fbpx
ಕ್ರಿಕೆಟ್

ಕ್ರಿಕೆಟ್ ಕಾಶಿಯಲ್ಲಿ ಮುಗ್ಗರಿಸಿದ ಕೊಹ್ಲಿ ಬಾಯ್ಸ್- ಇಂಗ್ಲೆಂಡ್’ಗೆ ಭರ್ಜರಿ ಜಯ.

ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಂಗ್ಲರ ಪಡೆ ಟೀಂ ಇಂಡಿಯಾದ ವಿರುದ್ಧ 86 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಮೊದಲ ಪದ್ಯದಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಆಂಗ್ಲರೆದುರು ಮಂಡಿಯೂರಿತು.. ಟೀಮ್ ಇಂಡಿಯಾವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಜುಲೈ 17 ರಂದು ನಡೆಯುವ ಅಂತಿಮ ಪಂದ್ಯ ನಿರ್ಣಾಯಕವಾಗಿ ಪರಿಣಮಿಸಿದ್ದು ಅಂದು ಗೆಲ್ಲುವ ತಂಡಕ್ಕೆ ಸರಣಿ ಒಲಿಯಲಿದೆ.

 

 

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 322 ರನ್​ ಗಳಿಸುವ ಮೂಲಕ ಭಾರತಕ್ಕೆ ಬೃಹತ್​ ಮೊತ್ತದ ಗುರಿಯನ್ನು ನೀಡಿತು. ಇಂಗ್ಲೆಂಡ್ ನೀಡಿದ್ದ 323ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ರನ್ 236ರನ್‌ಗಳಿಗೆ ಆಲೌಟ್ ಆಗೋ ಮೂಲಕ ಸೋಲೊಪ್ಪಿಕೊಂಡಿತು.. ಇಂಗ್ಲೆಂಡ್ ತಂಡದ ಬಿಗಿ ಬೌಲಿಂಗ್ ಪ್ರದರ್ಶನದ ಮುಂದೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಕೊಹ್ಲಿ ಬಾಯ್ಸ್ ತಂಡಕ್ಕೆ ಕೈಕೊಟ್ಟರು.

ಸಂಕ್ಷಿಪ್ತ ಸ್ಕೊರ್:
ಇಂಗ್ಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟ, 322 ರನ್‌

ಜೆಇ ರೂಟ್‌– 113,
ಮಾರ್ಗನ್‌ –53,
ಡಿಜೆ ವಿಲ್ಲೆ–50,
ಜಾನಿ ಬೈಸ್ಟ್ರೋವ್‌–38 ಹಾಗೂ ಜೇಸನ್‌ ರಾಯ್‌–40

ಭಾರತದ ಪರ ಬೌಲಿಂಗ್: ಕುಲದೀಪ್‌ ಯಾದವ್‌–3/68 ;
ಉಮೇಶ್‌ ಯಾದವ್‌–1/63;
ಚಾಹಲ್‌–1/43 ;
ಹಾರ್ದಿಕ್‌ ಪಾಂಡ್ಯ– 1/70

ಭಾರತ 50 ಓವರುಗಳಲ್ಲಿ 236 ರನ್ ಗಳಿಗೆ ಆಲೌಟ್

ಶಿಖರ್ ಧವನ್ 36,
ವಿರಾಟ್ ಕೊಹ್ಲಿ 45,
ಸುರೇಶ್ ರೈನಾ 46,
ಎಂಎಸ್ ಧೋನಿ 37

ಇಂಗ್ಲಂಡ್:
ಪ್ಲುಂಕೇಟ್ 46/4
ರಶೀದ್ 38/2
ವಿಲ್ಲೆ 48/2

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top