ಕಡೆಗೂ ದರ್ಶನ್‌ಗೆ ಅಪಾರವಾದ ಒಲವು. ಇವತ್ತಿಗೂ ದರ್ಶನ್ ತಮ್ಮ ಮನೆಯಲ್ಲಿ ಹತ್ತಾರು ಪ್ರಬೇಧದ, ವಿಭಿನ್ನವಾದ ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ ಎಂದರೆ ನಂಬಲೇಬೇಕು..

 

 

ತಾವು ಚಿತ್ರೀಕರಣಕ್ಕೆಂದು ಹೊರ ದೇಶಗಳಿಗೆ ಹೋದಾಗಲೆಲ್ಲಾ ಅಲ್ಲಿಂದ ಯಾವುದಾದರೊಂದು ಸಾಕು ಪ್ರಾಣಿಯನ್ನೂ, ಪಕ್ಷಿಗಳನ್ನೋ ತಂದಿಟ್ಟುಕೊಳ್ಳುವುದು ದರ್ಶನ್‌ಗೆ ಮಾಮೂಲಿಯಾಗಿಬಿಟ್ಟಿದೆ. ದರ್ಶನ್ ತಮ್ಮ ಎಸ್ಟೇಟಿನಲ್ಲಿ ಈಗಲೂ ಕುದುರೆ, ಒಂಟೆಗಂಳಂಥ ಪ್ರಾಣಿಗಳನ್ನು ಪ್ರೀತಿಯಿಂದ ಸಲಹುತ್ತಿದ್ದಾರೆ. ಸಾಮಾನ್ಯವಾಗಿ ಯಾರಾದರೂ ಫಾರಿನ್ ಟೂರುಗಳಿಗೆ ಹೋದರೆ ಮನೆಯ ಹಿರಿಯರಿಗೆ, ಸ್ನೇಹಿತರಿಗೆ ಅಲ್ಲಿನ ದುಬಾರಿ ಡ್ರಿಂಕ್ಸುಗಳನ್ನು ತಂದುಕೊಡುವುದು ವಾಡಿಕೆ. ಆದರೆ, ದರ್ಶನ್ ತಾವು ಹೊರದೇಶಗಳಿಂದ ಬರುವಾಗ ದುಬಾರಿ ರಮ್‌ಗಳನ್ನು ತಂದು ತಮ್ಮ ಕುದುರೆಗಳಿಗೆ ಕುಡಿಸುತ್ತಾರೆ. ಹೀಗಾಗಿ ದರ್ಶನ್ ತಮ್ಮ ತೋಟದೊಳಗೆ ಎಂಟ್ರಿ ನೀಡುತ್ತಿದ್ದಂತೇ ಆ ಕುದುರೆಗಳು ಇವರ ಆಗಮನಕ್ಕಾಗಿ ಕೆನೆದು ನಿಲ್ಲುತ್ತವಂತೆ..

 

 

ದರ್ಶನ್ ಪ್ರಾಣಿ ಪ್ರೀತಿ ಅಂದೆಂಥಾ ಪರಾಕಾಷ್ಟೆಯ ಹಂತ ತಲುಪಿತು ಎಂಬುದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ: ಇನ್ನೂ ಮದುವೆಗೆ ಮುಂಚೆ ಹೊರದೇಶದಿಂದ ಹೆಣ್ಣು ಉಷ್ಟ್ರಪಕ್ಷಿಯೊಂದನ್ನು ದರ್ಶನ್ ತಂದು ತಮ್ಮ ಮನೆಯಲ್ಲಿ ಸಾಕಿದ್ದರು. ದರ್ಶನ್‌ರೊಂದಿಗೆ ಅಪಾರ ಪ್ರೀತಿಯಿಂದ ಬೆರೆಯುತ್ತಿದ್ದ ಆ ಪಕ್ಷಿ ದರ್ಶನ್ ಮದುವೆಯಾಗುತಿದ್ದಂತೇ ಖಿನ್ನತೆಗೆ ಒಳಗಾಗಿಬಿಟ್ಟಿತು. ಇನ್ನೂ ಒಂದು ಹಂತ ಮುಂದೆ ಹೋದಮೇಲೆ ದರ್ಶನ್ ಬಗೆಗೆ ತೀರಾ ಪೊಸೆಸಿವ್ ಆದ ಆ ಪಕ್ಷಿ ದರ್ಶನ್‌ಪತ್ನಿಯ ವ್ಯಾನಿಟಿ ಬ್ಯಾಗು, ಸೇರಿದಂತೆ ಆಕೆಯ ವಸ್ತುಗಳನ್ನೆಲ್ಲಾ ನಾಶಮಾಡಲು ಶುರು ಮಾಡಿತಂತೆ. ಕಡೆಗೊಂದು ದಿನ ಆ ಪಕ್ಷಿಯ ಉತ್ಕಟ ಪ್ರೀತಿಯ ಹಿಂಸೆಯನ್ನು ತಾಳಲಾರದೇ ತಮ್ಮ ಸ್ನೇಹಿತರೊಬ್ಬರ ಸುಪರ್ದಿಗೆ ಆ ಪಕ್ಷಿಯನ್ನು ಬಿಟ್ಟುಬಂದೆಂತೆ..!

ತೀರಾ ಬಡತನದ ದಿನಗಳಲ್ಲೂ, ತಮ್ಮ ದುಡಿಮೆಯ ಒಂದು ಪಾಲನ್ನು ಪಾರಿವಾಳ, ನಾಯಿಗಳಿಗೆ ವ್ಯಯಿಸುತಿದ್ದ ದರ್ಶನ್ ತಮ್ಮ ಪ್ರವೃತ್ತಿಯನ್ನು ಇಂದಿಗೂ ಹಾಗೇ ಉಳಿಸಿಕೊಂಡು, ಜೊತೆಗೆ ಬೆಳೆಸಿಕೊಂಡು ಬಂದಿದ್ದಾರೆ. ಮನುಷ್ಯತ್ವಕ್ಕೇ ಬೆಲೆ ಕೊಡದ ಈ ಬಣ್ಣದ ಲೋಕದಲ್ಲಿ ಇಂಥ ಪ್ರಾಣಿಪ್ರಿಯರು ಎಷ್ಟು ಅಪರೂಪ ಅಲ್ಲವೇ?

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top