fbpx
ಸಿನಿಮಾ

ದರ್ಶನ ಹುಟ್ಟುಹಬ್ಬದ ದಿನ ಹೊರಬಿತ್ತು ಸಂತಸದ ಸುದ್ದಿ.. 16 ವರ್ಷದ ನಂತರ ಮತ್ತೆ ಒಂದಾಗಿ ಮೆಜೆಸ್ಟಿಕ್ ತಂಡದಿಂದ ಹೊಸ ಚಿತ್ರ.

ದರ್ಶನ ಹುಟ್ಟುಹಬ್ಬದ ದಿನ ಹೊರಬಿತ್ತು ಸಂತಸದ ಸುದ್ದಿ.. 16 ವರ್ಷದ ನಂತರ ಮತ್ತೆ ಒಂದಾಗಿ ಮೆಜೆಸ್ಟಿಕ್ ತಂಡದಿಂದ ಹೊಸ ಚಿತ್ರ.

ಮೆಜೆಸ್ಟಿಕ್ ಬಿಡುಗಡೆಯಾಗಿ ಈ ವರ್ಷಕ್ಕೆ 16 ವರ್ಷವಾಗಿದೆ ಕಳೆದಿವೆ ಅಂಡರ್ ವರ್ಲ್ಡ್ ಕಥಾ ಹಂದರವನ್ನು ಹೊಂದಿದ್ದ ಅನೇಕರ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿತ್ತು ಮೆಜೆಸ್ಟಿಕ್ ಈ ಚಿತ್ರದ ಹದಿನಾರನೇ ವರ್ಷದ ಸವಿನೆನಪಿಗಾಗಿ ನಿರ್ಮಾಪಕ ಎಂಜಿ ರಾಮಮೂರ್ತಿ ಖಾಸಗಿ ಕಾರ್ಯಕ್ರಮವೊಂದನ್ನು ನೆಲಮಂಗಲದ ರೆಸಾರ್ಟ್ವೊಂದರಲ್ಲಿ ಆಯೋಜನೆ ಮಾಡಿದ್ದರು.

 

 

ಪ್ರಪ್ರಥಮವಾಗಿ ನಾಯಕ ನಟನಾಗಿ ದರ್ಶನ ಅವರು ಮೆಜೆಸ್ಟಿಕ್ ಚಿತ್ರದಲ್ಲಿ ಅಭಿನಯ ಮಾಡಿದ್ದರು. ಈ ಚಿತ್ರ ಅವರ ಲೈಫ್ ಚೇಂಜ್ ಮಾಡಿದ ಚಿತ್ರ. ಇಂದಿಗೂ ದರ್ಶನ ಚಿತ್ರ ತಂಡದ ಸದಸ್ಯರನ್ನು ಮರೆಯುವುದಿಲ್ಲ. ದರ್ಶನ್ ಅವರು ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾಗಿದ್ದ ರಾಮಮೂರ್ತಿ ಅವರ ಜೊತೆಗೆ ಸೇರಿಕೊಂಡು ಈಗ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಕನ್ನಡಕ್ಕೆ ಒಂದು ಅದ್ಬುತ ಚಿತ್ರವನ್ನು ನೀಡಿದ್ದ ದರ್ಶನ ಹಾಗು ರಾಮಮೂರ್ತಿ ಈಗ ಮತ್ತೆ ಒಂದಾಗಿ ಚಿತ್ರ ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಇವರು ಅದ್ಬುತ ಚಿತ್ರವನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಲಿ ಎಂದು ಆಶಿಸೋಣ. ದರ್ಶನ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಅಪಾರ ಸಂತೋಷ ಉಂಟು ಮಾಡಿದೆ ಎನ್ನಲಾಗಿದೆ.

 

ಸಮಾರಂಭದಲ್ಲಿ ಮೆಜೆಸ್ಟಿಕ್ ಚಿತ್ರದ ಛಾಯಾಗ್ರಹಣ ಮಾಡಿದ್ದ ಅಣಜಿ ನಾಗರಾಜ್ ಹಾಗೂ ಸೀನು , ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ರಮೇಶ್ , ಮ್ಯಾನೇಜರ್ ರಾಮು ,ಸಹ ಕಲಾವಿದರಾದ ಹರೀಶ್ ರಾಯ್ ಜೈಜಗದೀಶ್ ನಿರ್ಮಾಪಕರಾದ ಭೋಜರಾಜ ರೈ ಹಾಗೂ ಇನ್ನೂರಕ್ಕಿಂತಲೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರನ್ನು ಈ ಸಮಯದಲ್ಲಿ ಗೌರವಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top