fbpx
ಐಪಿಎಲ್

ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆ ನಿಯಮವನ್ನು ಅಳವಡಿಸಲು ಮುಂದಾದ ಬಿಸಿಸಿಐ.

ಐಪಿಎಲ್ ಇತಿಹಾಸದಲ್ಲಿಯೇ ಬಿಸಿಸಿಐ ಮಹತ್ತರ ಬದಲಾವಣೆಯೊಂದು ಮಾಡಲು ಮುಂದಾಗಿದ್ದು ಏಪ್ರಿಲ್ ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ 11ನೇ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್​ಎಸ್) ಅಳವಡಿಸಲು ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ., ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಡಿಆರ್​ಎಸ್ ನಿಯಮವನ್ನು ಜಾರಿ ತರುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಸಿಸಿಐ, ಇದೀಗ ತನ್ನದೇ ಪ್ರತಿಷ್ಠಿತ ಲೀಗ್​ನಲ್ಲಿ ಇದೇ ನಿಯಮವನ್ನು ಜಾರಿಗೆ ಮುಂದಾಗಿರುವುದು ಆಶ್ಚರ್ಯವನ್ನುಂಟುಮಾಡಿದೆ.

 

 

2016ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯೊಂದರಲ್ಲಿ ಈ ನಿಯಮ ಜಾರಿಗೆ ಒಪ್ಪಿಗೆ ಸೂಚಿಸಿತ್ತು. ಅನಂತರ ಪ್ರತಿ ಸರಣಿಯಲ್ಲೂ ಈ ನಿಯಮವನ್ನು ಅಳವಡಿಸಿಕೊಂಡಿತ್ತು. ಐಪಿಎಲ್’ ಅನ್ನು ಉನ್ನತ ಗುಣಮಟ್ಟದಲ್ಲಿ ಆಯೋಜಿಸುತ್ತಿರುವುದರಿಂದ ಲೀಗ್’ನ ಆಕರ್ಷಣೆಯನ್ನು ಹೆಚ್ಚಿಸುವ ಹಾಗೂ ತಂಡಗಳಿಗೆ ಅನುಕೂಲ ಮಾಡಿಕೊಳ್ಳುವ ಸಲುವಾಗಿ ಬಿಸಿಸಿಐ ಡಿಆರ್‌ಎಸ್ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

 

 

ಐಪಿಎಲ್ ನಲ್ಲಿ ಡಿಆರ್​ಎಸ್ ನಿಯಮವನ್ನು ಸಂಭಂದಿಸಿದಂತೆ 10 ದೇಶೀಯ ಅಂಪೈರ್​ಗಳಿಗೆ ವಿಶಾಖಪಟ್ಟಣದಲ್ಲಿ ತರಭೇತಿಯನ್ನು ನೀಡಲಾಗಿದ್ದು ಡಿಆರ್​ಎಸ್ ತಂತ್ರಜ್ಞಾನದ ಈ ವೇಳೆ ಡಿಆರ್‌ಎಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top