fbpx
ದೇವರು

ಶ್ರೀ ಕ್ಷೇತ್ರ ಧರ್ಮಸ್ಥಳ ಹಿನ್ನಲೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಕ್ಷೆತ್ರವು ಅತೀ ಪುರಾತನ ಧರ್ಮಿಕ ಕ್ಷೆತ್ರಗಳಲೊಂದು.ಈಗಿನ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಹಿಂದೆ “ಕೊಡುಮ” ಎಂಬ ಹೆಸರಿತ್ತು. “ಕೊಡುಮ” ಎಂದರೆ ದಾನ ಕೊಡುವ ಜಾಗ ಎಂದರ್ಥ. ನೂರಾರು ವರ್ಷಗಳ ಹಿಂದೆ ಇಲ್ಲಿ ಭೀರ್ಮಣ್ಣ ಪರ್ಗಡೆ ಎಂಬ ಜೈನ ಮುಖ್ಯಸ್ಥ ತನ್ನ ಪತ್ನಿ ಆದ ಅಮ್ಮು ಬಲ್ಲಳ್ತಿ ಜೊತೆಯಲ್ಲಿ ವಾಸವಿರುತ್ತಾರೆ. ಅವರಿದ್ದ ಮನೆಯ ಹೆಸರು “ನೆಲ್ಯಾಡಿ ಬೀಡು” ಎಂದಿತ್ತು. ಅವರ ಮನೆಯ ಸಮೀಪದಲ್ಲಿ ಚಂದ್ರನಾತ ಸ್ವಾಮಿ ದೇವಾಲಯವಿತ್ತು. ಭೀರ್ಮಣ್ಣ ಹಾಗು ಅಮ್ಮು ಮಹಾನ್ ದೈವ ಭಕ್ತರಾಗಿದ್ದರು. ಅವರು ಅತ್ಯಂತ ಸರಳ ಹಾಗು ಧಾರ್ಮಿಕ ಜೀವನ ಶೈಲಿ ಹೊಂದಿದ್ದರು. ಎಲ್ಲರನ್ನು ಸದಾ ಪ್ರೀತಿಯಿಂದ ನೋಡಿಕೊಳ್ಳುತಿದ್ದರು.

ಹೀಗಿರುವಾಗ ಒಂದು ದಿನ ಧರ್ಮ ದೇವತೆಗಳು ಮಾರು ವೇಷದಲ್ಲಿ, ಧರ್ಮ ಪಾಲಿಸುವ ಜಾಗಗಳನ್ನ ಹುಡುಕುತ್ತ ಬರುತ್ತಾರೆ. ಅವರ ಸಂಚಾರದ ಭಾಗವಾಗಿ ಕೊಡುಮಗೆ ಬರುತ್ತಾರೆ. ಅವರನ್ನು ನೋಡಿದ ಭೀರ್ಮಣ್ಣ ದಂಪತಿಗಳು ವಿನಯಪೂರ್ವಕ ಅತಿಥಿಸತ್ಕಾರಗಳನ್ನು ನೀಡುತಾರೆ. ಹಾಗು ಇವತ್ತು ಇಲ್ಲೇ ಉಳಿಯಲು ವಿನಂತಿಸಿಕೊಳ್ಳುತ್ತಾರೆ. ಭೀರ್ಮಣ್ಣ ದಂಪತಿಗಳ ಆತಿಥ್ಯದಿಂದ ಬಹಳ ಸಂತುಷ್ಟರಾದ ಧರ್ಮ ದೇವತೆಗಳು ಅಂದು ಉಳಿದುಕೊಳಲು ಒಪ್ಪುತ್ತಾರೆ. ಅಂದು ರಾತ್ರಿ ಭೀರ್ಮಣ್ಣನ ಕನಸಿನಲ್ಲಿ, ಮನೆಯಲಿದ್ದ ಅತಿಥಿಗಳು ಕಾಣಿಸಿಕೊಳ್ಳುತ್ತಾರೆ. ಆ ಅದ್ಭುತವಾದ ಕನಸಿನಲ್ಲಿ ಅವರು ಭೀರ್ಮಣ್ಣರಿಗೆ “ನಾವು ಸಾಮಾನ್ಯ ಮನುಷ್ಯರಲ್ಲ, ನಾವು ಧರ್ಮ ದೇವತೆಗಳು, ನಿಮ್ಮ ಸತ್ಕಾರಗಳಿಂದ ನಾವು ತುಂಬ ಸಂತೊಷವಾಗಿದ್ದೇವೆ. ಆದ ಕಾರಣ ನಾವು ಇಲ್ಲೇ ನೆಲಸಬೇಕೆಂದು ಇಚಿಸುತ್ತಿದ್ದೇವೆ. ನಮಗೆ ನಿನ್ನ ಮನೆ ” ನೆಲ್ಯಾಡಿ ಬೀಡು” ಬಿಟ್ಟುಕೊಡು. ನಿನ್ನ ವಾಸಕ್ಕೆ ಬೇರೆ ಮನೆ ಕಟ್ಟಿಕೊ” ಎಂದು ಹೇಳಿ ಮಾಯವಾದರು.

ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ ಅವರಿಗೆ ಆಶ್ಚರ್ಯವಾಗುತ್ತದೆ. ಅತಿಥಿಗಳು ಇದ್ದ ಕೋಣೆಯಲ್ಲಿ ಖಡ್ಗ ಮತ್ತು ಆಯುಧಗಳು ಮಾತ್ರ ಇದ್ದವು.ತಮ್ಮ ಮನೆಗೆ ಬಂದಿದ್ದು ಸಾಮಾನ್ಯ ಮನುಷ್ಯರು ಅಲ್ಲದೆ ದೇವತೆಗಳು ಎಂದು ತಿಳಿದು ಪುಳಕಿತರಾಗುತ್ತಾರೆ. ದೇವತೆಗಳ ಆದೇಶದಂತೆ ಭೀರ್ಮಣ್ಣ ದಂಪತಿಗಳು ಬೇರೆ ಮನೆ ಕಟ್ಟಿಕೊಳ್ಳುತ್ತಾರೆ. “ನೆಲ್ಯಾಡಿ ಬೀಡು” ನಲ್ಲಿ ದೇವತೆಗಳ ಖಡ್ಗ ಮತ್ತು ಆಯುಧಗಳನ್ನು ಇಟ್ಟು ಪೂಜಿಸತೊಡಗುತ್ತಾರೆ. ಇವತ್ತಿಗೂ ಪ್ರತಿ ದಿನ ಪೂಜೆ ಮಾಡಲಾಗುತ್ತಿದೆ.

ಇದಾದ ಸ್ವಲ್ಪ ಸಮಯದ ನಂತರ ಭೀರ್ಮಣ್ಣನ ಕನಸಿನಲ್ಲಿ ಧರ್ಮ ದೇವತೆಗಳು ಬಂದು ” ನಾವು ಶಕ್ತಿಶಾಲಿ ಧರ್ಮದೇವತೆಗಳಾಗಿದ್ದು, ನಮ್ಮ ನಾಮೋದಯಗಳು ಕಲಾರಕೈ, ಕಲರಾಹು, ಕುಮಾರಸ್ವಾಮಿ ಹಾಗು ಕನ್ಯಾಕುಮಾರಿ ಆಗಿರುತ್ತದೆ. ನೀನು ನಮಗೆ ಪ್ರತ್ಯೇಕ ಗುಡಿಗಳನ್ನು ಕಟ್ಟಿ “ಪರ್ವ-ನಡವಳಿ” ಪೂಜೆಯನ್ನು ಕಾಲ ಕಾಲಕ್ಕೆ ನೆರವೇರಿಸಬೇಕು. ಇದಕ್ಕಾಗಿ ನೀನು ಇಬ್ಬರು ಮಹಾನುಭಾವರನ್ನು ನೇಮಿಸಬೇಕು. ಅವರು ನಮ್ಮೋಡನೆ ಸಂದರ್ಶಿಸಿ ನಿನಗೆ ಆದೇಶಗಳನ್ನು ನೀಡುತ್ತಾರೆ. ನಿನ್ನ ಕಾರ್ಯಗಳಲ್ಲಿ ನೆರವಾಗಲು ನಾವು “ಅಣ್ಣಪ್ಪ ದೈವ” ರಿಗೆ ಆದೇಶಿಸುತ್ತೇವೆ. ಕಾಲ ಕಾಲಕ್ಕೆ ಪೂಜೆ ಪುರಸ್ಕಾರಗಳನ್ನು ತಪ್ಪದೇ ಪಾಲಿಸಬೇಕು. ನಿನ್ನ ದೈವ ಭಕ್ತಿ ಮೆಚ್ಚಿ ಈ ಮಹತ್ತರ ಕಾರ್ಯವನ್ನು ನಿನಗೆ ನೀಡುತಿದ್ದೇವೆ. ಇದರ ಫಲವಾಗಿ ನಾವು ನಿನ್ನ ಹಾಗು ನಿನ್ನ ಕುಟುಂಬವನ್ನು ಕಾಪಾಡುತ್ತೇವೆ. ಈ ಕ್ಷೇತ್ರ ಪ್ರಖ್ಯಾತವಾಗಿ ಧಾನ ಧರ್ಮಗಳು ಆಗುವಂತೆ ನೋಡಿಕೊಳ್ಳುತ್ತೇವೆ. ನೀನು ಯಾವುದೇ ಕಾರಣಕ್ಕೂ ಇಲ್ಲಿಗೆ ಬರುವ ಅತಿಥಿಗಳು ಹಾಗು ಭಕ್ತರಿಗೆ ಊಟ-ವಸತಿಗಳನ್ನು ಮರೆಯುವಂತಿಲ್ಲ. ಇದು ನಿನ್ನ ತಲ ತಲಾಂತರಗಳಿಗೂ ಅನ್ವಯಿಸುತ್ತದೆ. ನಿಮಗೆ ಶುಭವಾಗಲಿ” ಎಂದು ಮಾಯವಾಗುತ್ತಾರೆ.

ಮಾರನೇ ದಿನ ಭೀರ್ಮಣ್ಣ ತನ್ನ ಪತ್ನಿಗೆ ತಿಳಿಸುತ್ತಾರೆ. ನಂತರ ದೇವತೆಗಳ ಆದೇಶದಂತೆ ಆ ಸ್ಥಳದ ಎತ್ತರದ ಜಾಗ “ಬಡಿ ನಡೆ”ಗೆ ಬಂದು ಪ್ರತ್ಯೇಕ ಗುಡಿಗಳನ್ನು ಕಟ್ಟಲು ಪ್ರಾರಂಭಿಸುತ್ತಾರೆ. ಮುಂದೆ ನಾಲ್ಕು ಪ್ರತ್ಯೇಕ ಗುಡಿಗಳ ಜೊತೆ ಅಣ್ಣಪ್ಪ ದೈವರಿಗೂ ಗುಡಿ ಕಟ್ಟುತ್ತಾರೆ. ಪೂಜೆ ಮಾಡುವುದ್ದಕ್ಕಾಗಿ ಬ್ರಾಹ್ಮಣರನ್ನು ನೇಮಿಸುತ್ತಾರೆ.

ಪೂಜೆಗೆಂದು ನೇಮಿಸಿದ ಬ್ರಾಹ್ಮಣರು ದೈವಗಳ ಜೊತೆಯಲ್ಲಿ ದೇವತೆಗಳನ್ನು ಪೂಜಿಸುವಂತೆ ಭೀರ್ಮಣ್ಣರಿಗೆ ಸಲಹೆ ನೀಡುತ್ತಾರೆ. ಆಗ ಭೀರ್ಮಣ್ಣ ಪರ್ಗಡೆ ಚಿಂತೆಗೆ ಒಳಗಾಗುತ್ತಾರೆ. ಆಗ ಧರ್ಮ ದೇವತೆಗಳು ಅಣ್ಣಪ್ಪ ದೈವರಿಗೆ, ಮಂಗಳೂರಿನ ಕದ್ರಿಗೆ ಹೋಗಿ ಕಾಶಿ ಇಂದ ತಂದಿರುವ ಶಿವ ಲಿಂಗವನ್ನು ತಂದು ಪ್ರತಿಷ್ಟಾಪನೆ ಮಾಡುವಂತೆ ಆದೇಶಿಸುತ್ತಾರೆ.

ಇದರಿಂದ ಭೀರ್ಮಣ್ಣ ದಂಪತಿಗಳು ಸಂತೋಷಗೊಂಡು ಶಿವಲಿಂಗಕ್ಕೂ ಗುಡಿಯನ್ನು ಕಟ್ಟುತ್ತಾರೆ. ಹೀಗೆ ಕೊಡುಮದಲ್ಲಿ ಶ್ರೀ ಚಂದ್ರನಾಥ, ಶ್ರೀ ಮಂಜುನಾಥ, ನಾಲ್ಕು ಧರ್ಮ ದೈವಗಳು ಹಾಗು ಅಣ್ಣಪ್ಪ ದೈವರಿಗೆ ಪೂಜೆಗಳು ಸಲಿಸಲಾಗುತ್ತಿದೆ.

ಕಾಲ ಕ್ರಮೇಣ, ದೇವರಾಜ ಹೆಗಡೆ ಕಾಲದಲ್ಲಿ, ಉಡುಪಿಯ ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳು ಸುಬ್ರಮಣ್ಯಕ್ಕೆ ಹೋಗಿ ಹಿಂದಿರುಗುವಾಗ ಕೊಡುಮಗೆ ಭೇಟಿ ನೀಡುವಂತೆ ದೇವರಾಜ ಹೆಗಡೆ ವಿನಂತಿಸಿಕೊಳ್ಳುತ್ತಾರೆ. ಅತಿಥಿ ಸತ್ಕಾರಗಳನ್ನು ಸ್ವೀಕರಿಸಿದ ಶ್ರೀ ವಾದಿರಾಜ ಸ್ವಾಮಿಗಳು ಪ್ರಸಾದ ಸ್ವೀಕರಿಸಲು ನಿರಾಕರಿಸುತ್ತಾರೆ. ಕಾರಣ ಕೊಡುಮದಲ್ಲಿದ್ದ ಶಿವಲಿಂಗ ದೈವ ಪ್ರತಿಷ್ಟಾಪನೆ ಆಗಿರುವುದಾಗಿ ತಿಳಿಸುತ್ತಾರೆ. ಆಗ ದೇವರಾಜ ಹೆಗಡೆಯವರು ಶ್ರೀಗಳಿಗೆ ಪುನರ್ ಪ್ರತಿಷ್ಟಾಪಿಸುವಂತೆ ಕೇಳಿಕೊಳ್ಳುತ್ತಾರೆ.ಪುನರ್ ಪ್ರತಿಷ್ಟಾಪಿಸಿದ ಶ್ರೀ ವಾದಿರಾಜ ಸ್ವಾಮಿಗಳು “ಧರ್ಮ ಸ್ಥಳ” ಎಂದು ನಾಮಕರಣ ಮಾಡುತ್ತಾರೆ. ಹೀಗಾಗಿ ಕೊಡುಮ ಧರ್ಮಸ್ಥಳವಾಗಿ ಬದಲಾಯಿತು.

ಧರ್ಮಾಧಿಕಾರಿ ಶ್ರೀಗಳು

ಚಂಡಯ್ಯ ಹೆಗ್ಗಡೆ

ಚಂಡಯ್ಯ ಹೆಗ್ಗಡೆ

2

ಮಂಜಯ್ಯ ಹೆಗ್ಗಡೆ

ರತ್ನವರ್ಮ ಹೆಗ್ಗಡೆ

ರತ್ನವರ್ಮ ಹೆಗ್ಗಡೆ

ವೀರೇಂದ್ರ ಹೆಗ್ಗಡೆ

ವೀರೇಂದ್ರ ಹೆಗ್ಗಡೆ

 

 

 

 

 

 

 

 

 

 

 

 

 

 

 

ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಹೆಗ್ಗಡೆ ಕುಟುಂಬವು ಅಚುಕಟ್ಟಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಧರ್ಮಾಧಿಕಾರಿಗಳು ಶ್ರೀ ಮಂಜುನಾಥನ ಅವತಾರವೆಂದೇ ಹೇಳಲಾಗುತ್ತದೆ.

ಧರ್ಮಾಧಿಕಾರಿ ಹೆಗ್ಗಡೆ ಕುಟುಂಬವು ಗೃಹಸ್ಥರಾಗಿದ್ದು, ಬಹು ಧರ್ಮ ಪಾಲನೆ ಮಾಡುವುದು ಒಂದು ವಿಶೇಷತೆ. ಬೇರೆ ಯಾವ ಧಾರ್ಮಿಕ ಕೇಂದ್ರಗಳಲೂ ಇದು ಕಾಣಸಿಗುವುದಿಲ್ಲ.

ಧರ್ಮ ದೈವಗಳ ಹಾಗು ಶ್ರೀ ಮಂಜುನಾಥನ ಆದೇಶಗಳನ್ನು ಅನುಸರಿಸಿ ಶ್ರೀ ಸಾಮಾನ್ಯರ ತಕರಾರುಗಳಿಗೆ ನ್ಯಾಯ ಒದಗಿಸುತ್ತಾರೆ.ಇವರುಗಳು ಕೊಟ್ಟ ನ್ಯಾಯವನ್ನು ಹಲವು ಬಾರಿ ಕೋರ್ಟ್ ಪುರಸ್ಕರಿಸಿರುವುದೂ ಇದೆ.

ಇಂತಹ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ಹಲವು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆಯ ಭಾಗವಾಗಿ ನಾಲ್ಕು ಧಾನಗಳನ್ನು ತಪ್ಪದೇ ನಡೆಸಿಕೊಂಡು ಬರುತಿದ್ದಾರೆ. ಆ ನಾಲ್ಕು ಧಾನಗಳು ಇಂತಿವೆ…

1.ಅನ್ನ ಧಾನ
2.ಔಷಧ ಧಾನ
3.ವಿದ್ಯಾ ಧಾನ
4.ಅಭಯ ಧಾನ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top