fbpx
ಆರೋಗ್ಯ

ಸೂಪರ್ ಕೂದಲಿಗಾಗಿ 12 ಸೂಪರ್ ಫುಡ್

1.ವಾಲ್ ನೆಟ್:
ವಾಲ್ ನೆಟ್ ನಲ್ಲಿ ವಿಟಮಿನ್ ಇ ಅಧಿಕವಿರುತ್ತದೆ. ಇದು ತಲೆ ಬುಡದಲ್ಲಿ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ ಹಾಗೂ ಇದರಲ್ಲಿ ಸತುವಿಂಶ ಅಧಿಕವಾಗಿ ಇದೆ. ಇದರಿಂದಾಗಿ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

2.ಬಾದಾಮಿ:
ಬಾದಾಮಿಲ್ಲೂ ವಿಟಮಿನ್ ಇ ಇರುವುದರಿಂದ ಇದನ್ನು ಪ್ರತಿದಿನ ತಿನ್ನುವುದು ಕೂದಲಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3.ಸೂರ್ಯಕಾಂತಿ ಬೀಜ:
ಸೂರ್ಯಕಾಂತಿ ಹೂವಿನ ಬೀಜದಲ್ಲಿ ಅಧಿಕ ಪ್ರೊಟೀನ್, ಪೊಟಾಷ್ಯಿಯಂ, ವಿಟಮಿನ್ ಇ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಇರುತ್ತದೆ. ಈ ಬೀಜ ತಿನ್ನಲೂ ರುಚಿಕರವಾಗಿರುತ್ತದೆ. ಈ ಬೀಜವನ್ನು ಕೊಳ್ಳುವಾಗ ಅದರಲ್ಲಿ ಸೋಡಿಯಂ ಅಥವಾ ಇತರ ರುಚಿಯ ರುಚಿಯನ್ನು ಸೇರಿಸಿದ್ದರೆ ಅಂತಹ ಬೀಜಗಳನ್ನು ಕೊಳ್ಳಬೇಡಿ.

4.ಅಂಜೂರ:
ಅಂಜೂರದಲ್ಲಿ ಎ,ಬಿ ಮತ್ತು ಸಿ, ಫಾಲಿಕ್ ಆಸಿಡ್, ಸತು, ಸೋಡಿಯಂ ಮತ್ತು ಪೊಟಾಷ್ಯಿಯಂ ಇರುತ್ತದೆ. ಅಂಜೂರದಲ್ಲಿ ಬಾಳೆ ಹಣ್ಣಿನಲ್ಲಿ ಇರುವುದಕ್ಕಿಂತ 80% ಅಧಿಕ ಪೊಟಾಷ್ಯಿಯಂ ಅಂಶವಿರುತ್ತದೆ.

5.ಆಪ್ರಿಕಾಟ್ ಮತ್ತು ಪೀಚ್:
ಇದರಲ್ಲಿ ಹಿಮೋಗ್ಲೋಬಿನ್ ಗೆ ಅವಶ್ಯಕವಾದ ಕಬ್ಬಿಣದಂಶ ಅಧಿಕವಿರುತ್ತದೆ. ಕಬ್ಬಿಣದಂದ ಕೊರತೆ ಉಂಟಾದರೆ ಮುಖ ಬಿಳುಚಿಕೊಳ್ಳುವುದು, ಕೂದಲು ತೆಳ್ಳಗಾಗುವುದು.

6.ಬಾಳೆಹಣ್ಣು:
ಇದರಲ್ಲಿ ಅಮೈನೊ ಆಸಿಡ್ ಅಧಿಕವಿರುತ್ತದೆ. ಅಮೈನೊ ಆಸಿಡ್ ದೇಹಕ್ಕೆ ಅವಶ್ಯಕವಾಗಿ ಬೇಕು. ಆದರೆ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಅಮೈನೊ ಆಸಿಡ್ ಇರುವ ಆಹಾರ ಸೇವಿಸುವುದು ಅವಶ್ಯಕ.

7.ರಾಸ್ ಬರಿ ಹಾಗೂ ಸ್ಟ್ರಾಬರಿ:
ಇವುಗಳಲ್ಲಿ ವಿಟಮಿನ್ ಎ ಮತ್ತು ಇ ಇದ್ದು ತಲೆ ಬುಡದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಸಹಕಾರಿಯಾಗಿದೆ.

8.ಸಿಟ್ರಸ್ ಆಹಾರ:
ಕಿತ್ತಳೆ, ನಿಂಬೆ ರಸ, ನೆಲ್ಲಿಕಾಯಿ ಹೀಗೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

9.ಒಣದ್ರಾಕ್ಷಿ:
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದು ಕೂದಲಿಗೂ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

10.ಹಾಲು, ಸೋಯಾ:
ಹಾಲು, ಸೋಯಾ ಇ, ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹಾಗೂ ಬಿ12 ಅಧಿಕವಿದ್ದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

11.ದವಸದಾನ್ಯಗಳು:
ದವಸ ಧಾನ್ಯಗಳಲ್ಲಿ ವಿಟಮಿನ್ ಬಿ5 ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.

12.ಸೊಪ್ಪು:
ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಅಧಿಕ ಪೋಷಕಾಂಶವಿರುವುದರಿಂದ ದೇಹದ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top