fbpx
ಸಮಾಚಾರ

ಹ್ಯಾರಿಸ್ ಹಾಗೂ ಸಿಎಂ ಸಿದ್ದು ಅವರ ಒತ್ತಡಕ್ಕೆ ಮಣಿದು ವಿದ್ವತ್ ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಮುಂದಾದ ವೈದ್ಯರು.

ಗೂಂಡಾ ನಲಪಾಡ್​ನಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ವಿದ್ವತ್ ನನ್ನು ತೀವ್ರ ನಿಗಾ ಘಟಕದಿಂದ ಆಸ್ಪತ್ರೆಯ ಸಾಮಾನ್ಯ ವಾರ್ಡ್’ಗೆ ಶಿಫ್ಟ್ ಮಾಡಲಾಗಿದೆ.. ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿದ್ವತ್’ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಮಲ್ಯ ಆಸ್ಪತ್ರೆಯ ವೈದ್ಯರುಗಳು ಮುಂದಾಗಿದ್ದಾರೆ. ಕಳೆದ ಎರಡು ಮೂರು ದಿನಗಳಿಗೆ ಹೋಲಿಸಿದರೆ ವಿದ್ವತ್ ದೇಹದ ಸ್ಥಿತಿ ಸುಧಾರಿಸಿದ್ದು ದೇಹದ 90%ರಷ್ಟು ಊತ ಕಡಿಮೆಯಾಗಿದ್ದು ಈಗ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

 

 

ವೈದ್ಯರ  ಈ ಕೆಲಸದ ಹಿಂದೆ ಮಹಮದ್ ನಲಪಾಡ್‌ಗೆ ಜಾಮೀನು ಸಿಗಲಿ ಎಂಬ ಉದ್ದೇಶದಿಂದ ವೈದ್ಯರ ಮೇಲೆ ರಾಜಕೀಯ ಒತ್ತಡ ಹೇರಲಾಗಿದೆಯೇ ಎಂಬ ಘನ ಗಂಭೀರ ಆರೋಪಗಳು ಕೇಳಿಬಂದಿತ್ತು. ಸಿಎಂ ಸಿದ್ದರಾಮಯ್ಯನವರ ಕುಮ್ಮಕ್ಕಿನಿಂದ ಮಲ್ಯ ಆಸ್ಪತ್ರೆಯ ವೈದ್ಯರಿಗೆ ಒತ್ತಡ ಹೇರಿರುವುದು ಸಾಬೀತಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಆಡಿಯೋವೊಂದು ಹೊರಬಿದ್ದಿದ್ದು ಸ್ವತಃ ಹ್ಯಾರಿಸ್ ಅವರೇ ವೈದ್ಯರಿಗೆ ಒತ್ತಡ ಹೇರಿ ವಿದ್ವತ್ ನನ್ನು ತೀರ್ವ ನಿಗಾ ಘಟಕದಿಂದ ಸಾಮಾನ್ಯ ವಾರ್ಡ್’ಗೆ ಶಿಫ್ಟ್ ಮಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ.. ಹ್ಯಾರಿಸ್ ಅವರ ಈ ಕೃತ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕು ಇದೇ ಎಂಬ ಘನ ಗಂಭೀರ ಆರೋಪಗಳು ಕೇಳಿಬರುತ್ತಿವೆ.

 

ಆಡಿಯೋವನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ👇👇👇👇👇

 

 

ಹಲ್ಲೆಗೊಳಗಾಗಿದ್ದ ವಿದ್ವತ್ ಹೇಳಿಕೆ ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಯುಬಿ ಸಿಟಿಯಲ್ಲಿನ ಫರ್ಜಿ ಕೆಫೆ ಘಟನೆ ಬಗ್ಗೆ ವಿದ್ವತ್​ ನೀಡುವ ಹೇಳಿಕೆ ಶಾಸಕ ಹ್ಯಾರಿಸ್​ ಪುತ್ರ ನಲಪಾಡ್​ ಭವಿಷ್ಯ ನಿರ್ಧರಿಸಿದೆ. ಹೀಗಾಗಿ, ವಿದ್ವತ್ ಐಸಿಯುನಲ್ಲಿ ಇದ್ದಷ್ಟು ದಿನಗಳ ಕಾಲ ತಮ್ಮ ಮಗನಿಗೆ ಜಾಮೀನು ಸಿಗೋದಿಲ್ಲ ಎಂದು ಶಾಸಕ ವೈದ್ಯರ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ವಿದ್ವತ್ ಐಸಿಯುನಲ್ಲೆ ಇದ್ದರೆ ಆರೋಪಿ ಸ್ಥಾನದಲ್ಲಿರುವ ನಲಪಾಡ್‌ಗೆ ಜಾಮೀನು ಸಿಗುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಹಲ್ಲೆಗೊಳಗಾದ ಸಂತ್ರಸ್ತನ ಆರೋಗ್ಯದ ಸ್ಥಿತಿಯನ್ನು ಕೋರ್ಟ್ ಪರಿಗಣಿಸುತ್ತದೆ. ಹಾಗಾಗಿ, ವಿದ್ವತ್‌ನನ್ನು ಐಸಿಯುದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿದರೆ ಆತನ ಆರೋಗ್ಯ ಸ್ಥಿತಿ ಸುಧಾರಿಸಿದೆ, ಆತಂಕವೇನೂ ಇಲ್ಲ ಎಂದು ಕೋರ್ಟ್‌ನಲ್ಲಿ ನಳಪಾದ್ ಪರ ವಕೀಲರು ವಾದ ಮಾಡಬಹುದು.. ಈ ಮೂಲಕ ಜಾಮೀನು ಪಡೆಯಬಹುದು ಎಂಬ ಹುನ್ನಾರ ಇದರ ಹಿಂದೆ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಏನಿದು ಘಟನೆ:
ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಹುಕೋಟಿ ಉದ್ಯಮಿ ಯುವಕನೊಬ್ಬನ ಮೇಲೆ ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಆತನ ಹತ್ತಕ್ಕೂ ಹೆಚ್ಚು ಸ್ನೇಹಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಲಾಗಿದೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ವಿದ್ವತ್ ಎಂಬ ವಿದ್ಯಾರ್ಥಿ ಇದೀಗ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ವತ್ನ ಸಹಾಯಕ್ಕೆ ಬಂದ ಸಹೋದರ ಸಾತ್ವಿಕ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ಯುಬಿಸಿಟಿ ರೆಸ್ಟೋರೆಂಟ್ ನಲ್ಲಿ ಶನಿವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಊಟ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವತ್ ಎಂಬ ವಿದ್ಯಾರ್ಥಿಯ ಮೇಲೆ ಮಹಮ್ಮದ್ ಹಲ್ಲೆ ನಡೆಸಿದ್ದಾರೆ. ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top