ದುಬೈನಲ್ಲಿ ಮೃತಪಟ್ಟಿರುವ ಬಹುಭಾಷಾ ನಟಿ ಶ್ರೀದೇವಿ ಇಡೀ ದೇಶವನ್ನೇ ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದು ಅವರ ಸಾವಿನ ಸುತ್ತ ಅನೇಕ ಅನುಮಾನಗಳ ಹುತ್ತ ಕಟ್ಟುಕೊಳ್ಳುತ್ತಿವೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಶ್ರೀದೇವಿಯವರು ಅವರಿದ್ದ ಹೋಟೆಲಿನ ಬಾತ್ ರೂಮಿನ ನೀರಿನಿಂದ ತುಂಬಿದ್ದ ಬಾತ್ ಟಬ್’ನಲ್ಲಿ ಅಕಸ್ಮಾತಾಗಿ ಬಿದ್ದು, ಮುಳುಗಿ ಪ್ರಾಣಬಿಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿ ನಟಿ ಶ್ರೀದೇವಿಯವರ ಸಾವಿನ ಬಗ್ಗೆ ಬಾರಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಈ ಮದ್ಯೆ ಶ್ರೀದೇವಿಯವರ ಬದುಕಿನ ಕುರಿತು ಆಕೆಯ ಅಭಿಮಾನಿಗಳಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಹಿರಂಗ ಪತ್ರವನ್ನು ಬರೆದು ಅದನ್ನು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಶ್ರೀದೇವಿಯವರ ಬದುಕಿನ ಕಹಿ ಸತ್ಯಗಳನ್ನ ಅನಾವರಣಗೊಳಿಸಿದ್ದಾರೆ. ತೆರೆಯ ಮೇಲೆ ಶ್ರೀದೇವಿ ಎಷ್ಟು ಸಂತೋಷವಾಗಿ, ಖುಷಿಯಾಗಿದ್ದಂತೆ ಕಾಣುತ್ತಿದ್ದರೊ ನಿಜ ಜೀವನದಲ್ಲಿ ಅದಕ್ಕೆ ವ್ಯತಿರಿಕ್ತವಾಗಿದ್ದರು. ಅವರೊಬ್ಬ ಅಸಂತುಷ್ಟ ಮಹಿಳೆಯಾಗಿದ್ದರು. ಎನ್ನುವ ರಾಮ್ ಗೋಪಾಲ್ ವರ್ಮಾ ಅವರ ಪತ್ರದ ಟಿಪ್ಪಣಿ ಈ ಕೆಳಗಿನಂತಿದೆ.
ದೇಶಾದ್ಯಂತ ಇರುವ ಅಸಂಖ್ಯಾತ ಅಭಿಮಾನಿಗಳಿಗೆ ಕಾಣುವ ಶ್ರೀದೇವಿಯ ಸಂಪೂರ್ಣ ಜೀವನ, ಸುಂದರವಾದ ಮುಖ, ಪ್ರತಿಭಾನ್ವಿತೆ, ಇಬ್ಬರು ಸುಂದರ ಪುತ್ರಿಯರೊಂದಿಗೆ ಸುಂದರ ಸಂಸಾರ. ಆದರೆ ಅವರು ನಿಜವಾಗಿಯೂ ಸುಂದರ ಜೀವನ ನಡೆಸುತ್ತಿದ್ದರೇ? ನನ್ನ ಕ್ಷಣ ಕ್ಷಣ ಚಿತ್ರಕ್ಕೆಂದು ಶ್ರೀದೇವಿಯನ್ನು ಭೇಟಿಯಾದ ದಿನದಿಂದ ಆಕೆಯನ್ನು ನಾನು ಬಹಳ ಚನ್ನಾಗಿ ಬಲ್ಲೆ, ಆಕೆಯ ತಂದೆ ಸಾಯುವವರೆಗೆ ಆಕಾಶದಲ್ಲಿ ಹಾರುವ ಹಕ್ಕಿಯಂತಿದ್ದ ಶ್ರೀದೇವಿಯ ಬದುಕು ತಂದೆಯ ಮರಣನಂತರ ತಾಯಿಯ ಅತಿಯಾದ ಕಾಳಜಿಯಿಂದ ಪಂಜರದ ಹಕ್ಕಿಯಂತಾಯಿತು.
ಆ ಸಮಯದಲ್ಲಿ ಸಿನಿಮಾ ನಟ, ನಟಿಯರಿಗೆ ಕಪ್ಪು ಹಣ ದೊಡ್ಡ ಮಟ್ಟದಲ್ಲಿ ದೊರಕುತಿತ್ತು, ಆದಾಯ ತೆರಿಗೆ ಅಧಿಕಾರಿಗಳ ದಾಳಿಯನ್ನು ತಪ್ಪಿಸಿಕೊಳ್ಳಲು ತಮ್ಮ ಕುಟುಂಬ ಸದಸ್ಯರು ಅಥವಾ ತಮ್ಮ ಆತ್ಮೀಯ ಸ್ನೇಹಿತರ ಹೆಸರಿನಲ್ಲಿ ನಟ ನಟಿಯರು ಹಣ ಹೂಡಿಕೆ ಮಾಡುತ್ತಿದ್ದರು., ಶ್ರೀದೇವಿ ಕೂಡ ತಮ್ಮ ಬಳಿ ಇದ್ದ ಹಣವನ್ನು ಹೀಗೆಯೇ ಮಾಡಿದ್ದರು. ಆದರೆ ಆಕೆಯ ತಂದೆ ತೀರಿಕೊಂಡಾಗ ಅವರೆಲ್ಲರೂ ಶ್ರೀದೇವಿಗೆ ಮೋಸ ಮಾಡಿಬಿಟ್ಟರು.
ಶ್ರೀದೇವಿಯ ತಾಯಿ ಕೂಡ ಸಾಕಷ್ಟು ಅಕ್ರಮ ಆಸ್ತಿಗಳಲ್ಲಿ ಹಣ ಹೂಡಿಕೆ ಮಾಡಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ನಂತರ ತಾಯಿ ತೀರಿಕೊಂಡಾಗ ಆಕೆಯ ಸೋದರಿ ಶ್ರೀಲತಾ ಪಕ್ಕದಮನೆಯ ಹುಡುಗನ ಜೊತೆ ಓಡಿಹೋಗಿ ಮದುವೆಯಾದಳು. ಶ್ರೀದೇವಿಯ ತಾಯಿ ತೀರಿಕೊಳ್ಳುವುದಕ್ಕೆ ಮುಂಚೆಯೇ ಶ್ರೀಎದೇವಿಯ ಹಣದಲ್ಲಿ ಮಾಡಿದ್ದ ಆಸ್ತಿಯನ್ನೆಲ್ಲಾ ಆಕೆಯ ಹೆಸರಿಗೆ ಬರೆದಿದ್ದರು. ಆದರೆ ಸೋದರಿ ಶ್ರೀಲತಾ ಆಸ್ತಿಯಲ್ಲಿ ತನಗೆ ಕೂಡ ಪಾಲು ಬರಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಳು. ತಾಯಿಗೆ ಸಾವಿನ ಕೊನೆ ಘಳಿಗೆಯಲ್ಲಿ ಮೆದುಳು ಚಾಸ್ತ್ರಚಿಕಿತ್ಸೆಯಾಗಿತ್ತು ಹಾಗಾಗಿ ವಿಲ್’ನಲ್ಲಿ ನನ್ನ ಹೆಸರು ಬಿಟ್ಟುಹೋಗಿದೆ ಎಂದು ಶ್ರೀಲತಾ ದಾವೆ ಹೂಡಿದ್ದಳು. ಈ ಸಂದರ್ಭದಲ್ಲಿ ದಿಕ್ಕೆಟ್ಟವರಂತೆ ನಿರ್ಗತಿಕರಾಗಿದ್ದ ಶ್ರೀದೇವಿಗೆ ಆಸರೆಯಂತೆ ಕಂಡುಬಂದಿದ್ದು ಬೋನಿ ಕಪೂರ್. ಅಷ್ಟೋತ್ತಿಗಾಗಲೇ ಬೋನಿ ಕಪೂರ್ ತಲೆ ಮೇಲೂ ಕೂಡ ಸಾಲದ ಕತ್ತಿ ತೂಗುತ್ತಿತ್ತು..
ಶ್ರೀದೇವಿಯ ಜೀವನ ಆಕೆ ನಟಿಸಿದ್ದ ಇಂಗ್ಲಿಷ್-ವಿಂಗ್ಲಿಷ್ ಸಿನಿಮಾಕ್ಕೆ ಹೋಲಿಕೆಯಾಗುತ್ತದೆ., ಬಹಳ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದಿದ್ದ ಶ್ರೀದೇವಿಗೆ ಎಲ್ಲರಂತೆ ಸಾಮಾನ್ಯ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಲಿಲ್ಲ. ಹೊರ ಜಗತ್ತಿನಲ್ಲಿ ಆಕೆಯ ಅಸಂಖ್ಯಾತ ಅಭಿಮಾನಿಗಳಿಗೆ ಆಕೆ ಸೌಂದರ್ಯವತಿಯಾಗಿರಬುಹು, ಆದರೆ ಅಂತರಂಗದಲ್ಲಿ ಆಕೆ ಎಂದೂ ತಾನು ಸೌಂದರ್ಯವತಿ ಎಂದು ಭಾವಿಸಿದ್ದಳೇ?
ಯಾವಾಗಲೂ ಶ್ರೀದೇವಿ ನಾಚಿಕೆ ಸ್ವಭಾವದ, ಮತ್ತು ಕಡಿಮೆ ವಿಶ್ವಾಸವಿರುವ ಒಬ್ಬ ಅಸುರಕ್ಷಿತ ಹುಡುಗಿಯಾಗಿ ಕಾಣುತ್ತಿದ್ದಳು. ತನ್ನ ಮಾನಸಿಕ ಸಮಸ್ಯೆಗಳ ಬಗ್ಗೆ ಯಾರಾದರೂ ಏನಾದರು ಅಂದುಕೊಳ್ಳುತ್ತಾರೋ ಎಂಬ ಭೀತಿ ಆಕೆಗಿತ್ತು. ಇದೇ ಕಾರಣಕ್ಕಾಗಿ ತನ್ನ ಸುತ್ತ ಬೇಲಿಯನ್ನು ನಿರ್ಮಿಸಿಕೊಂಡಿದ್ದರು. ಇದಕ್ಕೆ ತಾನು ತಪ್ಪು ಮಾಡಿದ್ದೇನೆ ಎಂಬ ಆಕೆಯ ಭಯ ಕಾರಣವಲ್ಲ. ಬಹಳ ಸಣ್ಣ ವಯಸ್ಸಿನಿಂದಲೇ ಖ್ಯಾತಿ ಗಳಿಸಿದ್ದರಿಂದ ತನ್ನ ಮನಸ್ಸಿನೊಳಗಿನ ಸಂಘರ್ಷಗಳನ್ನು ಹೊರ ಜಗತ್ತಿಗೆ ತೋರಿಸಲು ಬಯಸುತ್ತಿರಲಿಲ್ಲ. ಎಲ್ಲರಂತೆ ಸ್ವತಂತ್ರವಾಗಿ ಬದುಕಲು ಆಕೆಗೆ ಸಾಧ್ಯವಾಗಲೇ ಇಲ್ಲ,. ತನ್ನ ಮುಪ್ಪನ್ನು ಮರೆಮಾಚಲು ಆಕೆ ಚೆನ್ನಾಗಿ ಮೇಕಪ್ ಮಾಡಿಕೊಳ್ಳುತ್ತಿದ್ದರು. ಕ್ಯಾಮರಾ ಮುಂದೆ ಮಾತ್ರವಲ್ಲದೆ ಹಿಂದೆ ಕೂಡ ತನ್ನ ಮನಸ್ಸಿಗೆ ಮುಪ್ಪು ಆವರಿಸುತ್ತದೆ ಎಂಬ ಕೆಟ್ಟ ಕನಸಿನ ಮೇಕಪ್ ಅನ್ನು ಹಾಕಿಕೊಂಡಿದ್ದರು.
ಸಿನಿಮಾರಂಗದಲ್ಲಿ ತನ್ನ ಹೆಣ್ಣುಮಕ್ಕಳಾದ ಜಾಹ್ನವಿ ಮತ್ತು ಖುಷಿಯನ್ನು ಜನರು ಸ್ವೀಕರಿಸುವರೇ ಎಂಬ ಭಯ ಆಕೆಯನ್ನು ಅತಿಯಾಗಿ ಕಾಡತೊಡಗಿತ್ತು. ಆಕೆಯ ಕಣ್ಣುಗಳಲ್ಲಿ ಇದರ ನೋವು ಕಾಣಿಸುತ್ತಿತ್ತು, ನಿಜ ಹೇಳಬೇಕೆಂದರೆ ಅವಳು ಮಹಿಳೆಯ ದೇಹದಲ್ಲಿ ಸಿಕ್ಕಿಬಿದ್ದ ಮಗುವಾಗಿದ್ದಳು… ಆಕೆ ನಿಷ್ಕಳಂಕ ಮತ್ತು ನಿಷ್ಕಪಟ ಆದರೆ ಅವಳ ಬದುಕಿನ ಕಹಿ ಅನುಭವಗಳು ಈ ರೀತಿಯ ಮನೋಭಾವಗಳನ್ನು ಹೊಂದುವಂತೆ ಮಾಡಿಬಿಟ್ಟಿದ್ದವು.
ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ರೀದೇವಿಯವರು ಅವರಿದ್ದ ಹೋಟೆಲಿನ ಬಾತ್ ರೂಮಿನ ನೀರಿನಿಂದ ತುಂಬಿದ್ದ ಬಾತ್ ಟಬ್’ನಲ್ಲಿ ಅಕಸ್ಮಾತಾಗಿ ಬಿದ್ದು, ಮುಳುಗಿ ಪ್ರಾಣಬಿಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಆದರೆ ಆಕೆ ತೆಗೆದುಕೊಳ್ಳುತ್ತಿದ್ದ ಔಷಧಗಳು ಆಕೆಯ ಸಾವಿನ ಮೇಲೆ ಭಾರೀ ಪ್ರಭಾವಬೀರಿರಬಹುದು.. ದೊಡ್ಡ ದೊಡ್ಡ ಮದುವೆಗಳು, ಪಾರ್ಟಿಗಳು ನಡೆದ ನಂತರ ಈ ರೀತಿ ಹಲವು ಆತ್ಮಹತ್ಯೆಗಳು ಮತ್ತು ಆಕಸ್ಮಿಕ ಸಾವುಗಳು ಸಂಭವಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಇವೆ.
ಹೆಚ್ಚು ಖಿನ್ನತೆಯ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಜಗತ್ತು ಯಾಕಿಷ್ಟು ಸುಂದರವಾಗಿದೆ, ಖುಷಿಪಡುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ತಮ್ಮ ಸುತ್ತಮುತ್ತ ಎಲ್ಲಾ ಸೌಲಭ್ಯಗಳು ಇದ್ದರೂ ಸಂತೋಷದಿಂದ ಇರಲು ಸಾಧ್ಯವಾಗುವುದಿಲ್ಲ ಹಾಗಾಗಿ ಅಂಥವರು ತೀವ್ರ ಬೇಸರದ ಸ್ಥಿತಿಗೆ ಜಾರುತ್ತಾರೆ..
ಹೆಚ್ಚು ಖಿನ್ನತೆ ಹೊಂದಿರುವ ವ್ಯಕ್ತಿಗಳಲ್ಲಿ ಕೆಲವರು ತಮ್ಮ ಖಿನ್ನತೆಯನ್ನು ನಿಯಂತ್ರಿಸಲು ಕೆಲವು ಆರಗ್ಯಕ್ಕೆ ಮಾರಕವಾಗುವಂತಹ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.ಇದು ಒಂ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ.. ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪುತ್ತಾರೆ..
ಶ್ರೀದೇವಿ ಸಾವಿನ ಬಗ್ಗೆ ಹುಟ್ಟಿಕೊಂಡಿರುವ ಅನುಮಾನದ ಊಹಾಪೋಹಗಳನ್ನು ಪಕ್ಕಕ್ಕಿಟ್ಟು ಆಕೆಯ ಜೀವನದ ಬಗ್ಗೆ ಪುನಃ ಹೇಳುವುದಾದರೆ ಸಾಮಾನ್ಯವಾಗಿ ಬೇರೆ ಯಾರೇ ಸತ್ತಾಗಲೂ ನಾನು ರೆಸ್ಟ್ ಇನ್ ಪೀಸ್(ಆತ್ಮಕ್ಕೆ ಶಾಂತಿ ಸಿಗಲಿ) ಎಂದು ಹೇಳುವುದಿಲ್ಲ, ಆದರೆ ಶ್ರೀದೇವಿ ವಿಚಾರದಲ್ಲಿ ಹಾಗೆ ಹೇಳಲು ಬಯಸುತ್ತೇನೆ ಏಕೆಂದರೆ ಆಕೆ ತಮ್ಮ ಜೀವನದಲ್ಲಿ ಕ್ಯಾಮರಾ ಮುಂದೆ ಹೊರತು ಪಡಿಸಿ ಶಾಂತಿಯಾಗಿರುವುದು ಈಗ ಮಾತ್ರ ಅದೂ ಸಾವಿನಲ್ಲಿಯೇ?
ಪುನರ್ಜನ್ಮದ ಕಲ್ಪನೆಯ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ಶ್ರೀದೇವಿ ವಿಷಯದಲ್ಲಿ ಅದು ನಿಜವಾಗಲಿ ಎಂದು ಇಚ್ಛಿಸುತ್ತೇನೆ,, ಮತ್ತೆ ಹುಟ್ಟಿ ಬನ್ನಿ ಶ್ರೀದೇವಿ. ಇನ್ನೊಂದು ಅವಕಾಶ ನಮಗೆ ಕೊಡಿ. ಆಕೆಯ ಕುರಿತು ಈ ರೀತಿ ಎಷ್ಟೇ ಬರೆದರೂ, ನನ್ನ ಕಣ್ಣೀರನ್ನು ಮಾತ್ರ ನಿಲ್ಲಿಸಲು ಸಾಧ್ಯವಿಲ್ಲ…
-RGV
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
