fbpx
ಸಿನಿಮಾ

ಅಪ್ಪ -ಅಮ್ಮ ಮಾಡಿದ ಹಣದ ಕಗ್ಗಂಟು ,ಮನೆ ಬಿಟ್ಟೋದ ತಂಗಿ ,ಎಲ್ಲರ ಮುಂದೆ ಹೊಡೆದ ಅತ್ತೆ ಶ್ರೀದೇವಿ ಬದುಕಿನ ದುರಂತ ಬಿಚ್ಚಿಟ್ಟ ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಅಭಿಮಾನಿಗಳಿಗೆ ರಾಮ್ ಗೋಪಾಲ್ ವರ್ಮಾ ಬರೆದ ಪ್ರೇಮದ ಪತ್ರ

 

 

ನಿಮಗೆಲ್ಲರಿಗೂ ಗೊತ್ತೇ ಇದೆ ಆಕೆ ಅತಿ ಸುಂದರಿ ದಕ್ಷಿಣ ಚಿತ್ರರಂಗ ವಲ್ಲದೆ ಉತ್ತರ ಭಾರತದ ಚಿತ್ರರಂಗ ಬಾಲಿವುಡ್ನ ಇಪ್ಪತ್ತು ವರ್ಷಗಳ ಕಾಲ ಆಳಿದವರು ಆಕೆ .

ಶ್ರೀದೇವಿಯವರ ಸಾವು ಎಷ್ಟು ಘೋರ ಹಾಗೆ ಊಹಿಸಲಸಾಧ್ಯವಾದ ಎಷ್ಟೋ ವಿಷಯಗಳನ್ನು ನಮಗೆ ಸಾವು ಹಾಗೂ ಬದುಕಿನ ಮಧ್ಯೆ ಕಲ್ಪಿಸಿಕೊಡುತ್ತದೆ ಆಕೆಯ ಸಾವಿನ ಶಾಕ್ನಿಂದ ಇನ್ನೂ ಅನೇಕರು ಹೊರಬರಲಿಲ್ಲ .

ನನ್ನ ಎರಡು ಚಿತ್ರಗಳಾದ ಕ್ಷಣಂ ಕ್ಷಣಂ ಹಾಗೂ ಗೋವಿಂದ ಗೋವಿಂದ ದಲ್ಲಿ ಶ್ರೀದೇವಿ ನಟಿಸಿದ್ದರು ಆಕೆಯನ್ನು ನಾನು ಬಹಳ ಹತ್ತಿರದಿಂದ ಬಲ್ಲೆ ಶ್ರೀದೇವಿಯ ಕಥೆ ಕೂಡ ಇತರ ಸೆಲೆಬ್ರಿಟಿಗಳ ಕತೆಗಳಿಗಿಂತ ಭಿನ್ನವೇನಿಲ್ಲ .

 

ಇಷ್ಟು ಜನ ಅಂದುಕೊಂಡಿರಬಹುದು ಶ್ರೀದೇವಿ ಒಂದು ಪರಿಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ ಎಂದು ಆಕೆಯ ಸುಂದರ ಮುಖ’ ಬುದ್ಧಿಮಟ್ಟ ಎಲ್ಲವನ್ನೂ ಕಂಡವರು ಹಾಗೆ ಅಂದುಕೊಳ್ಳುತ್ತಾರೆ , ಶ್ರೀದೇವಿಯು ಮಧ್ಯಮ ವರ್ಗದ ಇಬ್ಬರು ಹೆಣ್ಣು ಮಕ್ಕಳಿರುವ ಒಂದು ಸುಂದರ ಕುಟುಂಬ ಹೊರಗಿಂದ ನೋಡಿದವರಿಗೆ ಅವರದ್ದೊಂದು ಸಂತೋಷದ ಕುಟುಂಬ .

ಶ್ರೀದೇವಿಯ ತಂದೆ ಬದುಕಿರುವವರೆಗೂ ಆಕೆಯದ್ದು ಆಕಾಶದಲ್ಲಿ ಹಾರುವ ಸ್ವಚ್ಛಂದ ಬದುಕು ಆದರೆ ತಂದೆ ಸತ್ತ ಮೇಲೆ ಅವರ ತಾಯಿಯಿಂದ ಎಲ್ಲವೂ ಹಾಳಾಗಿತ್ತು .

 

ಶ್ರೀದೇವಿ ತಾಯಿ ತಂದೆ ಮಾಡಿದ್ದ ಆರ್ಥಿಕ ವ್ಯವಹಾರ ಕಗ್ಗಂಟಾದಾಗ

 

 

ಆಗಿನ ಕಾಲದಲ್ಲಿ ನಟ ನಟಿಯರಿಗೆ ನಿರ್ಮಾಪಕರು ಕಪ್ಪು ಹಣವನ್ನು ನೀಡುತ್ತಿದ್ದರು ಟ್ಯಾಕ್ಸ್ ರೈಡ್  ಮುಂತಾದ ಕಾನೂನು ಬಾಹಿರ ಚಟುವಟಿಕೆ ಯಾಗಬಹುದು ಎಂಬ ಉದ್ದೇಶದಿಂದ ಶ್ರೀದೇವಿ ಅವರ ತಂದೆ ಆ ಹಣವನ್ನು ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಕೊಟ್ಟು ಇರಿಸಿದ್ದರು ಆದರೆ ಶ್ರೀದೇವಿ ಅವರ ತಂದೆ ತೀರಿಕೊಂಡ ಮೇಲೆ ಆ ಹಣವನ್ನು ಯಾರು ಶ್ರೀದೇವಿ ಅವರ ಕುಟುಂಬಕ್ಕೆ ಹಿಂದಿರುಗಿಸುವ ಮನಸ್ಸು ಮಾಡಲಿಲ್ಲ , ಶ್ರೀದೇವಿ ಅವರ ತಾಯಿ ಕೂಡ ಅನೇಕ ಆರ್ಥಿಕ ಹೂಡಿಕೆಗಳನ್ನು ಮಾಡಿದ್ದರು ಅಷ್ಟೇ ಅಲ್ಲದೆ ಅನೇಕ ದಾವೆ ಇರುವ ಸೈಟುಗಳು ಹಾಗೂ ಜಮೀನಿನ ಮೇಲೆ ತಮ್ಮ ಹಣವನ್ನು ಹೂಡಿಕೆ ಮಾಡಿದರು .

ಈ ಸಮಯದಲ್ಲಿ ಆರ್ಥಿಕವಾಗಿ ಕಂಗಾಲಾಗಿದ್ದ ಶ್ರೀದೇವಿ ಅವರ ಸನಿಹಕ್ಕೆ ಬಂದವರು ಬೋನಿ ಕಪೂರ್ ಆಗಿನ ಕಾಲದಲ್ಲಿ ಬೋನಿ ಕಪೂರ್ ಕೂಡ ಬಹಳಷ್ಟು ಸಾಲ ಮಾಡಿ ದಿವಾಳಿಯಾಗಿದ್ದರೂ ಆದರೆ ಶ್ರೀದೇವಿಯವರಿಗೆ ಭಾವನಾತ್ಮಕವಾಗಿ ಹತ್ತಿರ ಆದವರು ಬೋನಿ ಕಪೂರ್ .

ಪಕ್ಕದ ಮನೆ ಹುಡುಗನ ಜೊತೆ ಓಡಿ ಹೋದ ತಂಗಿ ,ಕೇಸ್ ಹಾಕಿದಾಗ

 

 

ಅಮೆರಿಕದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರೀದೇವಿ ಅವರ ತಾಯಿ ಮಾನಸಿಕವಾಗಿ ಅಸ್ವಸ್ಥೆಯಾಗಿದ್ದರು ಹಾಗೆಯೇ ಶ್ರೀದೇವಿ ಅವರ ತಂಗಿ ಶ್ರೀಲತಾ ಕೂಡ ಪಕ್ಕದ ಮನೆಯ ಹುಡುಗನ ಜೊತೆ ಓಡಿ ಹೋಗಿ ಮದುವೆ ಆಗಿದ್ದರು , ಶ್ರೀದೇವಿ ಅವರ ತಾಯಿ ಸಾಯುವ ಮುನ್ನ ಅವರ ಆಸ್ತಿಯನ್ನು ಶ್ರೀದೇವಿಯವರ ಹೆಸರಿಗೆ ಬರೆದು ಸತ್ತಿದ್ದರು ಈ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿದ ಶ್ರೀದೇವಿ ತಂಗಿ ಶ್ರೀಲತಾ ತಮ್ಮ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದು ಈ ವಿಲ್ ಸಹ ಅದೇ ಕಾರಣದಿಂದ ಮಾಡಿದ್ದಾರೆ ಎಂದು ದಾವೆ ಹೂಡಿದರು .

ಬೋನಿ ಕಪೂರ್ ಅವರನ್ನು ಮದುವೆಯಾಗಲು ನಿರ್ಧಾರ ಮಾಡಿದ್ದರು

 

ಆಗಲೇ ತಮ್ಮ ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಶ್ರೀದೇವಿ ಜೀವನದಲ್ಲಿ ಸಾಕಷ್ಟು ಪಡಬಾರದ ಕಷ್ಟಗಳನ್ನು ಪಟ್ಟಿದ್ದರು ಈ ಸಮಯದಲ್ಲಿ ತಮಗೆ ಹತ್ತಿರವಾದ ಬೋನಿಕಪೂರ್ ಅವರನ್ನು ಮದುವೆಯಾಗಲು ನಿರ್ಧಾರ ಮಾಡಿದ್ದರೂ ಶ್ರೀದೇವಿ .

 

ಬೋನಿ ಕಪೂರ್ ಅವರ ತಾಯಿ ಧೋನಿಯವರ ಮೊದಲ ಹೆಂಡತಿ ಮೋನಾ ಕಪೂರ್ ಅವರಿಗೆ ಶ್ರೀದೇವಿಯಿಂದ ಆದ ಅನ್ಯಾಯದ ಬಗ್ಗೆ ಬಹಳ ಬೇಸರವಾಗಿತ್ತು ಒಂದು ದಿನ ಸ್ಟಾರ್ ಹೋಟೆಲ್ ಒಂದರ ಲಾಬಿ ಹತ್ತಿರ ಬಂದು ಮನೆಮುರುಕಿ ಎಂದು ಜೋರಾಗಿ ಅರಚುತ್ತಾ  ಶ್ರೀದೇವಿಯನ್ನು ಕಂಡವರೇ ಕೋಪದಿಂದ  ಹೊಟ್ಟೆಗೆ ಗುದ್ದು ಬಿಟ್ಟಿದ್ದರು .

ಆಕೆ ತನ್ನ ಇಷ್ಟಕ್ಕೆ ಬದುಕಲಿಲ್ಲ

ಈ ಗ್ಲಾಮರ್ ಪ್ರಪಂಚದಲ್ಲಿ ಆಕೆ ಬಾಲ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಅಲ್ಲಿಂದ ಆಕೆ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದರು ಆಕೆ ಬೆಳೆಯುತ್ತಾ ಬೆಳೆಯುತ್ತಾ ಒಳ್ಳೆಯ ಕಲಾವಿದೆ ಆಗಿ ಗುರುತಿಸಿಕೊಂಡರು ಆದರೆ ಆಕೆ ಯಾವತ್ತೂ ಖುಷಿ ಆಗಿರಲಿಲ್ಲ ಆಕೆ ಜನಪ್ರಿಯತೆ ಗಳಿಸಿದಂತೆ ಆಕೆ ತನ್ನಷ್ಟಕ್ಕೆ ತಾನು ಬದುಕಲಿಲ್ಲ ಆಕೆಯ ಇತರರಿಗಾಗಿ   ಬದುಕುವುದನ್ನು ಕಲಿಯುತ್ತಿದ್ದಳು .

ವಯಸ್ಸಾದಂತೆ ಎಲ್ಲಾ ಹೀರೋಯಿನ್ ಗಳಿಗೂ ಮುಖದ ಮೇಲೆ ನೆರಿಗೆಗಳು ಸಾಮಾನ್ಯ ಆದರೆ ಆ ನೆರಿಗೆಗಳನ್ನು ಹಾಗೂ ಮುಖದ ಮೇಲೆ ಯಾವುದೇ ಕಲೆಗಳಾಗದಂತೆ ತಪ್ಪಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ ಚಿಕ್ಕವರಿಂದಲೂ ಆಕೆಯನ್ನು ಜನಪ್ರಿಯ  ಹೀರೋಯಿನ್ ಆಗಿ ಜನರು ನೋಡಿಕೊಂಡು ಬಂದಿದ್ದರು ಅದನ್ನು ಆಕೆ ಹಾಗೆಯೇ ಇರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಳು .

ಆಕೆ ತನ್ನ ಮುಖವನ್ನು ಸುಂದರವಾಗಿರಿಸಿಕೊಳ್ಳಲು ಎಷ್ಟು ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸುತ್ತಿದ್ದಳು ಎಂದು ಆಕೆಯ ಮುಖವನ್ನು ನೋಡಿದವರು ಯಾರಿಗಾದರೂ ತಿಳಿಯುತ್ತದೆ

ಆಕೆ ಕ್ಯಾಮೆರಾ ಮುಂದೆ ಮಾತ್ರ ಮೇಕಪ್ ಹಾಕಿಕೊಳ್ಳುತ್ತಿರಲಿಲ್ಲ ತನ್ನ ಮನಸ್ಸಿಗೂ ಆಕೆ ಮೇಕಪ್ ಹಾಕಿಕೊಂಡಿದ್ದಳು ತನ್ನ ನಿಜವಾದ ಭಾವನೆಗಳನ್ನು ಆಕೆ ಎಲ್ಲಿಯೂ ವ್ಯಕ್ತಪಡಿಸಿರಲಿಲ್ಲ ಆಕೆ ತನ್ನ ಭಾವನಾತ್ಮಕ ಜಗತ್ತನ್ನು ಎಲ್ಲರಿಂದ ಮುಚ್ಚಿಡಲು ಪ್ರಯತ್ನ ಪಡುತ್ತಿದ್ದಳು .

ಆಕೆ ತನಗೆ ಇಷ್ಟ ಬಂದಂತೆ ಇಂದಿಗೂ ಜೀವಿ ಸಲಿಲ್ಲ ಮೊದಲು ಅವರ ತಂದೆ ತಾಯಿ ಹೇಳಿದಂತೆ ಅವರ ಸಂಬಂಧಿಗಳು ಹೇಳಿದಂತೆ ಆ ನಂತರ ಆಕೆಯ ಗಂಡ ಹೇಳಿದಂತೆ ಸ್ವಲ್ಪ ಮಟ್ಟಿಗೆ ಅವರು ಮಕ್ಕಳು ಬಯಸಿದಂತೆ ಬದುಕುತ್ತಿದ್ದರು ಆಕೆ ತನ್ನಷ್ಟು ತಾನಾಗಿ ಇದ್ದರೆ ತನ್ನ ಮಕ್ಕಳು ಎಲ್ಲಿ ಇಷ್ಟಪಡುವುದಿಲ್ಲವೊ ಎನ್ನುವ ಚಿಂತೆ ಅವರನ್ನು ಕಾಡದೆ ಇರುವುದಿಲ್ಲ , ಇದನ್ನು ನಾವು ಅನೇಕ ಸ್ಟಾರ್ ಮಕ್ಕಳಲ್ಲಿ ಕಾಣಬಹುದು .

 

ಆಕೆಯ ಸಾವಿನ ಬಗೆಗಿನ ಊಹಾಪೋಹಗಳನ್ನು ಬದಿಗಿಡೋಣ ನಾನು ಯಾರಿಗೂ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದಿಲ್ಲ ಆದರೆ ಈಕೆಗೆ ಈಗ ನಿಜವಾದ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ .

ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ಆಕೆ ತನ್ನಷ್ಟಕ್ಕೆ ತಾನು ಬದುಕಿದ್ದಳು ಯಾವಾಗೆಂದರೆ ಆಕ್ಷನ್ ಹಾಗೂ ಕಟ್ಗಳ ನಡುವೆ ಅದು ಕ್ಯಾಮೆರಾ ಮುಂದೆ , ಶ್ರೀದೇವಿ ನೀನೀಗ ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡಬಹುದು .

ನನಗೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ ಆದರೆ ಮತ್ತೊಮ್ಮೆ ನೀನು ಹುಟ್ಟಿ ಬರಬೇಕು ನಿಮ್ಮ ಅಭಿಮಾನಿಗಳಾಗಿ ನಿಮ್ಮನ್ನು ನೋಡುವ ಯೋಗ್ಯತೆ ನಮಗೆ ಬರಬೇಕು ಎಂದು ನಾನು ಆಶಿಸುತ್ತೇನೆ .

ಇಂತಿ

ರಾಮ್ ಗೋಪಾಲ್ ವರ್ಮಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top