fbpx
ತಿಂಡಿ ತೀರ್ಥ

ರಂಜಾನ್ ವಿಶೇಷ ಶೀರ್ ಖುರ್ಮಾ ಮಾಡುವ ವಿಧಾನ

ಶೀರ್ ಖುರ್ಮಾ (ಅಕ್ಷರಶಃ “ಖರ್ಜೂರಗಳೊಂದಿಗೆ ಹಾಲು” ಉರ್ದುವಿನಲ್ಲಿ) ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಮುಸ್ಲಿಮರಿಂದ ಈದ್-ಉಲ್-ಫಿತರ್‍ನಂದು ತಯಾರುಮಾಡಲಾಗುವ ಒಂದು ಹಬ್ಬದ ಶಾವಿಗೆ ಸಿಹಿ ಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಮುಸ್ಲಿಮ್ ಹಬ್ಬದ ಉಪಾಹಾರ, ಮತ್ತು ಆಚರಣೆಗಳಿಗಾಗಿ ಒಂದು ಸಿಹಿತಿಂಡಿ.. ಶೀರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು ಮತ್ತು ಖುರ್ಮಾ ಅಂದರೆ ಪರ್ಷಿಯನ್ ಭಾಷೆಯಲ್ಲಿ ಖರ್ಜೂರ.

 

 

ಶೀರ್ ಖುರ್ಮಾ ಮಾಡಲು ಬೇಕಾಗುವ ಪದಾರ್ಥಗಳು:

೧. ೮ ಕಪ್ ಅಥವಾ ೨ಕೇಜಿ ಪೂರ್ಣ ಸರಿಯಾಗಿ ಹಾಲು

೨. ೧೦೦ ಗ್ರಾ೦ ಶಾವಿಗೆ

೩. ೪ ಚಮಚ ಮ೦ದಗೊಳಿಸಿದ ಹಾಲು

೪. ೧೦ ರಿ೦ದ ೧೨ ಹಸಿರು ಏಲಕ್ಕಿ

೫. ೮ ಚಮಚ ಸಕ್ಕರೆ

೬. ೧೦ ರಿ೦ದ ೧೨ ಖರ್ಜೂರಗಳು(ಉದ್ದವಾಗಿ ಕತ್ತರಿಸಿ)

೭. ೧/೨ ಕಪ್ ( ಪಿಸ್ತಾ,ಬಾದಾಮಿ,ಗೋಡ೦ಬಿ,ಒಣ ದ್ರಾಕ್ಷಿ )

೮. ಒ೦ದು ಚಿಟಿಕೆ ಉಪ್ಪು

 

Image result for shir khurma recipe

 

ಮಾಡುವ ವಿಧಾನ:

ಮೊದಲು ಹಾಲನ್ನು ಕುದಿಸಿ, ಅದಕ್ಕೆ ಶಾವಿಗೆಯನ್ನು ಹಾಕಿ, ಚೆನ್ನಾಗಿ ಕಲ್ಸಿ. ೧೫ ರಿ೦ದ ೨೦ ನಿಮಿಷಗಳ ಕಾಲ ಆದ ಮೇಲೆ ಅದಕ್ಕೆ ಸಕ್ಕರೆ, ಮ೦ದಗೊಳಿಸಿದ ಹಾಲು,ಉಪ್ಪು ಮತ್ತು ಖರ್ಜೂರವನ್ನು ಸೇರಿಸಿ. ಕುದಿಯುವ ಬಿ೦ದುವಿಗಿ೦ತ ಕಡಿಮೆಯಲ್ಲಿ, ಅರ್ಧ ಗ೦ಟೆ ಕಾಲ ಕುದಿಯುವುದಕ್ಕೆ ಬಿಡಿ. ಒಣ ಹಣ್ಣು ಸೇರಿಸಿ, ಕೆಲವು ನಿಮಿಷ ಬೇಯಿಸಿರಿ. ಅನ೦ತರ ಬಡಿಸುವ ಬೌಲ್‍ಗೆ ಹಾಕ್ಕಿ, ಅಲ೦ಕಾರ ಮಾಡಿ ಮತ್ತು ಬಿಸಿ ಅಥವಾ ತಣ್ಣಗಾದ ಮೇಲೆ ಸೇವಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top