fbpx
ಆರೋಗ್ಯ

ಹಿಂಗು ಬರಿ ಅಡುಗೆ ರುಚಿಗೆ ಮಾತ್ರ ಅಲ್ಲ ದಿನ ಆಹಾರದಲ್ಲಿ ತಿನ್ನೋದ್ರಿಂದ ಈ ಸೂಪರ್ ಲಾಭಗಳು ಪಡ್ಕೊಬಹುದು..

ಹಿಂಗು ಬರಿ ಅಡುಗೆ ರುಚಿಗೆ ಮಾತ್ರ ಅಲ್ಲ ದಿನ ಆಹಾರದಲ್ಲಿ ತಿನ್ನೋದ್ರಿಂದ ಈ ಸೂಪರ್ ಲಾಭಗಳು ಪಡ್ಕೊಬಹುದು..

ಹಿಂಗು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ವಸ್ತುವಾಗಿದೆ ಕೆಲವರ ಮನೆಯಲ್ಲಂತೂ ಹಿಂಗು ಇಲ್ಲದಿದ್ದರೆ ಅವರ ಅಡುಗೆಯೇ ಪರಿಪೂರ್ಣವಾಗುವುದಿಲ್ಲ.

ಹಿಂಗು ಆರೋಗ್ಯದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಸುವಾಸನೆಯನ್ನು ನೀಡುತ್ತದೆ ಅಷ್ಟೇ ಅಲ್ಲದೆ ಆಹಾರ ಪದಾರ್ಥಗಳನ್ನು ಹೆಚ್ಚಿನ ಕಾಲ ಶೇಖರಣೆ ಮಾಡಲು ಬಹಳ ಉಪಯೋಗಕಾರಿ ಹಿಂಗನ್ನು ಅನೇಕ ಸಾಂಬಾರು ಪದಾರ್ಥಗಳು ಹಾಗೂ ಮಸಾಲೆ ಪದಾರ್ಥಗಳು ಇವುಗಳಿಂದ ಮಾಡಲ್ಪಡುತ್ತದೆ .

ಇಂದು ಕೇವಲ ಅಡುಗೆಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬೇಕು ಹೇಗೆ ಅಂತೀರಾ ಹಾಗಾದರೆ ಮುಂದೆ ನೋಡಿ .

ಹೊಟ್ಟೆಯ ಬಾಧೆಗಳು ನಿವಾರಣೆ

ಅಸಿಡಿಟಿ ,ಅಜೀರ್ಣ, ಹೊಟ್ಟೆಯ ಸಮಸ್ಯೆ ,ಹೊಟ್ಟೆಯಲ್ಲಿ ಗ್ಯಾಸ್ , ಹೊಟ್ಟೆಯಲ್ಲಿ ಜಂತು ಹುಳುಗಳು ಹೀಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಲು ಉತ್ತಮವಾದ ಆಂಟಿ ಆಕ್ಸಿಡೆಂಟ್, ಆಂಟಿ ಫ್ಲಾಟುಲೇಟ್ ಅಂಶಗಳನ್ನು ಹೊಂದಿದೆ

ಅರ್ಧ ಲೋಟ ನೀರಿಗೆ ಕಾಲು ಚಮಚ ಹಿಂಗನ್ನು ಬೆರೆಸಿ ಕುಡಿದರೆ ಹೊಟ್ಟೆಯ ಬಾಧೆಗಳು ನಿವಾರಣೆಯಾಗುತ್ತದೆ ಅಥವಾ ದಿನನಿತ್ಯದ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಹಿಂಗನ್ನು ಬೆರೆಸಿ ಆಹಾರ ಸೇವನೆ ಮಾಡಿ .

ಶ್ವಾಸಕೋಶದ ತೊಂದರೆಗಳನ್ನು ನಿವಾರಣೆ ಮಾಡುತ್ತದೆ

ಶ್ವಾಸಕೋಶದ ತೊಂದರೆಗಳಾದ ಅಸ್ತಮಾ , ಬ್ರಾಂಕಲೈಟಿಸ್ , ಕೆಮ್ಮು, ನೆಗಡಿ, ನಾಯಿ ಕೆಮ್ಮು ,ಕಫ ಈ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ .
ಹಿಂಗು ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಎದೆಯ ಭಾಗದಲ್ಲಿ ಹಚ್ಚಿ .

ಅರ್ಧ ಚಮಚ ಹಿಂಗು ಪುಡಿ ಮತ್ತು ಅರ್ಧ ಚಮಚ ಹಸಿ ಶುಂಠಿ ಪುಡಿಯನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ದಿನಕ್ಕೆ ಒಂದು ಬಾರಿ ಸೇವಿಸುತ್ತಿದ್ದರೆ ಶೀತ ನೆಗಡಿ ಕೆಮ್ಮಿನ ಸಮಸ್ಯೆ ಮಾಯವಾಗುತ್ತದೆ .

ಋತುಚಕ್ರದ ಹೊಟ್ಟೆ ನೋವು

ಒಂದು ಲೋಟ ಮಜ್ಜಿಗೆಗೆ ಒಂದು ಚಿಟಿಕೆ ಹಿಂಗು ಹಾಗೂ ಅರ್ಧ ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಕುಡಿದರೆ ಋತುಚಕ್ರದ ಹೊಟ್ಟೆ ನೋವು ಮಾಯವಾಗುತ್ತದೆ

ತಲೆನೋವು ಸಮಸ್ಯೆಗೆ ಪರಿಹಾರ

ಇನ್ನು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯಕ .

ಒಂದು ಲೋಟ ನೀರನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ಕಾಲು ಚಮಚ ಹಿಂಗು ಪುಡಿಯನ್ನು ಮಿಶ್ರಣ ಮಾಡಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ

ಹಲ್ಲು ನೋವಿನ ಸಮಸ್ಯೆ

ಹಿಂಗನ್ನು ನೋವುತ್ತಿರುವ ಹಲ್ಲಿನ ಮೇಲೆ ಇಟ್ಟು ಹತ್ತು ನಿಮಿಷ ಹಾಗೇ ಬಿಟ್ಟು ಬಿಡಬೇಕು ಇದರಿಂದ ಹಲ್ಲು ನೋವಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ ಅಥವಾ ಒಂದು ಲೋಟ ನೀರಿನಲ್ಲಿ ಎರಡು ಲವಂಗವನ್ನು ಹಾಕಿ ಸ್ವಲ್ಪ ಹಿಂಗನ್ನು ಬೆರೆಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿ ಬೇಕು .

ಕಿವಿ ನೋವಿನ ಸಮಸ್ಯೆಗೆ

ಅರ್ಧ ಚಮಚ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಇಂಗನ್ನು ಬೆರೆಸಿ ನಂತರ ಕಿವಿಯ ಒಳ್ಳೆಯ ಮೇಲೆ ಹಾಕುವುದರಿಂದ ಕಿವಿ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ .

ಕ್ಯಾನ್ಸರ್ ತಡೆಗಟ್ಟುತ್ತದೆ

ಹಿಂಗನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಕಾರಕ ಗಳ ಮೇಲೆ ದಾಳಿ ಮಾಡಿ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ .

ಬಂಜೆತನದ ಸಮಸ್ಯೆ ನಿವಾರಣೆ

ದಿನಕ್ಕೆ ಕಾಲು ಚಮಚದಂತೆ ಎರಡರಿಂದ ಮೂರು ತಿಂಗಳು ಹಿಂಗನ್ನು ಸೇವಿಸುತ್ತಾ ಬಂದರೆ ಬಂಜೆತನದ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ನಿಮ್ಮ ಆಹಾರದಲ್ಲಿ ಹಿಂಗನ್ನು ಸೇರಿಸುವುದನ್ನು ಮರೆಯಬೇಡಿ

ಕೀಟಗಳ ಕಡಿತ

ಕೀಟ, ಜೇನು ಕಡಿತ ಇಂತಹ ಸಮಸ್ಯೆಗಳನ್ನು ತಡೆಯಲು ಹಿಂಗನ್ನು ನೀರಿನಲ್ಲಿ ಪೇಸ್ಟ್ ರೀತಿ ತಯಾರಿಸಿ ಹಾನಿಯಾದ ಜಾಗಕ್ಕೆ ಹಚ್ಚಿಕೊಳ್ಳಿ ,ಬ್ಯಾಕ್ಟೀರಿಯಾ ವಿರೋಧಿ ಹಾಗೂ ವೈರಸ್ ವಿರೋಧಿ ಅಂಶಗಳು ಈ ಸಮಸ್ಯೆಗಳನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top