fbpx
ಕ್ರೀಡೆ

ಶೂಟಿಂಗ್’ನಲ್ಲಿ ವಿಶ್ವದಾಖಲೆ ಬರೆದ ಭಾರತದ ಶಹಝಾರ್

ಭಾರತದ ಶೂಟರ್ ಶಹಝಾರ್ ರಿಝ್ವಿ ತಮ್ಮ ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್ನಲ್ಲೇ ವಿಶ್ವ ದಾಖಲೆಯೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶ ಹೆಮ್ಮೆಪಡುವಂತೆ ಮಾಡಿದರು.

 

Image result for shahazar rizvi

 

ಮೆಕ್ಸಿಕೋದ ಗ್ವಾದಲಜಾರದಲ್ಲಿ ನಡೆಯುತ್ತಿರುವ ವಿಶ್ವಕಪ್ ಕೂಟದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ನಲ್ಲಿ ರಿಝ್ವಿ ವಿಶ್ವದಾಖಲೆಯ 242.3 ಅಂಕಗಳನ್ನು ಗಳಿಸಿ ಜರ್ಮನಿಯ ಕ್ರಿಸ್ಟಿಯನ್ ರೀಟ್ಸ್ (239.7 ಅಂಕ) ಅವರನ್ನು ಸೋಲಿಸಿದರು. ಭಾರತದ ಜಿತು ರೈ 219 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಕೂಟದಲ್ಲಿ ಮೂವರು ಭಾರತೀಯರು ಫೈನಲ್ ತಲುಪಿದ್ದರು. ಭಾರತದ ಓಂಪ್ರಕಾಶ್ ಮಿಥರ್ವಾಲ್ 198.4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

 

Image result for shahzar rizvi

 

ಇದಾದ ಬಳಿಕ ಭಾರತದ ಪದಕ ಪಟ್ಟಿಗೆ ಮೆಹೂಲಿ ಘೋಷ್ ಮತ್ತೊಂದು ಪದಕ ಗೆದ್ದುಕೊಟ್ಟರು. 228.4 ಅಂಕಗಳೊಂದಿಗೆ ವಿಶ್ವ ಜ್ಯೂನಿಯರ್ ದಾಖಲೆಯನ್ನು ಸ್ಥಾಪಿಸಿ, ಮಹಿಳಾ ವಿಭಾಗದ 10 ಮೀಟರ್ ರೈಫಲ್ ಸ್ಪರ್ಧೆಯ ಕಂಚಿನ ಪದಕ ಗೆದ್ದುಕೊಂಡರು. ಕೂಟದ ಆರಂಭದ ದಿನವೇ ಭಾರತ ಒಂದು ಚಿನ್ನ ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿತು.

 

Image result for shahzar rizvi

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top